Government School  

(Search results - 67)
 • School Students
  Video Icon

  state14, Mar 2020, 7:43 PM IST

  Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!

  ನಮ್ಮ ಸರ್ಕಾರಿ ಶಾಲೆ ಮಕ್ಕಳು ಕೊರೋನಾ ಬಗ್ಗೆ ಎಷ್ಟ್ ಚಂದ ಜಾಗೃತಿ ಮಾಡಿಸ್ಯಾರ ಅಂದ್ರೆ ಈ ವಿಡಿಯೋವನ್ನ ನೀವು ನೋಡಲೇಬೇಕು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • Kalaburagi

  Karnataka Districts2, Mar 2020, 11:26 AM IST

  ಬಿಸಿಲ ನಾಡು ಕಲಬುರಗಿಯಲ್ಲಿ ಮಲೆನಾಡಿನ ಕೂಲ್ ಕೂಲ್ ವಾತಾವರಣ ನಿರ್ಮಿಸಿದ ಸರ್ಕಾರಿ ಶಾಲೆ!

  ಅಫಜಲ್ಪುರ/ ಕರಜಗಿ[ಮಾ.02]: ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ ರೈಲಿನ ವರ್ಣಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದೆ.  ಶಿಕ್ಷಕ ಹೈದರ ಚೌದರಿ ಅವರು ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ಆವರಣವನ್ನು ಹಚ್ಚ ಹಸಿರಾಗಿರಿಸಿದ್ದಾರೆ.

 • Kalaburagi

  Karnataka Districts2, Mar 2020, 7:34 AM IST

  ನೋಡಬನ್ನಿ ಉಡಚಾಣ ಹಟ್ಟಿ ಸರ್ಕಾರಿ ಶಾಲೆ: ಪರಿಸರ ಕಾಳಜಿ ಬಿಂಬಿಸುವ ಸ್ಕೂಲ್!

  ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿವರೇ ಹೆಚ್ಚು. ಖಾಸಗಿ ಶಾಲೆಗಳ ಆಕರ್ಷಣೆಗೆ ಒಳಗಾಗಿ ಕೂಲಿ ಮಾಡುವವರೂ ಸಹಿತ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಹ ವಾತಾವರಣ ಮಧ್ಯೆ ಅಫಜಲ್ಪುರ ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ ರೈಲಿನ ವರ್ಣಚಿತ್ರದಿಂದ ಎಲ್ಲರ ಗಮನ ಸೆಳೆದಿದೆ. 
   

 • sudha murthy

  Education Jobs27, Feb 2020, 8:04 PM IST

  ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

  ಜಗತ್ತಿನಲ್ಲಿ ಹೆಸರು ಮಾಡಿದ ಇನ್ಫೋಸಿಸ್ ನ ಒಡೆಯರಾದ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದ ಸುಧಾಮೂರ್ತಿ.  ಇವರ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿ, ಹೇಳಲಿಕ್ಕೆ ಏನು ಉಳಿದಿಲ್ಲ.  ರಾಜ್ಯದಲ್ಲಿ ನರೆ ಬಂದ ಸಂದರ್ಭದಲ್ಲಿ ಕನ್ನಡಿಗರು ಕಷ್ಟಕ್ಕೆ ಸಿಲುಕಿದ ವೇಳೆಯಲ್ಲಿ ತಾವೇ ಮುಂದೆ ನಿಂತು ಸಹಾಯಕ್ಕೆ ನಿಂತರು. ಇದೀಗ ನಮ್ಮ ಸರಕಾರಿ ಶಾಲೆಗಳಲ್ಲಿ ಹೊಸ ಚಮತ್ಕಾರ ಮಾಡಲು ಮುಂದಾಗಿದ್ದಾರೆ.

 • Lesson in the boiling sun plight of the Government School
  Video Icon

  Karnataka Districts22, Feb 2020, 3:05 PM IST

  ಚಿಕ್ಕಮಗಳೂರು: ತಗಡಿನ ಶೆಡ್‌ನಲ್ಲೇ ಮಕ್ಕಳಿಗೆ ಪಾಠ, ಏನ್ ಮಾಡ್ತಿದ್ದಾರೆ ಅಧಿಕಾರಿಗಳು?

  ಕಳೆದ ವರ್ಷ ಬಂದ ಭೀಕರ ಪ್ರವಾಹದಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಸಂಪೂರ್ಣ ಬಿದ್ದು ಹೋಗಿತ್ತು. ಹೀಗಾಗಿ ಕಳೆದ 8 ತಿಂಗಳಿಂದ ತಗಡಿನ ಶೆಡ್‌ನಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. 

 • Devaraj

  Karnataka Districts17, Feb 2020, 9:25 AM IST

  ಬ್ಯಾಡಗಿ: ನಟ ದೇವರಾಜ ಕುಟುಂಬದಿಂದ ತಡಸ ಗ್ರಾಮದ ಸರ್ಕಾರಿ ಶಾಲೆ ದತ್ತು

  ಸರ್ಕಾರಿ ಶಾಲೆ ಹಾಗೂ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಚಿತ್ರ ನಟರ ಸಾಲಿಗೆ ಇದೀಗ ನಟ ದೇವರಾಜ ಕುಟುಂಬ ಸೇರ್ಪಡೆಯಾಗಿದೆ.
   

 • Belagavi
  Video Icon

  Karnataka Districts7, Feb 2020, 1:21 PM IST

  ಪ್ರವಾಹದಲ್ಲಿ ಕಿತ್ತು ಹೋದ ಶಾಲೆಯ ಛಾವಣಿ: ಸ್ಕೂಲ್‌ನತ್ತ ತಿರುಗಿನೋಡದ ಜನಪ್ರತಿನಿಧಿಗಳು

  ಕಳೆದ ವರ್ಷ ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಹಾನಿಗೊಳಗಾಗಿದ್ದವು. ಈ ಪ್ರವಾಹದಲ್ಲಿ ತಾಲೂಕಿನ ಕಮಕಾರಟ್ಟಿ ಶಾಲೆಯ ಛಾವಣಿ ಕಿತ್ತು ಹೋಗಿದೆ. ಆದರೆ, ಇಂದಿಗೂ ಈ ಶಾಲೆಯ ಛಾವಣೆ ಮಾತ್ರ ದುರಸ್ತಿಯಾಗಿಲ್ಲ. ಪ್ರವಾಹ  ಬಂದು ಹೋಗಿ ಹಲವು ತಿಂಗಳು ಗತಿಸಿದರೂ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ತಾವಿದ್ದಾರೆ.

 • Yadgir
  Video Icon

  Karnataka Districts31, Jan 2020, 3:00 PM IST

  ವಿದ್ಯಾರ್ಥಿನಿಯರಿಗೆ ಕಾಮುಕ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಗ್ರಾಮಸ್ಥರಿಂದ ಸಖತ್ ಕ್ಲಾಸ್!

  ವಿದ್ಯಾರ್ಥಿನಿಯರಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕದರಾಪುರ ಶಾಲೆಯಲ್ಲಿ ನಡೆದಿದೆ. ಶಾಲೆಯ ಶಿಕ್ಷಕ ಬಾಲರಾಜ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿಕೊಂಡು ಶಿಕ್ಷಕ ಬಾಲರಾಜ್ ನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.  
   

 • undefined
  Video Icon

  Karnataka Districts31, Jan 2020, 2:25 PM IST

  Big 3 Impact: ವರದಿ ಪ್ರಸಾರವಾದ 6 ಗಂಟೆಯಲ್ಲೇ ಶಾಲೆಗೆ ಬಂತು ಪೈಪ್ ಲೈನ್

  ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಕ್ಕೆ ಹೋಗಲು ಪರದಾಡುವಂತ ಸುದ್ದಿಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರವಾಗಿದೆ. ನಾಲ್ಕು ವರ್ಷದಿಂದ  ಇದ್ದ ಸಮಸ್ಯೆಯನ್ನ ಅಧಿಕಾರಿಗಳು ಒಂದೇ ದಿನದಲ್ಲಿ ಪರಿಹಾರ ಮಾಡಿದ್ದಾರೆ. 
   

 • undefined
  Video Icon

  Karnataka Districts30, Jan 2020, 2:38 PM IST

  ಇಲ್ಲಿನ ಶಾಲಾ ಮಕ್ಕಳ ನರಕಕ್ಕೆ ಮುಕ್ತಿ ಸಿಗೋದು ಯಾವಾಗ?

  ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಯಲಕ್ಕೆ ಹೋಗುವುದದಕ್ಕೂ ಪರದಾಡುವಂತ ಪರಿಸ್ಥಿತಿ ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗಿದೆ. ಈ ಶಾಸಕರ ಶಾಲೆಯಲ್ಲಿ ಆರು ಶೌಚಾಲಯಗಳಿವೆ. ಆದರೆ, ಒಂದಕ್ಕೂ ನೀರಿನ ಸಂಪರ್ಕ ಇಲ್ಲ. 
   

 • boy harreses girl by capturing video

  Karnataka Districts23, Jan 2020, 11:06 AM IST

  ಅಶ್ಲೀಲ ದೃಶ್ಯ ತೋರಿಸಿ ಶಿಕ್ಷಕನಿಂದ ಪಾಠ: ಶಾಲೆಯತ್ತ ಮುಖಮಾಡದ ವಿದ್ಯಾರ್ಥಿಗಳು!

  ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದ ದುರ್ಬಳಕೆ ಕುರಿತು ಶಿಕ್ಷಕರ ವಿರುದ್ಧ ವಿವಿಧೆಡೆ ಆರೋಪಗಳು ಮೂಡಿಬರುತ್ತಿರುವ ಬೆನ್ನಲ್ಲೇ, ವಿಜ್ಞಾನ ವಿಷಯ ಬೋಧಕ ಶಿಕ್ಷಕರೊಬ್ಬರು ಮಕ್ಕಳಿಗೆ ಅಶ್ಲೀಲ ಚಿತ್ರ, ದೃಶ್ಯಗಳ ತೋರಿಸಿ ಪಾಠ ಮಾಡುತ್ತಾರೆಂದು ಮಗದೊಂದು ಆರೋಪ ಇಲ್ಲಿಗೆ ಸಮೀಪದ ಮಡೇಪಲ್ಲಿ ಗ್ರಾಮದಿಂದ ಕೇಳಿಬಂದಿದೆ. 
   

 • government school

  Karnataka Districts19, Jan 2020, 11:28 AM IST

  ಇಂಡಿ: ಶತಮಾನ ಕಂಡ ಸರ್ಕಾರಿ ಶಾಲೆಗಿಲ್ಲ ಮೂಲ ಸೌಕರ್ಯ

  ಪತ್ರಾಸ್ ಶೆಡ್ಡಿನಲ್ಲೇ ಬಿಸಿಯೂಟ ಅಡುಗೆ ತಯಾರಿ, 8 ಕೋಣೆಗಳಲ್ಲಿ 4 ಕೋಣೆಗಳ ಛಾವಣಿ ಶಿಥಿಲ, ಶಿಥಿಲಗೊಂಡ ಕೋಣೆಯಲ್ಲಿಯೇ ನಲಿ, ಕಲಿ ತರಗತಿ, ಗ್ರಂಥಾಲಯ, ಗಣಕಯಂತ್ರ. ಗ್ರಾಮಸ್ಥರು ನೀಡಿರುವ ದೇಣಿಗೆಯಲ್ಲೇ ಅಂದಗೊಂಡಿರುವ ಶಾಲಾ ಆವರಣ, ಗೋಡೆ ಬರಹಗಳು. 1911ರಲ್ಲಿ ನಿರ್ಮಾಣವಾಗಿರುವ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ. 
   

 • 3rd class Third class film team

  Bagalkot19, Jan 2020, 10:36 AM IST

  ಬಾದಾಮಿ ತಾಲೂಕಿನ ಕರ್ಲಕೊಪ್ಪೆ ಗ್ರಾಮ ದತ್ತು ಪಡೆದ '3rd ಕ್ಲಾಸ್' ಚಿತ್ರತಂಡ!

  ಸಾಮಾನ್ಯವಾಗಿ ಪ್ರತಿಯೊಂದು ಸಿನೆಮಾ ತಂಡದವರು ತಮ್ಮ ಸಿನೆಮಾ ರಿಲೀಸ್‌ಗೂ ಮುನ್ನ ತಮ್ಮ ಚಿತ್ರದ ಪ್ರಮೋಷನ್‌ಗಾಗಿ ಹತ್ತು ಹಲವು ವಿಭಿನ್ನ ಪ್ರಚಾರದ ಗಿಮಿಕ್‌ಗಳನ್ನು ಮಾಡುವುದು ಸಹಜ. ಆದರೆ ಇಲ್ಲೊಂದು ಚಿತ್ರತಂಡ ತಮ್ಮ ಚಿತ್ರದ ರಿಲೀಸ್‌ಗೂ ಮುನ್ನ ಕಟಿಂಗ್ಸ್, ಬ್ಯಾನರ್ಸ್‌, ಪೋಸ್ಟರ್ಸ್‌ ಎಂದು ಲಕ್ಷ ಲಕ್ಷ ಖರ್ಚು ಮಾಡದೇ ಸಾಮಾಜಿಕ ಕಾರ್ಯಗಳ ಮೂಲಕ ಪ್ರೇಕ್ಷಕರ ಮನಗೆಲ್ಲಲು ಹೊರಟಿದೆ.

 • electricity

  Karnataka Districts18, Jan 2020, 10:23 AM IST

  ಶಾಲಾ ಕಟ್ಟಡಕ್ಕೆ ವಿದ್ಯುತ್‌ ಸ್ಪರ್ಶದ ಅಪಾಯ: ಮಕ್ಕಳ ಜೀವಕ್ಕಿದೆ ಆಪತ್ತು!

  ವಿದ್ಯುತ್‌ ತಂತಿಗಳು ಶಾಲೆಯ ಗೋಡೆಯ ಮೇಲಿಂದ ಹಾದು ಹೋಗಿರುವುದರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿದ್ಯುತ್‌ ಸ್ಪರ್ಶ ಅಪಾಯದ ಭಯದಲ್ಲಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
   

 • school student

  Karnataka Districts12, Jan 2020, 11:07 AM IST

  ಸರ್ಕಾರಿ ಶಾಲೆಯ ದುಸ್ಥಿತಿ: 114 ಮಕ್ಕಳಿಗೆ ಒಬ್ಬರೇ ಶಿಕ್ಷಕ

  ಖಾಸಗಿ ಶಾಲೆಗಳ ಹೆಚ್ಚಳದಿಂದಾಗಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಕ್ಷೀಣಗೊಂ ಡಿದೆ. ಇದರ ನಡುವೆಯ 10 ಕ್ಕಿಂತಲೂ ಕಡಿಮೆ ಮಕ್ಕಳಿರುವ ಶಾಲೆಯನ್ನು ಪಬ್ಲಿಕ್ ಶಾಲೆಗೆ ವಿಲೀನ ಗೊಳಿಸುವ ಕಾರ್ಯ ನಡೆಯುತ್ತಿರುವುದು ಒಂದೆಡೆಯಾದರೆ, ಮಕ್ಕಳ ಸಂಖ್ಯೆ ಜಾಸ್ತಿಯಿದ್ದರೂ ಬೋಧಕರ ಸಂಖ್ಯೆ ಇಲ್ಲದಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇದುವ ಕಾಣಿಸುತ್ತಿಲ್ಲವೆ ಎಂದು ಅಲ್ಲಿನ ಪಾಲಕರು ಪ್ರಶ್ನಿಸುವಂತಾಗಿದೆ.