ಹಿರಿಯರನ್ನು ಹೇಗೆ ಗೌರವಿಸಬೇಕು ಅಂಥ ಈ ರಾಶಿಯವರನ್ನು ನೋಡಿ ಕಲೀಬೇಕು!

ಹಿರಿಯರನ್ನು ಗೌರವಿಸುವ, ಅವರ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲಿಯೂ ಇರುವುದಿಲ್ಲ. ಆದರೆ ಈ ಕೆಲವು ರಾಶಿಯ ಜನರು ಮಾತ್ರ ಹಿರಿಯರನ್ನು ಗೌರವಿಸುವುದರಲ್ಲಿ ಎತ್ತಿದ ಕೈ.

These 4 zodiac signs know how to respect elders

ಯಾರೋ ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದರೆ, ಅದನ್ನು ನೋಡಿ ತಮ್ಮ ಪಾಡಿಗೆ ತಾವು ನಡೆದುಹೋಗುವ ಜನರ (People) ಮಧ್ಯದಲ್ಲಿ, ಕೆಲವರು ತಮ್ಮ ಸುತ್ತಮುತ್ತಲು ಇರುವ ಹಿರಿಯರಿಗೆ ಹೆಚ್ಚಿನ ಗೌರವವನ್ನು (Respect) ನೀಡುವುದರ ಜೊತೆಗೆ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಂಡಿರುತ್ತಾರೆ. ನಮ್ಮದೇ ವಯಸ್ಸಿನ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವುದು ಅಷ್ಟೇನೂ ಕಷ್ಟದ ವಿಚಾರವಲ್ಲ. ಆದರೆ ನಮ್ಮ ಹಿರಿಯರೊಂದಿಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಹೋಗುವುದು, ಅವರ ಮಾತುಗಳನ್ನು ಆಲಿಸುವುದು, ಅವರ ಕೆಲಸಗಳಿಗೆ ನೆರವಾಗುವುದು- ಇಂಥ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೆಲವೇ ಜನರಿಗೆ ಮಾತ್ರ ಸಾಧ್ಯ. ಇಂಥ ವಿಶೇಷ ಗುಣವು ಈ ರಾಶಿಯವರಿಗಿದೆ..

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಜನರು ಇತರರ ಕಷ್ಟಗಳಿಗೆ ಬಹು ಬೇಗ ಸ್ಪಂದಿಸುತ್ತಾರೆ. ತಮ್ಮ ಸುತ್ತಮುತ್ತಲು ಇರುವ ಜನರನ್ನು ಸಂತೋಷದಿಂದಿರಿಸಲು ಬಯಸುತ್ತಾರೆ. ಅದರಲ್ಲಿಯೂ ಹಿರಿಯರಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ವೃದ್ಧಾಶ್ರಮಗಳಿಗೆ ಆಗಾಗ ಭೇಟಿ ನೀಡುವ ಇವರು ಸ್ವ-ಇಚ್ಛೆಯಿಂದ (Volunteer) ಅಲ್ಲಿರುವ ಜನರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾರೆ. ಜೊತೆಗೆ ನಿರಾಶ್ರಿತರಿಗೆ ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ತಾವಾಯಿತು ತಮ್ಮ ಪಾಡಾಯಿತು ಎಂದು ಇರುವ ಜನರ ಮಧ್ಯದಲ್ಲಿ ಇವರು ಇತರರಿಗಾಗಿ ಬದುಕಲು ಇಚ್ಛಿಸುತ್ತಾರೆ. ಇಂಥ ಜನರು ನಿಮ್ಮ ಸುತ್ತಮುತ್ತಲೂ ಇದ್ದರೆ ನೀವು ಅವರೊಂದಿಗೆ ಕೈ ಜೋಡಿಸಿ ಹಾಗೂ ಇವರ ಸ್ನೇಹ ಕಳೆದುಕೊಳ್ಳದೆ ಇರಲು ಪ್ರಯತ್ನಿಸಿ. 

Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

ವೃಷಭ ರಾಶಿ (Taurus)
ವೃಷಭ ರಾಶಿಯವರು ಕೌಟುಂಬಿಕ ವಿಚಾರಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಹೊಂದಿರುವವರಾಗಿರುತ್ತಾರೆ. ಇವರಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲಗಳಿಗೆ ಬಹು ಬೇಗ ಪರಿಹಾರ ದೊರಕುತ್ತದೆ. ಅದರಲ್ಲಿಯೂ ಮನೆಯ ಹಿರಿಯರೊಂದಿಗೆ ಅಥವಾ ವಯಸ್ಸಾದ ವೃದ್ಧರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುತ್ತಾರೆ. ಹಿರಿಯರೊಂದಿಗೆ ಬಹು ಬೇಗ ಬೆರೆತುಕೊಂಡು ಅವರ ಮಾತುಗಳಿಗೆ ಕಿವಿಯಾಗುವ ಮೂಲಕ ತಮ್ಮ ಸಂತೋಷವನ್ನು (Happiness) ಅವರಲ್ಲಿ ಕೊಂಡುಕೊಳ್ಳುತ್ತಾರೆ. ಇವರ ಈ ಸ್ನೇಹಪರ ಗುಣದಿಂದಾಗಿ ವೃದ್ಧರು ಕೂಡ ಇದರೊಂದಿಗೆ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಕನ್ಯಾ ರಾಶಿ (Virgo)
ಕನ್ಯಾ ರಾಶಿಯ ಜನರು ಪ್ರಾಣಿಗಳನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಅವುಗಳ ಕಷ್ಟಗಳಿಗೆ ಸ್ಪಂದಿಸುವುದು ಕಡಿಮೆಯೇ. ಆದರೆ, ತಮ್ಮ ಕುಟುಂಬ ಅಥವಾ ತಮ್ಮ ನೆರೆಹೊರೆಯ ಜನರ ಸಹಾಯಕ್ಕೆ ಸದಾ ಮುಂದೆ ನಿಂತಿರುತ್ತಾರೆ. ಜೊತೆಗೆ ವೃದ್ಧರೊಂದಿಗೆ (Elder) ಸಮಯ ಕಳೆಯುವುದು ಎಂದರೆ ಇವರಿಗೆ ಬಹು ಪ್ರೀತಿ. ಅವರ ಜೊತೆಗೆ ಹರಟೆ ಹೊಡೆಯುವುದು, ತಮ್ಮ ಪರಿಚಯಸ್ಥರು ಕಷ್ಟದಲ್ಲಿದ್ದಾಗ ಹೆಗಲು ನೀಡುವುದು, ಇತರರ ಕಷ್ಟಗಳನ್ನು ಬಹು ಬೇಗ ಅರ್ಥ ಮಾಡಿಕೊಳ್ಳುವುದು ಎಲ್ಲವೂ ಇವರ ಸ್ವಭಾವ. ನಿಮ್ಮ ಸುತ್ತಮುತ್ತಲಿನಲ್ಲಿ ಕನ್ಯಾ ರಾಶಿಯವರು ಇದ್ದರೆ ಅವರ ಮೇಲೆ ನಂಬಿಕೆಯನ್ನು ಇರಿಸಬಹುದು. 

ಕೋವಿಡ್ ನಂತರ ಯುವಜನತೆಯಲ್ಲಿ ಹೆಚ್ಚಾಗಿದೆ Depression

ಮೀನ ರಾಶಿ (Pisces)
ಇವರು ಇತರರ ಬಗೆಗೆ ಬಹಳ ಸಹಾನುಭೂತಿಯನ್ನು ತೋರಿಸುತ್ತಾರೆ. ಹಿರಿಯರ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ(Caring) ತೋರಿಸುತ್ತಾರೆ. ಹಿರಿಯರಿಗೆ ಹೇಗೆ ಗೌರವ ನೀಡಬೇಕು ಎಂಬುದಕ್ಕೆ ಮೀನ ರಾಶಿಯಲ್ಲಿ ಜನಿಸಿರುವ ಜನರು ಉತ್ತಮ ಉದಾಹರಣೆ ಆಗಿರುತ್ತಾರೆ. ಇದರ ಬೇಕು-ಬೇಡಗಳನ್ನು ಬಹು ಬೇಗ ಅರ್ಥ ಮಾಡಿಕೊಳ್ಳ ಬಲ್ಲವರಾಗಿರುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios