Asianet Suvarna News Asianet Suvarna News

ಸ್ವಾಗತಕ್ಕೆ 5 ಲಕ್ಷದ ಪಟಾಕಿ: ಬಿಗ್‌ಬಾಸ್‌ ವಿನ್ನರ್‌ ನೋಡಲು ಕಿಕ್ಕಿರಿದ ಜನ ಸಾಗರ, ರೋಡ್ ಬ್ಲಾಕ್

ತೆರೆದ ಕಾರಿನಲ್ಲಿ ಬಂದ  Bigboss ಸ್ಪರ್ಧಿಯ ಸ್ವಾಗತಿಸಲು ಕಿಕ್ಕಿರಿದು ಸೇರಿದ ಜನ ತಮ್ಮ ನೆಚ್ಚಿನ ಬಿಗ್ಬಾಸ್ ಸ್ಪರ್ಧಿ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದಿದ್ದರು. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಗ್‌ಬಾಸ್ ಸ್ಪರ್ಧಿಗೂ ಈ ಮಟ್ಟದ ಅಭಿಮಾನಿಗಳ ಎಂದು ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

5 lakh firecrackers for welcome Hindi Bigboss winner People throng to see Munawar Faruqui akb
Author
First Published Jan 30, 2024, 5:51 PM IST

ಕನ್ನಡದಂತೆ ಹಿಂದಿ ಬಿಗ್‌ಬಾಸ್ 17 ಸೀಸನ್ ದಿನಗಳ ಹಿಂದಷ್ಟೇ ನಡೆದು ಹೋಯ್ತು, ಮುನಾವರ್ ಹಿಂದಿ ಬಿಗ್‌ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದರು, ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಈತನ ಸ್ವಾಗತಕ್ಕೆ ಸೇರಿದ ಜನರು ಮಾತ್ರ ಯಾವುದೇ ಖ್ಯಾತ ಸಿನಿಮಾ ತಾರೆಯರ ಅಭಿಮಾನಿಗಳಿಗಿಂತಲೂ ಕಡಿಮೆ ಇದ್ದಂತಿರಲಿಲ್ಲ, ರಸ್ತೆಯುದ್ಧಕ್ಕೂ ಜೇನು ನೊಣದಂತೆ ಸೇರಿದ್ದ ಜನರ ಸಂಖ್ಯೆ ಸಾವಿರ ದಾಟಿತ್ತು. ತೆರೆದ ಕಾರಿನಲ್ಲಿ ಬಂದ  ಮುನಾವರ್‌ನ ಸ್ವಾಗತಿಸಲು ಕಿಕ್ಕಿರಿದು ಸೇರಿದ ಜನ ತಮ್ಮ ನೆಚ್ಚಿನ ಬಿಗ್ಬಾಸ್ ಸ್ಪರ್ಧಿ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದಿದ್ದರು. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಗ್‌ಬಾಸ್ ಸ್ಪರ್ಧಿಗೂ ಈ ಮಟ್ಟದ ಅಭಿಮಾನಿಗಳ ಎಂದು ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

ತಾನು ವಾಸ ಮಾಡುವ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಕಿಕ್ಕಿರಿದು ಸೇರಿದ ಅಭಿಮಾನಿಗಳನ್ನು ಕಂಡು ಒಂದು ಕ್ಷಣ ತಾನೇ ದಂಗಾದ ಮುನಾವರ್ ಅವರು ಬಳಿಕ ತೆರೆದ ಕಾರಿನ ಮೇಲೆ ನಿಂತು ತನ್ನ ಅಭಿಮಾನಿಗಳಿಗೆ ಸೆಲ್ಯೂಟ್ ಹೊಡೆದ್ದು ಧನ್ಯವಾದ ಸಲ್ಲಿಸಿದ್ದಾರೆ.  ಮುನಾವರ್ ಅವವರು ಸಹ ಸ್ಪರ್ಧಿ ಅಭಿಷೇಕ್ ಕುಮಾರ್ ಅವರನ್ನು ಸೋಲಿಸಿ ಬಿಗ್ಬಾಸ್ 17ರ ಸೀಸನ್‌ನ ವಿನ್ನರ್ ಆದರು. ಇನ್ನು ತನ್ನ ಗೆಲುವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಗೆಲ್ಲುವುದಕ್ಕಾಗಿಯೇ ಹೋಗಿದ್ದೆ, ಮನೆಯಲ್ಲಿ ಒಂದು ನಿಮಿಷವೂ ನಾನು ನನ್ನ ಗುರಿ ಮರೆತಿರಲಿಲ್ಲ ಎಂದು ಹೇಳಿದ್ದರು. 

ಮುನಾವರ್ ಫಾರುಕಿ ಅವರ ಸ್ವಾಗತದ ವೇಳೆ 5 ಲಕ್ಷಕ್ಕೂ ಅಧಿಕ ಮೌಲ್ಯದ ಪಟಾಕಿ ಸುಡಲಾಗಿತ್ತು ಎಂದು ವರದಿಯಾಗಿದೆ. ಮುನಾವರ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಸ್ವಾಗತಕ್ಕೆ 5 ಲಕ್ಷ ಮೌಲ್ಯದ ಪಟಾಕಿಗಳನ್ನು ಹಾರಿಸಿದ್ದರು ಎಂದು ಮಾಧ್ಯಮವೊಂದು ವರದಿ ಆಗಿದೆ. ಇದರ ಜೊತೆ ಜೊತೆಗೆ ಕೆಲವರು ಬಿಗ್‌ಬಾಸ್ ಮನೆ ವಿನ್ನರ್ ಮೊದಲೇ ಫಿಕ್ಸ್ ಆಗಿರುತ್ತೆ ಎಂದು ಆರೋಪಿಸಿದ್ದರು. ಆದರೆ ಇದನ್ನು ಮುನಾವರ್ ನಿರಾಕರಿಸಿದ್ದಾರೆ. ಹಿಂದಿ ಬಿಗ್ಬಾಸ್ ಶೋದ ಫೈನಲ್‌ ವರೆಗೂ ಇತರ ಸ್ಪರ್ಧಿಗಳಾದ ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್ ಹಾಗೂ ಅರುಣ್ ಮಶೆಟ್ಟಿ ಮನೆಯಲ್ಲಿ ಉಳಿದಿದ್ದರು.  ಹಿಂದಿ ಬಿಗ್‌ಬಾಸ್‌ನಲ್ಲೂ ಉಡುಗೊರೆಯಾಗಿ ಮುನಾವರ್ ಫಾರುಕಿ ಅವರಿಗೆ 50 ಲಕ್ಷ ಹಣ ಹಾಗೂ ಒಂದು ಕಾರು ಗಿಫ್ಟ್ ಆಗಿ ಸಿಕ್ಕಿದೆ.

ಮುನಾವರ್ ಯಾರು ?

ಮುನಾವರ್ ಅವರು ಸ್ಯಾಂಡ್ ಆಫ್ ಕಾಮಿಡಿಯನ್, ಈ ಹಿಂದೆ ಹಿಂದಿ ಟಿವಿ ಲೋಕದ ಲಾಕಪ್ ಶೋದಲ್ಲೂ ಭಾಗವಹಿಸಿ ಜಯಶಾಲಿಯಾಗಿದ್ದರು.  ಇದೇ ಮುನಾವರ್‌ ಕೆಲ ದಿನಗಳ ಹಿಂದೆ ಶ್ರೀರಾಮನ ಬಗ್ಗೆ ಸಿಕ್ಕಾಪಟ್ಟೆ ಅವಹೇಳನ ಮಾಡಿರುವ ಆರೋಪ ಹೊತ್ತಿದ್ದಾರೆ. ಅಯೋಧ್ಯೆಯಲ್ಲಿ ಹಲವಾರು ಶತಮಾನಗಳ ಬಳಿಕ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆಯ ಖುಷಿಯಲ್ಲಿ ಎಲ್ಲರೂ ಇರುವ ಸಂದರ್ಭದಲ್ಲಿ ಮುನಾವರ್‌ ಶ್ರೀರಾಮನ ಬಗ್ಗೆ ಗೇಲಿ ಮಾಡಿದ್ದಾರೆ. ಇಂಥ ಮುನಾವರ್‌ ಅವರನ್ನು ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ ವಿಜೇತ ಮಾಡಿದ್ದು ಹೇಗೆ ಎನ್ನುವ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. 

ಶ್ರೀರಾಮನ ಅವಹೇಳನ ಮಾಡಿದವ, ಕ್ರಿಮಿನಲ್‌ ಕೇಸ್‌ನಲ್ಲಿ ಜೈಲಿಗೆ ಹೋದವನಿಗೆ ಬಿಗ್‌ಬಾಸ್‌ ಟ್ರೋಫಿ!

ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಕೂಡ ಡೋಂಗ್ರಿ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವ ಮುನಾವರ್‌ ಅವರ  ಕರಾಳ ಸತ್ಯವನ್ನು ತೋರಿಸಿದ್ದಾರೆ.   ಹಿಂದೂ ವಿರೋಧಿ ವ್ಯವಸ್ಥೆಯನ್ನು ಬಿಂಬಿಸಲು ಬಿಗ್‌ಬಾಸ್‌ನಂಥ ವೇದಿಕೆಯನ್ನು ಸಲ್ಮಾನ್‌ ಖಾನ್‌ನಂಥವರು ಎಷ್ಟು ಸಲೀಸಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೀಕೆಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಮುನಾವರ್‌ ಬಗ್ಗೆ  ಹುಡುಗಿಯರ ಜೀವನದ ಜೊತೆ ಆಟವಾಡುವಾತ ಎನ್ನುವ ಕಳಂಕವೂ ಹೊತ್ತಿದೆ. ಇಷ್ಟೇ ಸಾಲದು ಎನ್ನುವುದಕ್ಕೆ ಮುನಾವರ್‌ ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಕೂಡ ಬಂದವರು. ಬಿಗ್‌ಬಾಸ್‌ನಲ್ಲಿ ಯಾರು ಗೆಲ್ಲಬೇಕು ಎಂದು ಮೊದಲೇ ನಿಗದಿಯಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. 

ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

 

Follow Us:
Download App:
  • android
  • ios