ಫ್ಯಾಷನ್ ಜಗತ್ತಿನಲ್ಲಿ ಹೊಸ ಹೊಸ ಫ್ಯಾಷನ್ ಎಲ್ಲರ ಗಮನ ಸೆಳೆಯುತ್ತೆ. ಕೆಲವೊಂದು ಆಭರಣ ಜನಸಾಮಾನ್ಯರ ತಲೆ ತಿರುಗಿಸುತ್ತೆ. ಒಂದು ಬೆಲೆ ಆದ್ರೆ ಇನ್ನೊಂದು ಅದ್ರ ಡಿಸೈನ್. ಈಗ ಬಾಲೆನ್ಸಿಯಾಗ ಕಂಪನಿ ಭಾರೀ ಚರ್ಚೆಯಲ್ಲಿದೆ.  

ಇದು ಫ್ಯಾಷನ್ ದುನಿಯಾ. ದಿನ ದಿನಕ್ಕೂ ಫ್ಯಾಷನ್ ಬದಲಾಗ್ತಿರುತ್ತದೆ. ಜನರು ಚಿತ್ರ ವಿಚಿತ್ರವಾಗಿ ಬಟ್ಟೆ, ಉಡುಪು ಧರಿಸಲು ಇಷ್ಟಪಡ್ತಾರೆ. ಜನರ ಆಸಕ್ತಿಗೆ ತಕ್ಕಂತೆ ಫ್ಯಾಷನ್ ಬ್ರ್ಯಾಂಡ್ ಗಳು ಕೂಡ ಡಿಸೈನ್ ಸಿದ್ಧಪಡಿಸುತ್ತವೆ. ಕೆಲವೊಂದು ಡಿಸೈನ್ ಅಚ್ಚರಿ ಹುಟ್ಟಿಸುವಂತಿರುತ್ತವೆ. ಹೈ-ಎಂಡ್ ಫ್ಯಾಶನ್ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳ ಬಗ್ಗೆ ವಿಚಿತ್ರ ಕಲ್ಪನೆಯನ್ನು ಹೊಂದಿರುತ್ತವೆ. ಅನೇಕ ಬಾರಿ ಇವರ ಐಡಿಯಾ ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ಸಾಮಾನ್ಯ ಜನರಿಗೆ ಇದು ಅರ್ಥವಾಗೋದಿಲ್ಲ. ದಿನ ಬಳಕೆ ವಸ್ತುಗಳಂತೆ ಕಾಣವು ಡಿಸೈನ್ ಸಿದ್ಧಪಡಿಸುವ ಬ್ರ್ಯಾಂಡ್ ಅದಕ್ಕೆ ದುಬಾರಿ ಬೆಲೆ ನಿಗದಿಪಡಿಸುತ್ತದೆ. 

ಈ ಬಾರಿ ಐಷಾರಾಮಿ (Luxury) ಫ್ಯಾಷನ್ ಬ್ರ್ಯಾಂಡ್ ಬಾಲೆನ್ಸಿಯಾಗ (Balenciaga) ಮತ್ತೆ ಸುದ್ದಿಯಲ್ಲಿದೆ. ಅದರ ಹೊಸ ಉತ್ಪನ್ನವೊಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಬಾಲೆನ್ಸಿಯಾಗ ಕಂಪನಿ ವಿಚಿತ್ರ ಬ್ರೇಸ್ಲೆಟ್ ಬಿಡುಗಡೆ ಮಾಡಿದೆ. ಈ ಬ್ರೇಸ್ಲೆಟ್ ನಾವು ಮನೆಯಲ್ಲಿ ಬಳಸುವ ಪ್ಯಾಕಿಂಗ್ (Packing) ಟೇಪ್ ನಂತೆ ಕಾಣುತ್ತದೆ. ಈ ಬ್ರೇಸ್ಲೆಟ್ (Bracelet) ಕೆಳಗೆ ಬಾಲೆನ್ಸಿಯಾಗ ಲೋಗೋ ಇದೆ.

ಈ ಬಾರ್ಬಿ ಬೊಂಬೆ ಸೌದಿ ಅರೇಬಿಯಾದ ಪ್ರಪ್ರಥಮ ಮಿಸ್ ಯೂನಿವರ್ಸ್ ಸ್ಪರ್ಧಿ!

ಈ ತಿಂಗಳ ಆರಂಭದಲ್ಲಿ ಪ್ಯಾರಿಸ್ ಫ್ಯಾಶನ್ ವೀಕ್‌ನ ಚಳಿಗಾಲ 2024ರ ಕಲೆಕ್ಷನ್ ನಲ್ಲಿ ಈ ಚಮತ್ಕಾರಿ ಬ್ರಾಸ್ಲೈಟ್ ಪರಿಚಯಿಸಲಾಗಿದೆ. ಈ ಬ್ರಾಸ್ಲೈಟ್ ಇಂಟರ್ನೆಟ್ ಬಳಕೆದಾರರನ್ನು ಅಚ್ಚರಿಗೊಳಿಸಿದೆ. ಬಳಕೆದಾರರು ಬ್ರಾಸ್ಲೈಟ್ ಬಗ್ಗೆ ಸಾಕಷ್ಟು ಕಮೆಂಟ್ ಮಾಡ್ತಿದ್ದಾರೆ.

ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಈ ಬ್ರೇಸ್ಲೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಬ್ರೇಸ್ಲೆಟ್ ಫೋಟೋ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಲೆನ್ಸಿಯಾಗ, ಫ್ಯಾಷನ್ ಹೆಸರಿನಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಟೇಪ್ ನಂತೆ ಕಾಣುವ ಈ ಬ್ರೇಸ್ಲೆಟ್ ಬೆಲೆ 4,000 ಡಾಲರ್ ಅಂದ್ರೆ ಸುಮಾರು 3.30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಹುಚ್ಚುತನ ಎಂದು @justepicthings ಖಾತೆಯಲ್ಲಿ ಶೀರ್ಷಿಕೆ ಹಾಕಲಾಗಿದೆ. 

ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ನಾವು ನಮ್ಮ ಮನೆಯಲ್ಲಿರುವ ವಸ್ತುವನ್ನು ಬಳಸಿ ಐಷಾರಾಮಿ ಬ್ರ್ಯಾಂಡ್ (Luxurious Brand) ತಯಾರಿಸಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಈ ಉತ್ಪನ್ನ ಸಂಪೂರ್ಣ ತಮಾಷೆಯಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಅಮೂಲ್ಯ ವಸ್ತು ಎಂದು ಬರೆದಿದ್ದಾರೆ. ಇದನ್ನು ಯಾರು ತಯಾರಿಸಿದ್ದಾರೆ ಅನ್ನೋದು ಮೊದಲ ಪ್ರಶ್ನೆ ಆದ್ರೆ ಇದನ್ನು ಯಾರು ಖರೀದಿ ಮಾಡ್ತಾರೆ ಅನ್ನೋದು ಎರಡನೇ ಪ್ರಶ್ನೆ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

20 ರೂಪಾಯಿಯ ಟೇಪ್‌ನಲ್ಲಿ ನಿಮ್ಮ ಬ್ರ್ಯಾಂಡ್ ತಯಾರಿಸಿ 330000 ರೂಪಾಯಿಗೆ ಇದನ್ನು ಮಾರಾಟ ಮಾಡಿ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಇದನ್ನೇ ಮಾಡುತ್ತಿವೆ. ವಿದೇಶದಿಂದ ಬಂದವರು ಮೂರ್ಖರಾಗುತ್ತಾರೆ, ಭಾರತೀಯರಲ್ಲ. ಇಲ್ಲಿ ಜನರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಇಲ್ನೋಡಿ, ಅನಂತ್ ಅಂಬಾನಿಯ 200 ಕೋಟಿ ಮೌಲ್ಯದ ವಾಚ್‌ಗಳ ಸಂಗ್ರಹ!

ಬಾಲೆನ್ಸಿಯಾಗ ತನ್ನ ಕಂಪನಿ ಸೈಟ್ ನಲ್ಲಿ ಈ ವಸ್ತು ಮಾರಾಟಕ್ಕೆ ಲಭ್ಯವಿದೆ. ಟೇಪ್ ಬ್ರೇಸ್ಲೆಟ್‌ಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ಬಾಲೆನ್ಸಿಯಾಗ ಇನ್ನೂ ಬಹಿರಂಗಪಡಿಸಿಲ್ಲ. ಕೆಲವು ಫ್ಯಾಷನ್ ಪ್ರಭಾವಿಗಳು ಇದರ ಬೆಲೆ ಡಾಲರ್ 4,400 ಅಂದ್ರೆ ಸುಮಾರು 3,66,649 ಎಂದು ಅಂದಾಜಿಸಿದ್ದಾರೆ. 

ಬಾಲೆನ್ಸಿಯಾಗ ವಿಚಿತ್ರ ಬ್ರ್ಯಾಂಡ್ ಬಿಡುಗಡೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಬಾಲೆನ್ಸಿಯಾಗ ಟವೆಲ್ ಸ್ಕರ್ಟ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಕರ್ಟ್ ಕೂಡ ಸಾಕಷ್ಟು ಸುದ್ದಿಯಾಗಿತ್ತು. ಬಾಲೆನ್ಸಿಯಾಗ ಅದರ ಪ್ರಚಾರವನ್ನು ಕೂಡ ಜೋರಾಗಿ ಮಾಡಿತ್ತು. ಅದರ ಬೆಲೆಯನ್ನು 77 ಸಾವಿರ ರೂಪಾಯಿ. 

Scroll to load tweet…