ಪದವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಬಾಕಿಯಿದ್ದ ವಿಷಯಗಳ ಪರೀಕ್ಷೆ ಬರೆಯದೆ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ. ಯಾವುದೇ ಎಕ್ಸಾಂ ಇಲ್ಲದೆ ವಿದ್ಯಾರ್ಥಿಗಳು ಮುಂದಿನ ಸೆಮೆಸ್ಟರ್ ತಲುಪಿದ್ದಾರೆ. 1ಮತ್ತು 3ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಲಾಗಿದೆ. 2 ಮತ್ತು 4ನೇ ಸೆಮಿಸ್ಟರ್‌ಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ.

ಕೋವಿಡ್ ಹಿನ್ನಲೆ ಮೈಸೂರು ವಿಶ್ವವಿದ್ಯಾಲಯ ಈ ನಿರ್ಧಾರ ಕೈಗೊಂಡಿದೆ. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿಂತ ರಾಜ್ಯದ ಮೊದಲ ಇಂತಹದೊಂದು ತೀರ್ಮಾನ ಮಾಡಿದೆ.

ಯಾವ ಜೀವಿ ಹಸಿವಾದಾಗ ಕಲ್ಲನ್ನು ತಿನ್ನುತ್ತದೆ ? ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ

ಕಳೆದ ಸೆಮಿಸ್ಟರ್ ನಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಸದ್ಯ ಫೇಲ್ ಆಗಿರುವ ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ ನೀಡಲಾಗಿದ್ದು, ಯುಜಿಸಿ ಗೈಡ್ ಲೈನ್ ಪ್ರಕಾರ ಯುಜಿ, ಪಿಜಿ ಎಕ್ಸಾಮ್ ಮುಗಿಸಿದ್ದೇವೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಮಾಡಲಾಗಿದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಡಾ. ಮಹದೇವನ್ ಹೇಳಿದ್ದಾರೆ.

ಅಂಕಪಟ್ಟಿಯನ್ನು ನೀಡಲಾಗಿದೆ. ಈ ಅಂಕಪಟ್ಟಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಪರೀಕ್ಷೆ ಬರೆದು ಪಾಸ್ ಆದ ರೀತಿಯಲ್ಲೇ ಅಂಕ ಪಟ್ಟಿ ಇರಲಿದೆ. ಕಾರಣ ಸ್ಕಾಲರ್ಶಿಪ್ ಪಡೆಯಲು ನವೆಂಬರ್ 20 ಕೊನೆ ದಿನವಾಗಿತ್ತು. ಈ ಹಿನ್ನಲೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದಿನಾಂಕ ಮುಗಿಯುವ ಅವಧಿಯೊಳಗೆ ಅಂಕಪಟ್ಟಿ ವಿತರಿಸಿದೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳೇ ಗಮನಿಸಿ; SSLC, PUC ಪರೀಕ್ಷೆಯಲ್ಲಿ ಬದಲಾವಣೆ, ಶೈಕ್ಷಣಿಕ ವರ್ಷವೂ ವಿಸ್ತರಣೆ?

ಕೊರೊನಾದಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಅಂತವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 113 ಅರ್ಜಿಗಳು ಬಂದಿವೆ. ಈ ಟೈಮ್ ಟೇಬಲ್ ರೆಡಿಯಾಗಿದೆ. ಪರೀಕ್ಷೆ ಮುಗಿದ ಮುರ್ನಾಲ್ಕು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ ರಿಸಲ್ಟ್ ಬರಲಿದೆ. ಆ ಮೂಲಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ  ಡಾ. ಮಹದೇವನ್ ಹೇಳಿದ್ದಾರೆ.