ಕೊರೋನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿಟಿಯು ಕ್ರಮಕ್ಕೆ ಅಸಮಾಧಾನಗೊಂಡಿದ್ದು ಕೊರೋನಾ ಹಿನ್ನೆಲೆ ಪರೀಕ್ಷೆ ಬರೆಯಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಬೆಂಗಳೂರು (ಏ.21):  ವಿಟಿಯು ಪರೀಕ್ಷೆ ಮುಂದೂಡದ್ದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆತಂಕದ ಮಧ್ಯೆ ಪರೀಕ್ಷೆ ಬರೆಯಲು ಆಗುತ್ತಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಡೆಗೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ.

ಮಂಗಳೂರಿನ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಲು ಆಗ್ರಹಿಸಿದ್ದು, ಇಂದು ಸುವರ್ಣ ನ್ಯೂಸ್.ಕಾಂ ಜೊತೆ ಆತಂಕ ತೋಡಿಕೊಂಡಿದ್ದಾರೆ. ಏ.19ರಿಂದ ವಿಟಿಯು ವ್ಯಾಪ್ತಿಯ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಮುಂದೂಡಿಕೆ ಮಾಡುವ ಬಗ್ಗೆ ಕೋರಿದ್ದಾರೆ.

ಟಫ್ ರೂಲ್ಸ್‌ ಮಧ್ಯೆ ಪರೀಕ್ಷೆ ನಡೆಸಲು ವಿಟಿಯುಗೆ ಗ್ರೀನ್ ಸಿಗ್ನಲ್! ...

ನಮ್ಮ ಕಾಲೇಜಿನಲ್ಲಿ ಹಲವಾರು ಕೇರಳ ಮೂಲದ ವಿದ್ಯಾರ್ಥಿಗಳು ‌ಬರುತ್ತಿದ್ದಾರೆ. ಕಾಲೇಜಿನಲ್ಲಿ ಸರಿಯಾದ ರೀತಿಯಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ಕೇರಳ, ಅಸ್ಸಾಂ ಮತ್ತು ಬಿಹಾರ ಮೂಲದ ವಿದ್ಯಾರ್ಥಿಗಳು ಜೊತೆಗಿದ್ದಾರೆ. ಇದರಿಂದ ಯಾವುದೇ ಕ್ಷಣದಲ್ಲಿ ಕೊರೋನಾ ಹರಡುವ ಭೀತಿ ಎದುರಾಗಿದೆ. ಎಲ್ಲಾ ಕಾಲೇಜು ಮತ್ತು ವಿವಿಗಳು ಪರೀಕ್ಷೆ ಮುಂದೂಡಿದ್ದರೂ ವಿಟಿಯು ಮುಂದೂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಈಗಾಗಲೇ ನಮ್ಮ ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದು ಕ್ವಾರೆಂಟೈನ್ ಆಗಿದ್ದಾರೆ. ಹೀಗಿರುವಾಗ ಜೀವ ಭಯದ ಮಧ್ಯೆ ಪರೀಕ್ಷೆ ಬರೆಯುವ ಪರಿಸ್ಥಿತಿ ಇದೆ. ತಕ್ಷಣ ಪರೀಕ್ಷೆ ಮುಂದೂಡಬೇಕಾದ ಅಗತ್ಯವಿದೆ ಎಂದರು.