ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ

ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಮಕ್ಕಳ ಬಗ್ಗೆ ಗಮನ ಹರಿಸಿದ್ದು, ವಿದ್ಯಾಗಮ ಯೋಜನೆಯಡಿ ಮನೆ ಪಾಠ ಕಲಿಯುತ್ತಿರುವ ಮಕ್ಕಳಿಗೆ ಸಹಕಾರ ಸಚಿವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.

Planing To distribution Milk Powder To School Students Says Minister Somashekhar

ರಾಮನಗರ, (ಸೆ.12): ಕೊರೋನಾ ಕಾರಣದಿಂದ ವಿದ್ಯಾಗಮ ಯೋಜನೆಯಡಿ ಮನೆ ಪಾಠ ಕಲಿಯುತ್ತಿರುವ ಮಕ್ಕಳಿಗೆ ಹಾಲಿನ ಪುಡಿ ನೀಡುವ ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್ ಹೇಳಿದ್ದಾರೆ.

ಈ ಬಗ್ಗೆ ರಾಮನಗರದಲ್ಲಿ ಇಮದು (ಶನಿವಾರ) ಮಾತನಾಡಿದ ಅವರು, ಕೋವಿಡ್ ಕಾರಣಕ್ಕೆ ಮುಂಬೈ ಮೊದಲಾದ ಪ್ರದೇಶಗಳಿಗೆ ಹಾಲಿನ ರಫ್ತು ಬಂದ್‌ ಆಗಿತ್ತು. ಹೀಗೆ ಹೆಚ್ಚುವರಿಯಾಗಿ ಉಳಿದ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಿ ಇಡಲಾಗಿದೆ. ಅದ್ರಂತೆ, ಸರಿ ಸುಮಾರು 126 ಸಾವಿರ ಟನ್‌ ಹಾಲಿನ ಪುಡಿಯಿದ್ದು, ಅದನ್ನ ಶಾಲಾ ಮಕ್ಕಳಿಗೆ ನೀಡುವ ಬಗ್ಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗ್ತಿದೆ ಎಂದು ತಿಳಿಸಿದರು.

ಶಾಲೆ ಪ್ರಾರಂಭಕ್ಕೆ ಕೇಂದ್ರ ಗೈಡ್‌ಲೈನ್ಸ್‌: ಮಹತ್ವ ಮಾಹಿತಿ ನೀಡಿದ ರಾಜ್ಯ ಹಿರಿಯ ಶಿಕ್ಷಣ ಅಧಿಕಾರಿ

ಹಾಲಿನ ಪುಡಿಯು ಉತ್ಪಾದನೆಯಾಗಿ ತಿಂಗಳುಗಳು ಕಳೆದಿದ್ದು, ಇನ್ನು ಹೆಚ್ಚೆಂದರೆ ಒಂದು ವರ್ಷ ಶೇಖರಿಸಬಹುದು. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಇದನ್ನು ವಿತರಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.

ಮಕ್ಕಳ ದೈಹಿಕ ಬೆಳವಣಿಗೆ, ಪೌಷ್ಟಿಕತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ  'ಕ್ಷೀರ ಭಾಗ್ಯ' ಯೋಜನೆಯಡಿ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ನೀಡುತ್ತಿದೆ.

Latest Videos
Follow Us:
Download App:
  • android
  • ios