Asianet Suvarna News Asianet Suvarna News

ಸಸ್ಟೇನ್ ಫಿಯೆಸ್ಟಾ 2024: ತಂತ್ರಜ್ಞಾನದಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ, ಡಾ. ಚೆಂಗಪ್ಪ ಮುಂಜಂದಿರ

ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಗಡಿಗಳನ್ನು ಮೀರಿ ವಿವಿಧ ಕ್ಷೇತ್ರಗಳನ್ನು ಅನ್ವೇಷಿಸಲು ಪ್ರೇರೇಪಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು UNSDG ಗುರಿಗಳನ್ನು ಅರಿಯುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ತಿಳಿಸಿದ ಹಿರಿಯ ತಂತ್ರಜ್ಞ, HP ಎಂಟರ್‌ಪ್ರೈಸ್ ಮತ್ತು IEEE ಸೈಟ್ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ. ಚೆಂಗಪ್ಪ ಮುಂಜಂದಿರ  

Solving social problems with technology Says Dr. Chengappa Munjandira grg
Author
First Published Oct 3, 2024, 7:12 PM IST | Last Updated Oct 3, 2024, 7:12 PM IST

ಬೆಂಗಳೂರು(ಅ.03):  ಕೃಷಿ ಮತ್ತು ಸುಸ್ಥಿರತೆಯಲ್ಲಿ ಡೇಟಾ ಚಾಲಿತ ತಂತ್ರಜ್ಞಾನಗಳ ಮಹತ್ವದ ವಿಚಾರಗಳ ಬಗ್ಗೆ ಕ್ರಾಪಿನ್‌ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಕುಮಾರ್ ರಾಜಮಣಿ ಅವರು ತಿಳಿಸಿಕೊಟ್ಟರು. 

IEEE ಬೆಂಗಳೂರು ವಿಭಾಗದ ಸೈಟ್ ತಂಡವು, IEEE ಬೆಂಗಳೂರು ವಿಭಾಗದ ಸ್ಯಾಕ್ ಮತ್ತು ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ (RVCE) ಸಹಯೋಗದೊಂದಿಗೆ ಸಸ್ಟೇನ್ ಫಿಯೆಸ್ಟಾ 2024 ಯಶಸ್ವಿಯಾಗಿ ಆಯೋಜಿಸಿದೆ. ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ 47 ತಂಡಗಳು ಕರ್ನಾಟಕದ ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದವು, ಮತ್ತು ತಂತ್ರಜ್ಞಾನದಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಪ್ರಸ್ತುತ ಪಡಿಸಿದರು.

ಪದವಿ ಕಾಲೇಜಿನ 5000 ಮಂದಿ ಅತಿಥಿ ಉಪನ್ಯಾಸಕರ ನೌಕರಿಗೆ ಕುತ್ತು?

ಇದೆ ಸಂದರ್ಭದಲ್ಲಿ ಹಿರಿಯ ತಂತ್ರಜ್ಞ ಹಾಗೂ HP ಎಂಟರ್‌ಪ್ರೈಸ್ ಮತ್ತು IEEE ಸೈಟ್ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ. ಚೆಂಗಪ್ಪ ಮುಂಜಂದಿರ ಮಾತನಾಡಿ, ಹೊಸ ಪ್ರತಿಭೆಯನ್ನು ಬೆಳೆಸುವ ಬಲವಾದ ಬದ್ಧತೆಯೊಂದಿಗೆ, ವಿದ್ಯಾರ್ಥಿ ಸಮುದಾಯದ ನಡುವೆ ತಂತ್ರಜ್ಞಾನ ಶಿಕ್ಷಣದ ಅಂತರ್ ಶ್ರೇಣಿಯ ಸಂಶೋಧನೆಯನ್ನು ಉತ್ತೇಜಿಸುವ ಮಹತ್ವವನ್ನು ವಿವರಿಸಿದರು. 

ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಗಡಿಗಳನ್ನು ಮೀರಿ ವಿವಿಧ ಕ್ಷೇತ್ರಗಳನ್ನು ಅನ್ವೇಷಿಸಲು ಪ್ರೇರೇಪಿಸಿದ ಹಿರಿಯ ತಂತ್ರಜ್ಞ, HP ಎಂಟರ್‌ಪ್ರೈಸ್ ಮತ್ತು IEEE ಸೈಟ್ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ. ಚೆಂಗಪ್ಪ ಮುಂಜಂದಿರ ಅವರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು UNSDG ಗುರಿಗಳನ್ನು ಅರಿಯುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ತಿಳಿಸಿದರು. 

"ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಜ್ಞಾನಾರ್ಜನೆ ಅಷ್ಟೇ ಅಲ್ಲದೆ, ಬದಲಿಗೆ ತಾಂತ್ರಿಕ ಶಕ್ತಿಯನ್ನು ಬಳಸಿ ಶಾಶ್ವತ ಭವಿಷ್ಯವನ್ನು ಕಲ್ಪನೆ ಮಾಡುವುದು ಕೂಡ ಅದು." ಅವರು ಇಂಜಿನಿಯರಿಂಗ್ ಸಮುದಾಯವು UNSDG ಗುರಿಗಳಿಗೆ ಪ್ರಾಮುಖ್ಯವಾಗಿ ಪಾಲ್ಗೊಳ್ಳಬೇಕೆಂದು ಒತ್ತಿ ಹೇಳಿದರು. 

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಇನ್ಮುಂದೆ ವಾರದ ಏಳು ದಿನವೂ ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ!

ಕೃತಕ ಬುದ್ಧಿವಂತಿಕೆ (AI) ಮತ್ತು ಬ್ಲಾಕ್‌ಚೈನ್‌ನಂತಹ ಆವಿಷ್ಕಾರಾತ್ಮಕ ತಂತ್ರಜ್ಞಾನಗಳು ಜಾಗತಿಕ ಸವಾಲುಗಳಿಗೆ (ಹವಾಮಾನ ಬದಲಾವಣೆ, ನೀರಿನ ಕೊರತೆ, ಆಹಾರ ಭದ್ರತೆ ಮುಂತಾದವುಗಳಿಗೆ) ಪರಿಹಾರಗಳನ್ನು ನೀಡಲು ಅತ್ಯಂತ ಸಾಮರ್ಥ್ಯವುಳ್ಳವು. ವಿದ್ಯಾರ್ಥಿಗಳು ಈ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಿ ಅಂತರ್ ಶ್ರೇಣಿಯ ಸಂಶೋಧನೆಗಳನ್ನು ಕೈಗೊಳ್ಳಲು ಶೈಕ್ಷಣಿಕ ಸಮುದಾಯವು ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಹೊಂದಿದೆ ಎಂದು ಒತ್ತಿ ಹೇಳಿದರು. 

ಇದೆ ಕಾರ್ಯಕ್ರಮದಲ್ಲಿ IEEE ವಿಭಾಗದ ಮುಖ್ಯಸ್ಥರಾದ ಡಾ. ಶೈಲಶ್ರೀ ಎನ್‌ ರವರು ಉಪಸ್ಥಿತರಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಓಡಗೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Latest Videos
Follow Us:
Download App:
  • android
  • ios