ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ‘ಲಾ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದಾರೆ. ಏನಪ್ಪಾ ಮೊದಲ ಸಿನಿಮಾದಲ್ಲೇ ಕೋರ್ಟ್ ಮೆಟ್ಟಿಲು ಏರಿದ್ದಾರಾ ಅಂತ ಹುಬ್ಬೇರಿಸಬೇಡಿ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಲಾ’ ಸಿನಿಮಾ ಕಾನೂನಿನ ಬಗ್ಗೆ ಇರುವ ನಾಯಕಿ ಪ್ರಧಾನ ಚಿತ್ರ.

ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

ಈ ಚಿತ್ರದಲ್ಲಿ ರಾಗಿಣಿ ಪದವೀಧರೆ ಆಗಿದ್ದು ತನ್ನದೇ ಪ್ರಕರಣದಿಂದ ಹೇಗೆ ಹೊರ ಬರುತ್ತಾರೆ ಎಂಬುವುದು ಚಿತ್ರದ ಒನ್ ಲೈನ್ ಸ್ಟೋರಿ.

ಈ ಹಿಂದೆ ರಚಿತಾ ರಾಮ್ ನಿರ್ದೇಶನದ ಕಿರುಚಿತ್ರ ‘ರಿಷಭ ಪ್ರಿಯಾ’ ದಲ್ಲಿ ಅಭಿನಯಿಸಿರುವ ರಾಗಿಣಿ ’ಲಾ’ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿ ಜರ್ನಿ ಬಗ್ಗೆ ಖಚಿತಪಡಿಸಿದ್ದಾರೆ.