Asianet Suvarna News Asianet Suvarna News

ಈ ರಾಶಿಗಳ ಮಕ್ಕಳಿದ್ದರೆ ವೃದ್ಧಾಪ್ಯ ಜೀವನದಲ್ಲಿ ನೆಮ್ಮದಿಗೆ ಕೊರತೆಯಿಲ್ಲ

ಕೆಲ ಮಕ್ಕಳು ಪಾಲಕರ ಪವರ್‌ ಹೌಸ್‌ ಆಗಿರುತ್ತಾರೆ. ವಯಸ್ಸಾದಾಗ ಇಂತಹ ಮಕ್ಕಳ ನೆರವಿದ್ದರೆ ಪಾಲಕರ ಜೀವನ ಅದೆಷ್ಟೋ ನೆಮ್ಮದಿಯಿಂದ ಕೂಡಿರುತ್ತದೆ. ಕೆಲವೇ ರಾಶಿಗಳ ಜನರಲ್ಲಿ ವಯಸ್ಸಾದ ಪಾಲಕರನ್ನು ಕಾಳಜಿಯಿಂದ ನೋಡಿಕೊಳ್ಳುವ ಗುಣ ಕಂಡುಬರುತ್ತದೆ. 
 

These zodiac signs are powerhouse for their parents
Author
First Published May 26, 2023, 6:36 PM IST

ಬಾಲ್ಯದಿಂದಲೂ ಕೆಲವು ಜನ ಕುಟುಂಬದೊಂದಿಗೆ ಹೆಚ್ಚು ಬಾಂಧವ್ಯ ಹೊಂದಿರುತ್ತಾರೆ. ದೊಡ್ಡವರಾದ ಬಳಿಕ ಶಿಕ್ಷಣ, ಉದ್ಯೋಗ ಇತ್ಯಾದಿ ಕಾರಣಗಳಿಂದ ಅವರು ದೈಹಿಕವಾಗಿ ದೂರವಾದರೂ ಕುಟುಂಬದೊಂದಿಗಿನ ಅವರ ಬಾಂಧವ್ಯ ಹಾಗೆಯೇ ಮುಂದುವರಿಯುತ್ತದೆ. ಈ ಜನ ಕುಟುಂಬಕ್ಕೆ ಸಾಕಷ್ಟು ನೆರವು ನೀಡುತ್ತಾರೆ. ತಂದೆ-ತಾಯಿಯರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಅವರ ಎಲ್ಲ ರೀತಿಯ ಅಗತ್ಯಕ್ಕೆ ಒದಗುತ್ತಾರೆ. ವಯಸ್ಸಾದ ಪಾಲಕರು ಕಂಫರ್ಟ್‌ ಆಗಿ ಬದುಕಲು ಏನು ಬೇಕೋ ಆ ವ್ಯವಸ್ಥೆ ಮಾಡುತ್ತಾರೆ. ಸಾಧ್ಯವಾದರೆ ತಮ್ಮೊಂದಿಗೇ ಅವರನ್ನು ಇರಿಸಿಕೊಳ್ಳುತ್ತಾರೆ. ಅವರ ಅಗತ್ಯಗಳನ್ನು ಗಮನಿಸಿ ಸಹಕಾರ ನೀಡುತ್ತಾರೆ. ಪಾಲಕರಿಗಾಗಿ ತಮ್ಮ ಸಮಯ, ಹಣವನ್ನು ಖರ್ಚು ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಹೀಗಾಗಿ, ಪಾಲಕರಿಗೆ ಅವರು ಪವರ್‌ ಹೌಸ್‌ ನಂತೆ ಭಾಸವಾಗುತ್ತಾರೆ. ಪಾಲಕರ ದೈನಂದಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಇವರು, ಪಾಲಕರು ಸ್ವತಂತ್ರವಾಗಿ ಬದುಕಲು ಏನು ಬೇಕೋ ಅವುಗಳನ್ನು ಒದಗಿಸುತ್ತಾರೆ. ಭಾವನಾತ್ಮಕವಾಗಿ ಅವರೊಂದಿಗೆ ಇದ್ದು ಧೈರ್ಯ ತುಂಬುತ್ತಾರೆ. ತಾಯಿ ಅಥವಾ ತಂದೆಗೆ ನೆರವಾಗುವ ಮೂಲಕ ಅವರಲ್ಲಿ ನೆಮ್ಮದಿಯ ಭಾವ ಮೂಡಿಸುತ್ತಾರೆ. ಇಂತಹ ಜನರನ್ನು ಮುಖ್ಯವಾಗಿ ನಾಲ್ಕು ರಾಶಿಗಳಲ್ಲಿ ಕಾಣಬಹುದು.

•    ಮೇಷ (Aries)
ಅಗ್ನಿ (Fire) ತತ್ವದ ಈ ಜನ ಪಾಲಕರ (Parents) ಬಗ್ಗೆ ಅತಿಯಾದ ವ್ಯಾಮೋಹ ಹೊಂದಿರುತ್ತಾರೆ. ಅನ್ವೇಷಣಾತ್ಮಕ (Inventive) ಬುದ್ಧಿಯ ಇವರು, ತಮ್ಮ ಅಮ್ಮನನ್ನು (Mom) ಸೂಪರ್‌ ವುಮನ್‌ (Super Woman) ಎನ್ನುವಂತೆ ಕಾಣುತ್ತಾರೆ. ತಂದೆಯ ಬಗೆಗೂ ಗೌರವ (Respect) ಹೊಂದಿರುತ್ತಾರೆ. ದೊಡ್ಡವರಾದ ಬಳಿಕ ಇವರು ಕುಟುಂಬದೊಂದಿಗೆ (Family) ಪ್ರವಾಸ ಮಾಡುತ್ತಾರೆ. ವೀಕೆಂಡ್‌ ಪ್ರವಾಸಗಳಿಗೆ ಪಾಲಕರನ್ನು ಕರೆದೊಯ್ಯುವಲ್ಲಿ ಸಂತಸ ಕಾಣುತ್ತಾರೆ. ಪಾಲಕರು ಖುಷಿಯಾಗಿರಲು ಸಾಕಷ್ಟು ಬೆಂಬಲ (Support) ನೀಡುತ್ತಾರೆ ಹಾಗೂ ಅವರ ಬಯಕೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪಾಲಕರ ಅಗತ್ಯ (Needs) ಹಾಗೂ ಮಿತಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ಮೂಲಕ ಅವರಿಗೆ ಎಷ್ಟು ಸಹಾಯ (Help) ಬೇಕು ಎನ್ನುವುದನ್ನು ಖಚಿತವಾಗಿ ನಿರ್ಧರಿಸಿಕೊಳ್ಳುತ್ತಾರೆ. ಪಾಲಕರ ಹೊರೆಯನ್ನು ಕಡಿಮೆಗೊಳಿಸಿ ಅವರು ಆರಾಮಾಗಿರುವಂತೆ ಮಾಡುತ್ತಾರೆ.

Zodiac Traits: ನಿಮ್ಮ ರಾಶಿ ಎಂದಿಗೂ ಮಾಡದ ಕೆಲಸವಿದು! ಸರಿನಾ ನೋಡಿಕೊಳ್ಳಿ..

•    ಮೀನ (Piesces)
ಮೀನ ರಾಶಿಯ ಜನ ಬಾಲ್ಯದಲ್ಲಿದ್ದಂತೆ ವಯಸ್ಕರಾದ ಬಳಿಕ ಇರುವುದಿಲ್ಲ. ಬಾಲ್ಯದಲ್ಲಿ (Childhood) ಸೂಕ್ಷ್ಮ, ಅಸುರಕ್ಷಿತ ಭಾವನೆ ಅನುಭವಿಸುವ ಇವರು ದೊಡ್ಡವರಾದ ನಂತರ ದೃಢವಾದ ವ್ಯಕ್ತಿಗಳಾಗಬಲ್ಲರು. ಇತರ ಜನರನ್ನು ಅರ್ಥ ಮಾಡಿಕೊಳ್ಳಬಲ್ಲರು. ಇವರು ತಮ್ಮ ಪಾಲಕರ ಅತ್ಯುತ್ತಮ ಸ್ನೇಹಿತರಾಗುತ್ತಾರೆ. ಪಾಲಕರಿಗೆ ವಯಸ್ಸಾಗುವುದನ್ನು ಫೀಲ್‌ ಮಾಡಿಕೊಳ್ಳುತ್ತಾರೆ. ಅವರು ಹೊರಗೆ ಹೋಗುವುದಕ್ಕಿಂತ ಹೆಚ್ಚು ಮನೆಯಲ್ಲೇ ಸುರಕ್ಷಿತವಾಗಿ (Safe) ಇರಲೆಂದು ಬಯಸುತ್ತಾರೆ. ತಮ್ಮ ಪಾಲಕರು ಯಾವ ವಿಚಾರಕ್ಕೆ ಹೆಚ್ಚು ಕಷ್ಟಪಡುತ್ತಾರೆ ಎನ್ನುವುದನ್ನು ತಮ್ಮ ಭಾವನಾತ್ಮಕ (Emotional) ಅರಿವು ಮತ್ತು ದೃಷ್ಟಿಕೋನದ ಮೂಲಕ ತಿಳಿದುಕೊಳ್ಳುತ್ತಾರೆ. 

•    ವೃಶ್ಚಿಕ (Scorpio)
ವಯಸ್ಸಾದ ಪಾಲಕರ ಎಲ್ಲ ರೀತಿಯ ಬವಣೆಗಳನ್ನು ವೃಶ್ಚಿಕ ರಾಶಿಯವರು ಗಮನಿಸುತ್ತಾರೆ. ಆರೋಗ್ಯದಲ್ಲಿ (Health) ಏರುಪೇರು ಉಂಟಾಗುವುದು ಸೇರಿದಂತೆ ಹಲವು ರೀತಿಯಲ್ಲಿ ಅವರು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುವುದನ್ನು ಸಹ ಗ್ರಹಿಸುತ್ತಾರೆ. ಅವರಿಗೆ ಬೇಕಾದ ನೆರವು ನೀಡುತ್ತಾರೆ. ಜತೆಗೆ, ಈ ಕಾರ್ಯದಲ್ಲಿ ತಮ್ಮ ಒಡಹುಟ್ಟಿದವರ ನೆರವನ್ನೂ ಪಡೆದುಕೊಳ್ಳುತ್ತಾರೆ. ತಾವೊಬ್ಬರೇ ಅವರ ಜವಾಬ್ದಾರಿ ಹೊರಲು ಸಾಧ್ಯವಿಲ್ಲ ಎಂದು ತಿಳಿದು ಸಹೋದರಿಯರು, ಸಹೋದರರನ್ನೂ ಈ ಕೆಲಸದಲ್ಲಿ ಭಾಗಿಯಾಗುವಂತೆ ಮಾಡುತ್ತಾರೆ. ಪಾಲಕರ ಹಣಕಾಸು (Financial) ಅಗತ್ಯದ ಬಗ್ಗೆ ಕುಟುಂಬದಲ್ಲಿ ಚರ್ಚಿಸುತ್ತಾರೆ.

ಥೂ, ನೀಚರು, ವಿಶ್ವಾಸಘಾತುಕ ದ್ರೋಹಿಗಳು ಈ ರಾಶಿಯವರು!

•    ಕನ್ಯಾ (Virgo)
ವಯಸ್ಸಾದ ಪಾಲಕರ ಬಗ್ಗೆ ಋಣಭಾರವಿರುವಂತೆ ಭಾವಿಸುತ್ತಾರೆ ಕನ್ಯಾ ರಾಶಿಯ ಜನ. ಅವರಿಗೆ ಉತ್ತೇಜನ (Encourage) ನೀಡುವುದು, ಏನಾದರೊಂದು ತಮಾಷೆ ಮಾತುಗಳ ಮೂಲಕ ಅವರ ಮುಖದಲ್ಲಿ ನಗು (Smile) ಮೂಡಿಸುವಂತೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಪಾಲಕರು ವಿವಿಧ ಹವ್ಯಾಸಗಳಲ್ಲಿ ತೊಡಗುವಂತೆ ಮಾಡಲು ನೆರವು ನೀಡುತ್ತಾರೆ. 

Follow Us:
Download App:
  • android
  • ios