Asianet Suvarna News Asianet Suvarna News

ಬಳ್ಳಾರಿ: ದೇವರ ಉತ್ಸವ ಮೂರ್ತಿಗಾಗಿ ಬಡಿಗೆಯಿಂದ ಬಡಿದಾಡೋ ಜನ, ಆಂಧ್ರದ ಗಡಿಯಲ್ಲಿ ವಿಶೇಷ ಆಚರಣೆ..!

ಈ ಹಿಂದಿನಿಂದಲೂ ಬಂದಿರೋ ಪದ್ಧತಿಯ ಪ್ರಕಾರ ಉತ್ಸವ ಮೂರ್ತಿಯನ್ನು ಯಾರು ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಾರೋ ಅಲ್ಲಿಯ ಊರಿನವರಿಗೆ ಒಳ್ಳೆಯದಾಗುತ್ತದೆ ಮತ್ತು ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಉತ್ಸವ ಮೂರ್ತಿಗಾಗಿ ಇಲ್ಲಿ ಬಡಿದಾಟ ನಡೆಯುತ್ತದೆ. ಆದ್ರೇ, ಈವರೆಗೂ ನಡೆದ ಜಾತ್ರೆಯಲ್ಲಿ ಯಾರು ಕೂಡ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಯಶಸ್ವಿಯಾಗಿಲ್ಲ.  

Special Ritual in Karnataka Andhra Pradesh Border grg
Author
First Published Oct 25, 2023, 12:29 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ 

ಬಳ್ಳಾರಿ/ಆಂಧ್ರಪ್ರದೇಶ(ಅ.25):  ಸಾಮಾನ್ಯವಾಗಿ ಜಾತ್ರೆ ಹಬ್ಬ ಅಂದ್ರೆ, ದೇವರಿಗೆ ಪೂಜೆ ಪುನಸ್ಕಾರ ಮಾಡ್ತಾರೆ. ನೈವೇದ್ಯ ರೂಪದಲ್ಲಿ ಹಣ್ಣುಕಾಯಿ ಸೇರಿದಂತೆ ಇತರೆ ವಸ್ತುಗಳನ್ನು ಸಮರ್ಪಣೆ ಮಾಡ್ತಾರೆ. ಆದ್ರೇ ಈ ಊರಿನಲ್ಲಿ ನಡೆಯೋ ಜಾತ್ರೆಯಲ್ಲಿ ಮನೆಯಿಂದ ಬಡಿಗೆ ಮತ್ತು ದೊಣ್ಣೆ ತರುತ್ತಾರೆ. ತರೋದಷ್ಟೇ ಅಲ್ಲ ಅದರಿಂದ ಪರಸ್ಪರ ಹೊಡೆದಾಡಿ ಕೊಂಡು ರಕ್ತಾಭಿಷೇಕವೇ ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಯಾವುದು ಆ ಜಾತ್ರೆ ಯಾಕೆ ಈ ಇಲ್ಲಿ ಹೊಡೆದಾಡಿಕೊಳ್ಳುತ್ತಾರೆ ಅಂತೀರಾ..? ಈ ಸ್ಟೋರಿ ನೋಡಿ..

ದೇವರ ಉತ್ಸವ ಮೂರ್ತಿಗಾಗಿ 10ಕ್ಕೂ ಹೆಚ್ಚು ಗ್ರಾಮಗಳ ಮಧ್ಯೆ ಬಡಿದಾಟ

ದೇಶದ ಯಾವ ಭಾಗದಲ್ಲಿಯೂ ನಡೆಯದ ವಿಶೇಷ ಮತ್ತು ವಿಚಿತ್ರ ಆಚರಣೆ ಇರೋ ಜಾತ್ರೆಯಿದು.. ಬಡಿದಾಡಲು ಒಂದಷ್ಟು ಜನರು ಬಂದ್ರೇ, ಇದನ್ನು ನೋಡಲು ಬರುತ್ತಾರೆ ಸಾವಿರಾರು ಜನರು.. ಹೌದು, ಆಂಧ್ರ ಗಡಿಭಾಗದ ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲಿರೋ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ರೀತಿಯ ಬಡಿದಾಟದ ಜಾತ್ರೆ ನಡೆಯುತ್ತದೆ. ವಿಜಯದಶಮಿ ದಿನ ರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಕಲ್ಯಾಣೋತ್ಸವದ ಬಳಿಕ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಬೆಟ್ಟಕ್ಕೆ ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದು ಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ.ಈ ವೇಳೆ ಪರಸ್ಪರ ಬಡಿಗೆ ಹಿಡಿದು ಕೊಂಡು ಹೊಡೆದಾಡಿ ಕೊಳ್ಳುತ್ತಾರೆ.. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟದ ಪ್ರದೇಶದಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ   ಈ ಕಾಳಗ ನಡೆಯುತ್ತದೆ..ಈ ವರ್ಷ ಈ ಕಾಳಗದಲ್ಲಿ  ನೂರಕ್ಕೂ ಹೆಚ್ಚು ಜನರಿಗೆ ಜನರಿಗೆ ಗಾಯಗಳಾಗಿದ್ದು, ಮೂರು ಜನರ ಸ್ಥಿತಿ ಗಂಭೀರವಾಗಿದೆ.  ಇದೊಂದು ಆಚರಣೆ ಆದ್ರೇ ಬಡಿದಾಟ ಕಡಿಮೆ ಮಾಡಬೇಕಿದೆ ಎನ್ನುತ್ತಾರೆ ಕಮ್ಮರಚೇರು ಮಠ

ಜಾತೀಯತೆ, ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು: ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಕರೆ

ಉತ್ಸವ ಮೂರ್ತಿ ತೆಗೆದು ಕೊಂಡು ಹೋದ್ರೇ ಒಳ್ಳೆಯದಾಗ್ತದಂತೆ

ಇನ್ನೂ ಈ ಹಿಂದಿನಿಂದಲೂ ಬಂದಿರೋ ಪದ್ಧತಿಯ ಪ್ರಕಾರ ಉತ್ಸವ ಮೂರ್ತಿಯನ್ನು ಯಾರು ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಾರೋ ಅಲ್ಲಿಯ ಊರಿನವರಿಗೆ ಒಳ್ಳೆಯದಾಗುತ್ತದೆ ಮತ್ತು ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಉತ್ಸವ ಮೂರ್ತಿಗಾಗಿ ಇಲ್ಲಿ ಬಡಿದಾಟ ನಡೆಯುತ್ತದೆ. ಆದ್ರೇ, ಈವರೆಗೂ ನಡೆದ ಜಾತ್ರೆಯಲ್ಲಿ ಯಾರು ಕೂಡ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಯಶಸ್ವಿಯಾಗಿಲ್ಲ.  
ಇನ್ನೂ ಇಲ್ಲಿ ಕಾರಣಿಕ ಕೂಡ ಹೇಳಲಾಗುತ್ತದೆ. ಈ ಬಾರಿಯ ಕಾರಣಿಕ ಆರು ಮೂರಾಯಿತು ಮೂರು ಆರಾಯಿತಲೇ ಪರಾಕೆ ಎಂದು ಹೇಳಿದೆ ಈ ಮೂಲಕ ಮಾರುಕಟ್ಟೆ ದರ ಹೆಚ್ಚು ಕಡಿಮೆಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಪೊಲೀಸರ ಎದುರೇ ನಡೆಯುತ್ತದೆ ಬಡಿದಾಟದ ಕಾಳಗ

ಇನ್ನೂ ನಿಷೇಧವಿದ್ರೂ ಪೊಲೀಸರ ಎದುರಿಗೆ ಈ ಕಾಳಗ ನಡೆಯುತ್ತದೆ. ಅದೆಷ್ಟೋ ಬಾರಿ ಈ ಬಡಿದಾಟದಲ್ಲಿ ಸಾವುಗಳು ಸಂಭವಿಸಿದ ಉದಾಹರಣೆಗಳು ಇದೆ. ಆಚರಣೆ ಓಕೆ ಬಡಿಯದಾಟ ಯಾಕೆ ಅನ್ನೋದು  ಸಾರ್ವಜನಿಕರ ಪ್ರಶ್ನೆಯಾಗಿದೆ.

Follow Us:
Download App:
  • android
  • ios