Asianet Suvarna News Asianet Suvarna News

ಶಾಕ್ ಪ್ರೂಫ್ ಮನೆ ನಿರ್ಮಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ಮನೆ ನಿರ್ಮಿಸುವ ವೇಳೆ ಶಾಕ್ ಪ್ರೂಫ್ ಮನೆ ಕಟ್ಟುವುದು ಹೇಗೆ? ಶಾಕ್ ಪ್ರೂಫ್ ಮನೆ ಕಟ್ಟುವಾಗ ಯಾವೆಲ್ಲ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌ಗಳು...

Some useful Tips for How to wire your house shock proof
Author
Bengaluru, First Published Jan 9, 2020, 5:57 PM IST

ಮನೆ ನಿರ್ಮಾಣ ಮಾಡುವಾಗ ಎಲೆಕ್ಟ್ರಿಶಿಯನ್‌ಗಳು,  ವೈರಿಂಗ್ ಮತ್ತು ಪೈಪ್ ಅಳವಡಿಸುವಾಗ ಗುಣಮಟ್ಟವನ್ನು  ಗಮನದಲ್ಲಿಟ್ಟುಕೊಳ್ಳಬೇಕು. ಎಳ್ಳಷ್ಟು ಅಜಾಗರೂಕತೆ ಅಥವಾ ಕಳಪೆ ಸರಕು ಬಳಕೆಯು ಮಾರಕ ಅವಘಡಗಳನ್ನು ತಂದೊಡ್ಡಬಹುದು. ಇಂತಹ ಕೆಲಸಗಳು ಸುಲಭವಾಗಿ ಮಾಡುವಂತಹದ್ದಲ್ಲ.  ನಿಮ್ಮ ಮನೆಯನ್ನು ಕಟ್ಟುವ ಸಂದರ್ಭದಲ್ಲಿ,  ಎಲೆಕ್ಟ್ರಿಕ್ ಕೆಲಸಗಳನ್ನು ಮಾಡುವಾಗ ಈ ಎಲ್ಲದರ ಬಗ್ಗೆ ನೀವು ಗಮನ ಕೊಡಬೇಕು. ಮನೆಕಟ್ಟುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡಿಸುವಾಗ ಗಮನದಲ್ಲಿಡಬೇಕಾದ ಉಪಯುಕ್ತ  ಟಿಪ್ಸ್ ಇಲ್ಲಿವೆ....

ಲೋಡ್‌ಗೆ ಅನುಗುಣವಾಗಿ ಪಾಯಿಂಟ್‌ಗಳಿವೆಯೇ ಎಂಬುವುದನ್ನು ಎಲೆಕ್ಟ್ರಿಶಿಯನ್ ಮೊದಲು ಖಚಿತಪಡಿಸಿಕೊಳ್ಳಬೇಕು. ಇದರ ಜತೆಗೆ ವಿವಿಧ ಪಾಯಿಂಟ್‌ಗಳನ್ನು ಸಂಪರ್ಕಿಸುವ ವೈರ್ ಲೋಡ್ ಸಾಮರ್ಥ್ಯ ಸರಿಯಾಗಿದೆಯೇ ಎನ್ನುವುದನ್ನು ಗಮನಿಸಿ. ಸಾಮಾನ್ಯವಾಗಿ ಸರಿಯಾಗಿ ಲೋಡ್ ನಿರ್ವಹಿಸುವ ವೈರ್‌ಗಳ ಬಗ್ಗೆ ಎಲೆಕ್ಟ್ರಿಶಿಯನ್‌ಗಳು ನಿರ್ಲಕ್ಷ್ಯ ವಹಿಸುತ್ತಾರೆ. ಒಂದು ವೇಳೆ ದೋಷಯುಕ್ತ ಅಥವಾ ಕಡಿಮೆ ಸಾಮರ್ಥ್ಯದ ವೈರ್ ಬಳಸಿದರೆ, ಮನೆಗೆ ಬೆಂಕಿ ಬೀಳಬಹುದು, ಇಲ್ಲವೇ ಮನುಷ್ಯನ ಜೀವವೂ ಹೋಗಬಹುದು.

ಎಲ್ಲಾ ಎಲೆಕ್ಟ್ರಿಕ್ ಕೆಲಸಗಳು ಹಾಗೂ ಅಳವಡಿಕೆಗಳು ಭಾರತದ ಹೊಸ ಎಲೆಕ್ಟ್ರಿಕ್ ನೀತಿ ನಿಯಮಗಳಿಗೊಳಪಟ್ಟಿರಬೇಕು. ಎಲ್ಲಾ ಎಲೆಕ್ಟ್ರಿಕ್ ಸರಕುಗಳು ಗುಣಮಟ್ಟದ ಉತ್ಫಾದಕರಿಂದ ತಯಾರಾಗಿದ್ದು, ISI ಮಾನ್ಯತೆ ಹೊಂದಿರಬೇಕು.

RCC ಸ್ಲ್ಯಾಬ್ ಹಾಗೂ ಗೋಡೆಗಳಿಗೆ ಪೈಪ್‌ಗಳನ್ನು, ಜಂಕ್ಷನ್ ಬಾಕ್ಸ್ ಹಾಗೂ ಫ್ಯಾನ್ ಬಾಕ್ಸ್ ಅಳವಡಿಸುವಾಗ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು.  ಒಂದು ವೇಳೆ ತಪ್ಪಾಗಿ ಅಳವಡಿಸಿದರೆ, ಆ ಬಳಿಕ ಎಂತಹ ಅವಘಡಗಳು ಬೇಕಾದರೂ ಸಂಭವಿಸಬಹುದು. ಇಲ್ಲವೆಂದರೆ ತಪ್ಪಾದ ಅಳವಡಿಕೆಯನ್ನು ಆ ಬಳಿಕ ಕಿತ್ತುಹಾಕಬೇಕಾಗಬಹುದು. ಹೀಗಾಗಿ ಇಂತಹ ಅಚಾತುರ್ಯಗಳನ್ನು ತಡೆಯಲು, ಮೊದಲೇ  ಗಮನ ಹರಿಸಬೇಕು.

ಮನೆಯನ್ನು ಎಲೆಕ್ಟ್ರಿಕ್ ಶಾಕ್ ಪ್ರೂಫ್ ಅನ್ನಾಗಿ ನಿರ್ಮಿಸಲು ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ವೈರಿಂಗ್ ಮಾಡುವಾಗ ವಿತರಣಾ ವ್ಯವಸ್ಥೆಗನುಗುಣವಾಗಿರಬೇಕು. ಬೋರ್ಡ್‌ಗೆ ಮುಖ್ಯ ಹಾಗೂ ಬ್ರ್ಯಾಂಚ್ ಸೆಂಟರ್’ಗಳು ಸೂಕ್ತ ಅಂತರದಲ್ಲಿರಬೇಕು. ಇದು ಫ್ಯೂಸ್’ನಿಂದ ಹೊರತಾಗಿರಬೇಕು. ಸಾಧ್ಯವಿದ್ದರೆ, ಎಲ್ಲಾ ಕಂಡಕ್ಟರ್’ಗಳು ವಾಲ್ ಹಾಗೂ ಸೀಲಿಂಗ್ ಮೂಲಕ ಕಾರ್ಯ ನಿರ್ವಹಿಸುವಂತಿರಬೇಕು. ಹೀಗಾದಲ್ಲಿ ಸಮಸ್ಯೆ ಬಂದಾಗ ಸುಲಭವಾಗಿ ಪರೀಕ್ಷಿಸಬಹುದು.

ಯಾವುದೇ ಸಂದರ್ಭದಲ್ಲೂ ವೈರಿಂಗ್ ಸೀಲಿಂಗ್ ಮೇಲಿರಬಾರದು.  ಎರಡು ಸರ್ಕಿಟ್‌ಗಳ ನಡುವಿನ ಅಂತರ ಕನಿಷ್ಠ 7 ಅಡಿಯಾದರೂ ಇರಲಿ.  ಎಲ್ಲಾ ವೈರ್ ಮತ್ತು ಉಪಕರಣಗಳು ISI ಮಾನದಂಡಗಳಿಗೆ ಅನುಗುಣವಾಗಿರಬೇಕು.

ಲೈಟ್ ಸರ್ಕ್ಯೂಟ್ ಪಾಯಿಂಟ್’ಗಳ ಸಂಖ್ಯೆ 10ಕ್ಕಿಂತ ಹೆಚ್ಚಿರಬಾರದು, ಹಾಗೆಯೇ ಒಟ್ಟಾರೆ ವಿದ್ಯುತ್ ಲೋಡ್ 800 ವ್ಯಾಟ್ ಮೀರಬಾರದು. ಒಂದು ಸರ್ಕ್ಯೂಟ್ ಎಲೆಕ್ಟ್ರಿಕ್ ಮೀಟರ್ ಅಥವಾ ಮುಖ್ಯ ಫ್ಯೂಸ್ ಸರ್ಕ್ಯೂಟ್’ಗೆ ಸಂಪರ್ಕ ಹೊಂದಿರಬೇಕು. ಪವರ್ ವೈರಿಂಗ್ ಸರ್ಕ್ಯೂಟ್ ಪಾಯಿಂಟ್’ಗಳು ಎರಡಕ್ಕಿಂತ ಹೆಚ್ಚಿರಬಾರದು. ಹಾಗೂ ವೈಯರ್ ಸೈಜ್ 1.5 MM ಕಾಫರ್ ಸುತ್ತಳತೆ ಹಾಗೂ 2 Mm ಅಲ್ಯೂಮಿನಿಯಂ ಸುತ್ತಳತೆ ಹೊಂದಿರಬೇಕು.

ಸ್ವಿಚ್ ಬೋರ್ಡ್ ಯಾವತ್ತಿಗೂ 1.5 ಮೀಟರ್ ಎತ್ತರಕ್ಕಿಂತ ಹೆಚ್ಚಿರಬೇಕು. ಅಡ್ಡವಾಗಿ ಎಳೆದಿರುವ ವೈಯರ್’ಗಳು ಕನಿಷ್ಠ 3 ಮೀಟರ್ ಎತ್ತರದಲ್ಲಿರಬೇಕು.

ಕನಿಷ್ಠವೆಂದರೂ  14 SWG ಕಾಪರ್ ಹಾಗೂ 4 mm ಅಲ್ಯೂಮಿನಿಯಂ ಅರ್ಥ್ ವೈಯರ್’ನಲ್ಲಿರಬೇಕು. ಫ್ಯೂಸ್ ವೈಯರ್’ಗಳು ಫ್ಯೂಸ್ ವೈಯರ್’ಗಳಿಗೆ ಸಂಪರ್ಕ ಹೊಂದಿರಬೇಕು. ಇನ್ನು ನ್ಯೂಟ್ರಲ್ ಸಂಪರ್ಕಗಳು ನ್ಯೂಟ್ರಲ್’ಗೆ ಸಂಪರ್ಕ ಹೊಂದಿರಬೇಕು. ಎಲ್ಲಾ ಸ್ವಿಚ್’ಗಳು ಫೇಸ್ ವೈರ್ ಸಂಪರ್ಕ ಹೊಂದಿರಬೇಕು. ಇನ್ನು ಲೈಟ್ ಸರ್ಕ್ಯೂಟ್’ನ ಅರ್ಥ್ ವೈಯರ್’ಗಳು ಕನಿಷ್ಟವೆಂದರೂ 1 mm ಕಾಫರ್ ಹಾಗೂ 1.5 mm ಸುತ್ತಳತೆಯ ಅಲ್ಯೂಮೀನಿಯಂ ಹೊಂದಿರಬೇಕು. ಎಲ್ಲಾ ಕಂಡಕ್ಟರ್‌ಗಳು ತಾಮ್ರದಿಂದಲೇ ಮಾಡಲ್ಪಟ್ಟಿರಬೇಕು.

ಸುಡುವ ಘಟಕಾಂಶ, ಕತ್ತರಿಸಿದ/ಹರಿದ ವೈಯರ್’ಗಳು, ಸಡಿಲ/ಮುಕ್ತ ಸಂಪರ್ಕಗಳು ಹಾಗೂ ತುಕ್ಕು ಹಿಡಿದ ಪಾಯಿಂಟ್’ಗಳನ್ನು ಬಳಸದಿದ್ದರೆ ಓಪನ್ ಸರ್ಕ್ಯೂಟ್ ಆಗದಂತೆ ತಡೆಯಬಹುದು. ತುಂಡಾದ ವೈಯರ್’ಗಳನ್ನು ಅಳವಡಿಸದೇ ಇರುವುದರಿಂದ ಶಾರ್ಟ್ ಸರ್ಕ್ಯೂಟ್ ತಡೆಯಬಹುದು. ಅರ್ಥ್ ಫಾಲ್ಟ್ ತಡೆಯಬೇಕಾದರೆ, ತುಂಡಾದ ಅಥವಾ ಲೂಸ್ ಸಂಪರ್ಕ ಹೊಂದದಂತೆ ನೋಡಿಕೊಳ್ಳಬೇಕು. ವೋಲ್ಟೇಜ್ ಹೆಚ್ಚಿಸಲು ಮತ್ತು ಹಠಾತ್ ವಿದ್ಯುತ್ ಅಘಾತದಿಂದ ಮನುಷ್ಯರನ್ನು ರಕ್ಷಿಸಲು ಅರ್ಥಿಂಗ್ ಅನ್ನು ಮಾಡಬೇಕು. ಮಿಂಚು ಗುಡುಗುಗಳಿಂದ ಕಟ್ಟಡವನ್ನು ರಕ್ಷಿಸಲು ಮಿಂಚಿನ ತಂತಿಯನ್ನು ನೆಲಕ್ಕೆ ಸರಿಯಾಗಿ ಜೋಡಿಸಬೇಕು.

Follow Us:
Download App:
  • android
  • ios