ನವದೆಹಲಿ (ಆ. 06): ಡಿಯರ್ ಕಾಮ್ರೆಡ್ ಸಕ್ಸಸ್ ನಂತರ ವಿಜಯ್ ದೇವರಕೊಂಡ ಡಿಮ್ಯಾಂಡ್ ಗ್ರಾಫ್ ಮೇಲೆರಿದೆ. ಡಿಯರ್ ಕಾಮ್ರೆಡನ್ನು ಹಿಂದಿಗೆ ರಿಮೇಕ್ ಮಾಡಲು ಕರಣ್ ಜೋಹರ್ ಉತ್ಸುಕರಾಗಿದ್ದಾರೆ. ಡಿಯರ್ ಕಾಮ್ರೆಡ್ ರಿಮೇಕ್ ಹಕ್ಕನ್ನು 6 ಕೋಟಿಗೆ ಖರೀದಿಸಿದ್ದಾರೆ.

‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

ಕರಣ್ ಜೋಹರ್ ಇತ್ತೀಚಿಗೆ ವಿಜಯ್ ದೇವರಕೊಂಡರನ್ನು ಭೇಟಿ ಮಾಡಿದ್ದಾರೆ. ವಿಜಯ್ ದೇವರಕೊಂಡರನ್ನು ಬಾಲಿವುಡ್ ಗೆ ಕರೆತರಬೇಕೆಂದು ಕರಣ್ ಕನ್ವಿನ್ಸ್ ಮಾಡಿದ್ದಾರೆ.ಅದಕ್ಕಾಗಿ 40 ಕೋಟಿ ರೂ ಆಫರ್ ಮಾಡಿದ್ದಾರೆ. ಅದನ್ನು ವಿಜಯ್ ನಯವಾಗಿ ತಿರಸ್ಕರಿಸಿದ್ದಾರೆ. 

ಈ ಹಿಂದೆ ಅರ್ಜುನ್ ರೆಡ್ಡಿಯನ್ನು ಹಿಂದಿಗೆ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡುವಾಗಲೂ ಆಫರ್ ನೀಡಿದ್ದರಂತೆ. ಆದರೆ ಅದೇ ಪಾತ್ರವನ್ನು ಹಿಂದಿಯಲ್ಲಿ ಮಾಡಲು ವಿಜಯ್ ದೇವರಕೊಂಡ ಒಪ್ಪಿರಲಿಲ್ಲ. 

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ಸಂದರ್ಶನವೊಂದರಲ್ಲಿ, ಹಿಂದಿ ಸಿನಿಮಾಗಳನ್ನು ಮಾಡುತ್ತೀರಾ ಎಂದು ವಿಜಯ್ ದೇವರಕೊಂಡರನ್ನು ಪ್ರಶ್ನಿಸಿದಾಗ, ನನಗೆ ಹಿಂದಿಯಲ್ಲಿ ನಟಿಸಲು ಇಷ್ಟವಿದೆ. ಮೊದಲು ತೆಲುಗಿನಲ್ಲಿ ಏನಾದರೂ ಮಾಡಲು ಇಷ್ಟ. ನನಗೆ ಲೇಜ ಲೈಫ್ ಸ್ಟೈಲ್ ಇಷ್ಟ. ಪ್ರತಿದಿನವೂ ಫೋಟೋಗ್ರಾಫ್ ಮಾಡಿಸಿಕೊಳ್ಳುತ್ತಾ ಕೆಲಸ ಮಾಡುವುದು ನನ್ನಿಂದಾಗದ ಕೆಲಸ. ಮುಂಬೈ ತುಂಬಾ ವೇಗವಾಗಿ ಬೆಳೆಯುತ್ತಿರುವ ನಗರಿ. ನನಗೆ ನಿಧಾನವಾಗಿ ಕೆಲಸ ಮಾಡಲು ಇಷ್ಟ’ ಎಂದಿದ್ದಾರೆ.