ಬೆಂಗಳೂರು (ಅ. 12): ಚಿಕ್ಕಮಗಳೂರಿನಲ್ಲಿ ಕೊರೊನಾಗೆ ಶಿಕ್ಷಕ ಪುಟ್ಟಪ್ಪ ಬಲಿಯಾಗಿದ್ದಾರೆ. ಮನೆಯ ಯಜಮಾನನನ್ನು ಕಳೆದುಕೊಂಡು ಕುಟುಂಬ ಕಣ್ಣೀರಿಡುತ್ತಿದೆ. ಇಲ್ಲಿನ ಕಡೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೊರೊನಾ ವಾರಿಯರ್ಸ್ ಜೊತೆ ಪುಟ್ಟಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು. ಆಗ ಸೋಂಕು ದೃಢಪಟ್ಟಿತ್ತು. 

ಇನ್ನು ಬಾಗಲಕೋಟೆಯಲ್ಲಿ ಶಿಕ್ಷಕರಾಗಿದ್ದ ಜಯರಾಜ್ ಚವಾಣ್ ಎಂಬುವವರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. 

ವಿಜಯಪುರದಲ್ಲಿ ಮಹಾಮಾರಿ ವೈರಸ್‌ಗೆ 59 ವರ್ಷದ ಶಿಕ್ಷಕಿ ಶಾಂತಲಾ ದೇಸಾಯಿ ತುತ್ತಾಗಿ ಸಾವನ್ನಪ್ಪಿದ್ದಾರೆ. 

ಬಳ್ಳಾರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪುಟ್ಟವೀರಭದ್ರಪ್ಪ ಕೋವಿಡ್‌ನಿಂದ ಸಾವನ್ನಪ್ಪಿದ್ದು, ಒಂದೇ ವಾರದಲ್ಲಿ ಇವರ ತಾಯಿ ಕೂಡಾ ಸಾವನ್ನಪ್ಪಿದ್ದಾರೆ.