Asianet Suvarna News Asianet Suvarna News

ಪ್ರತಿ ಮಾಸದಲ್ಲೂ ಬರುತ್ತವೆ 2 ಪಂಚಮಿ ಹಾಗೂ ತಿಥಿಗಳು; ಇವುಗಳ ಮಹತ್ವ ಏನು..?

ಪಂಚಮಿಯ ನಂತರ ಕೃಷ್ಣ ಪಕ್ಷದಲ್ಲಾದರೆ ಚಂದ್ರನು ಕ್ಷೀಣ ಗತಿಗೆ ಹಾಗೂ ಶುಕ್ಲ ಪಕ್ಷದಲ್ಲಿ ವೃದ್ಧಿ ಗತಿಯತ್ತ ಸಾಗುತ್ತಾನೆ. ‘ಚಂದ್ರ ಮಾಮನಸೋ ಜಾತಶ್ಚಕ್ಷೋ ಸೂರ್ಯೋ ಆಜಾಯತ' ಎಂದಿದೆ ವೇದ ಸೂಕ್ತಗಳು. ಮನೋ ಕಾರಕ ಚಂದ್ರನ ಆಧಾರದಲ್ಲಿ ಬುದ್ಧಿಶಕ್ತಿ ಇರುವ ಮನುಜನ ಧೀ ಶಕ್ತಿಯು ವೃದ್ಧಿ ಕ್ಷಗಳನ್ನು ಉಂಟುಮಾಡುತ್ತದೆ. ಅಮವಾಸ್ಯೆಯಿಂದ ಶುದ್ಧ ಪಂಚಮಿಯವರೆಗೆ ಚಂದ್ರನು ಪೂರ್ಣ ಕ್ಷೀಣನಾಗಿ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಪಂಚಮಿಯ ವರೆಗೆ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ ಆಯಾಯ ಜಾತಕದ ಪ್ರಕಾರ, ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆ( extreme)ಗೆ ಹೋಗುವ ಕಾಲ. ಇಂತಹ ಸಂದರ್ಭಗಳ ನಿಯಂತ್ರಕ್ಕಾಗಿ ವೃತಗಳ ಮೂಲಕ ಮನೋ ನಿಯಂತ್ರಣದ ವ್ಯವಸ್ಥೆಗೆ ಪರಿಹಾರ ಕಂಡು ಹಿಡಿದರು. ಬನ್ನಿ ಈಗ ಪಂಚಮಿಯ ಮಹತ್ವ ನೋಡೋಣ. 

2 Panchami and Tithi come in every month What is the significance of these suh
Author
First Published Aug 18, 2023, 3:58 PM IST

ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ

ಪಂಚಮಿಯ ನಂತರ ಕೃಷ್ಣ ಪಕ್ಷದಲ್ಲಾದರೆ ಚಂದ್ರನು ಕ್ಷೀಣ ಗತಿಗೆ ಹಾಗೂ ಶುಕ್ಲ ಪಕ್ಷದಲ್ಲಿ ವೃದ್ಧಿ ಗತಿಯತ್ತ ಸಾಗುತ್ತಾನೆ. ‘ಚಂದ್ರ ಮಾಮನಸೋ ಜಾತಶ್ಚಕ್ಷೋ ಸೂರ್ಯೋ ಆಜಾಯತ' ಎಂದಿದೆ ವೇದ ಸೂಕ್ತಗಳು. ಮನೋ ಕಾರಕ ಚಂದ್ರನ ಆಧಾರದಲ್ಲಿ ಬುದ್ಧಿಶಕ್ತಿ ಇರುವ ಮನುಜನ ಧೀ ಶಕ್ತಿಯು ವೃದ್ಧಿ ಕ್ಷಗಳನ್ನು ಉಂಟುಮಾಡುತ್ತದೆ. ಅಮವಾಸ್ಯೆಯಿಂದ ಶುದ್ಧ ಪಂಚಮಿಯವರೆಗೆ ಚಂದ್ರನು ಪೂರ್ಣ ಕ್ಷೀಣನಾಗಿ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಪಂಚಮಿಯ ವರೆಗೆ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ ಆಯಾಯ ಜಾತಕದ ಪ್ರಕಾರ, ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆ( extreme)ಗೆ ಹೋಗುವ ಕಾಲ. ಇಂತಹ ಸಂದರ್ಭಗಳ ನಿಯಂತ್ರಕ್ಕಾಗಿ ವೃತಗಳ ಮೂಲಕ ಮನೋ ನಿಯಂತ್ರಣದ ವ್ಯವಸ್ಥೆಗೆ ಪರಿಹಾರ ಕಂಡು ಹಿಡಿದರು. ಬನ್ನಿ ಈಗ ಪಂಚಮಿಯ ಮಹತ್ವ ನೋಡೋಣ. 

ಪ್ರತಿಯೊಂದು ತಿಥಿಗೂ, ಮಾಸ, ವರ್ಷ ಆಧಾರಿತ ಏವತಾ ಶಕ್ತಿಗಳ ಚಿಂತನೆ ಮಾಡಿದರು ನಮ್ಮ ಪ್ರಾಚೀನ ಋಷಿ ಮುನಿಗಳು. ಇದರಲ್ಲಿ ಪಂಚಮಿಯ ಅಭಿಮಾನಿ ದೇವರು ನಾಗ. ಮೋಹ ನಿಯಂತ್ರಕನೂ ಹೌದು, ಮೋಹ ಸೃಷ್ಟಿಕರ್ತನೂ ನಾಗದೇವರೆ. ನಾಗದೇವರು ಮಹಾ ಚೈತನ್ಯದ (ವಿಷ್ಣು) ಸಂಕರ್ಷಣಾ ಶಕ್ತಿ. ಸಂಕರ್ಷಣಾ ಶಕ್ತಿ ಎಂದರೆ fast responding power. ಈ ನಾಗದೇವರ ಅಭಿಮಾನಿ ದೇವರು ಸುಬ್ರಹ್ಮಣ್ಯ. ಇವನನ್ನು ದೇವ ಸೇನಾನಿ ಎಂದರು. ದೇವ ಎಂದರೆ ದೇವತೆಗಳು, ಬೆಳಕು, ಜ್ಞಾನ ಎಂದರ್ಥ. ಇಂತಹ ಪಂಚಮಿಯ ದಿನ ನಾಗದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳಲು ಪ್ರಾಜ್ಞರು ಸಲಹೆ ನೀಡಿದರು. 

ವರ್ಷಕ್ಕೆ ಬರುವ 24 ಪಂಚಮಿ ವೃತಗಳ ಸಮಾರೋಪವೇ ಶ್ರಾವಣ ಶುಕ್ಲ ಪಂಚಮಿ. ಈ ದಿನ ನಾವು ಪ್ರತಿಷ್ಠಾಪನೆ ಮಾಡಿದ ನಾಗ ಸಾನಿಧ್ಯ ವನಗಳಲ್ಲಿ ಇರುವ ನಾಗ ಶಿಲೆಗೆ ಪಂಚಾಮೃತ, ಗೋಕ್ಷೀರ, ಜಲಾಭಿಷೇಕದ ಮೂಲಕ ಶುದ್ಧಸ್ನಾನ ಮಾಡಿಸಿ, ಗಂಧ, ಚಂದನ ಅರಷಿಣ ಲೇಪಿಸಿ, ಪುಷ್ಪಾಲಂಕಾರ ಮಾಡಿ ಕಲ್ಪೋಕ್ತ ಪೂಜೆ ಮಾಡುವ ಸಂಪ್ರದಾಯ ಮಾಡಿಕೊಂಡರು. ಗೋ ಎಂದರೆ ಭೂಮಿ ಎಂಬ ಅರ್ಥವಿದೆ. ಅದನ್ನು ಗೋವಿನ ಕ್ಷೀರದ ಮೂಲಕ ಭೂಮಿಗೆ ನಾಗ ಶಿಲೆಯ ಅಭಿಷೇಕದ ಮೂಲಕ ಭೂಮಿಗೆ ಸಮರ್ಪಿಸಿದರೆ ಮಾನಸಿಕವಾಗಿ ಮೋಹ ನಿಯಂತ್ರಣವೂ, ಲೌಕಿಕವಾಗಿ ಭೂಮಿಯ ಫಲವತ್ತೆಯ ವೃದ್ಧಿಯೂ ಆಗುತ್ತದೆ. ಇದು ಪೂರ್ಣವಾಗಿ ವೈಜ್ಞಾನಿಕ ಚಿಕಿತ್ಸೆ( treatment) ಎಂದು ವ್ಯಾಖ್ಯಾನಿಸಬಹುದು. 

ವಾಸ್ತವವಾಗಿಯೂ ಲಕ್ಷಾಂತರ ಭಕ್ತರು ಈ ಸಂಪ್ರದಾಯ ಸುಕರ್ಮದಿಂದ ಕ್ಷೇಮವಾದದ್ದರಿಂದಲೇ ತಲೆತಲಾಂತರದಿಂದ ಇದು ನಡೆದು ಬಂದಿದೆ. ಯಾರೋ ನಂಬಿಕೆ ಇಲ್ಲದ ಕೆಲ ಮಂದಿ ಇದನ್ನು ಮೂಢ ನಂಬಿಕೆ ಎಂದರೆ ಅದನ್ನು ನಂಬಬೇಕಾಗಿಲ್ಲ. ಒಂದು ವೇಳೆ ನಂಬಿದರೆ ನಮ್ಮ ನಮ್ಮ ಪರಂಪರೆಯನ್ನೇ ನಾವು ನಂಬದಂತಾದೀತು. ಯಾಕೆಂದರೆ ಮೂಢನಂಬಿಕೆ ಎಂದು ಹೇಳಿದವರ ಪೂರ್ವಜರ ಮನೆ, ಹೊಲ, ತೋಟಗಳಲ್ಲಿ ನಾಗ ಸಾನಿಧ್ಯ ಇರುವುದನ್ನು ತೋರಿಸಿಕೊಡಬಹುದು. ಏನೋ ಅವರಿಗೆ ಇಷ್ಟವಿಲ್ಲ ಎಂದು ಇಷ್ಟವಿದ್ದವರ ಮನಸ್ಸನ್ನು ಹಾಳು ಮಾಡಬಾರದಲ್ವೇ?
ಅದೇನೇ ಇರಲಿ ಈ ನಾಗರ ಪಂಚಮಿಯಂದು ಭಕ್ತಿಶ್ರದ್ಧೆಯಿಂದ, ನಾಗ ಸೇವೆ ಮಾಡುವ ಉದ್ದೇಶವನ್ನರಿತು, ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಆರಾಧಿಸೋಣ.

ಶನಿಯಿಂದ ಮೂರು ತಿಂಗಳಲ್ಲಿ ಈ ರಾಶಿಯವರು ಶ್ರೀಮಂತರಾಗುತ್ತಾರೆ..!

ನಾಗದೇವರಿಗೆ ಹಾಲುಬಾಯಿ( ಅಕ್ಕಿ ಹಲ್ವಾ), ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗದೇವರಿಗೆ ಕೆಂಪು ಹೂವು ಬಿಟ್ಟು ಬೇರೆ ಹಳದಿ, ಶ್ವೇತ ವರ್ಣಗಳ ಪರಿಮಳಯುಕ್ತ ಪುಷ್ಪಾರ್ಚನೆ ಮಾಡಬೇಕು. ನಾಗನಿಗೆ ಆಶ್ಲೇಷಾ ನಕ್ಷತ್ರ ವಿಶೇಷ. ಕೆಲವೆಡೆ ನಾಗ ತಂಬಿಲ,ಆಶ್ಲೇಷಾ ಬಲಿ,ತನು ತರಪಣಾದಿಗಳು ನಡೆಯುತ್ತವೆ. 

ಪುರಾಣೋಕ್ತ ಸಂಕ್ಷಿಪ್ತ ಕಥೆ

ಪರೀಕ್ಷತ್ ರಾಜನಿಗೆ ಋಷಿ ಶಾಪದಲ್ಲಿ ಸಂರ್ಪ ದಂಷ್ಟ್ರನವಾಗಿ ಮೃತಿ ಬರುತ್ತದೆ. ಆಗ ಅವನ ಮಗ ಜನಮೇಜಯನು ಕೋಪಿಷ್ಟನಾಗಿ ಸರ್ಪಸತ್ರ ಮಾಡಿಸುತ್ತಾನೆ. ಅದರಲ್ಲಿ 86 ಪ್ರಭೇದಗಳ ಸರ್ಪ ಸಂಕುಲ ನಾಶ ಆಗುತ್ತದೆ. ಅದಲ್ಲದೆ ಅರ್ಜುನನ ಕಾಂಡವ ದಹನದಲ್ಲೂ ಸರ್ಪಗಳು ನಾಶವಾಗುತ್ತದೆ. ಇದು ಕೇವಲ ಕೃತ್ಯ ಮಾಡಿದ ವಂಶಕ್ಕೇ ಮಾತ್ರವಲ್ಲ, ಇಡೀ ದೇಶಕ್ಕೇ ದೋಷವಾಗುತ್ತದೆ. ಇದಕ್ಕಾಗಿಯೇ ಋಷಿಗಳು ಪರಿಹಾರಾರ್ಥವಾಗಿ ನಾಗಾರಾಧನೆ ಮಾಡಲು ಹೇಳಿದರು. ಇಂದಿಗೂ ಇದು ನಡೆಯುತ್ತಲೇ ಇದೆ. ಜ್ಯೋತಿಷ್ಯದಲ್ಲಿ ರಾಹುವಿನಿಂದ ನಾಗನ ಚಿಂತನೆ ಮತ್ತು ಕೇತುವಿನಿಂದ ನಾಗನ ವಾಸಸ್ಥಾನದ ಚಿಂತನೆ ಮಾಡಲಾಗಿದೆ.

ಸರ್ಪ ಮಂತ್ರವನ್ನು ಭಕ್ತಿ ಶ್ರದ್ಧಾಪೂರ್ವಕ ಸ್ವರ, ವರ್ಣ, ಅಕ್ಷರ ಲೋಪವಾಗದಂತೆ ಹೇಳಬೇಕು.

||ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತೇ ಅನಂತಾಯ ಸ್ವಾಹ|| ಎಂದು ನಿತ್ಯ ಕನಿಷ್ಟವಾಗಿ ಪಠಿಸಿದರೆ ಬಹಳ ಪರಿಣಾಮಕಾರಿಯಾಗುತ್ತದೆ.

Follow Us:
Download App:
  • android
  • ios