ನೀಟ್ ತೇರ್ಗಡೆಯಾಗಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿ ಬಯಸಿರುವವರ ದಾಖಲೆ ಪರಿಶೀಲನೆ ಜು.24ರಿಂದ ಆರಂಭ

ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿರುವ ಅರ್ಹ ಅಭ್ಯರ್ಥಿಗಳ ಮೂಲದಾಖಲೆಗಳ ಪರಿಶೀಲನೆಯನ್ನು ಜುಲೈ 24ರಿಂದ ಆಗಸ್ಟ್‌ 1ರವರೆಗೆ ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.

KEA begin  document verification of NEET clear students from June 24th gow

ಬೆಂಗಳೂರು (ಜು.21): ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಎಂಜಿನಿಯರಿಂಗ್‌ ಹೊರತುಪಡಿಸಿ ಬೇರೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿರುವ ಅರ್ಹ ಅಭ್ಯರ್ಥಿಗಳ ಮೂಲದಾಖಲೆಗಳ ಪರಿಶೀಲನೆಯನ್ನು ಜುಲೈ 24ರಿಂದ ಆಗಸ್ಟ್‌ 1ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರದಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಪ್ರಾಧಿಕಾರದ ಈ ಪ್ರಕ್ರಿಯೆಯು ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಹಾಗೂ ಯೋಗ ಮತ್ತು ನ್ಯಾಚುರೋಪಥಿ ಕೋರ್ಸುಗಳಿಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ. ನಿಗದಿತ ದಿನಗಳಂದು ಯಾವ ರ್‍ಯಾಂಕಿಂಗ್‌ವರೆಗಿನ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಬರಬೇಕೆಂದು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಅಭ್ಯರ್ಥಿಗಳು ಗಮನಿಸಿ, ಮೂಲದಾಖಲಾತಿಗಳೊಂದಿಗೆ ಹಾಜರಾಗಬೇಕು" ಎಂದಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500

ಜೊತೆಗೆ ಈ ಕೋರ್ಸುಗಳಿಗೆ ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತರು, ಅನಿವಾಸಿ ಭಾರತೀಯ ಇತ್ಯಾದಿಗಳ ಅಡಿಯಲ್ಲಿ ಪ್ರವೇಶ ಬಯಸಿರುವವರ ದಾಖಲಾತಿಗಳ ಪರಿಶೀಲನೆಯು ಆಗಸ್ಟ್‌ 2ರಂದು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾಗೆಯೇ ಎನ್‌ಸಿಸಿ, ಕ್ರೀಡೆ, ರಕ್ಷಣೆ, ಮಾಜಿ ಸೇನಾ ಸಿಬ್ಬಂದಿ, ಸ್ಕೌಟ್ಸ್‌ ಮತ್ತು ಗೈಡ್ಸ್, ಸಿಎಪಿಎಫ್‌, ಮಾಜಿ-ಸಿಎಪಿಎಫ್‌, ಎಜಿಐ ಇತ್ಯಾದಿ ವಿಶೇಷ ಕೆಟಗರಿಗಳಲ್ಲಿ ಪ್ರವೇಶ ಬಯಸಿರುವ ಕರ್ನಾಟಕದ ಅಭ್ಯರ್ಥಿಗಳು ಇದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಜುಲೈ 27, 28 ಮತ್ತು 31ರಂದು ಬೆಂಗಳೂರಿನಲ್ಲಿರುವ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬಹುದು. ಆದರೆ ಸಿಇಟಿ ಅರ್ಜಿಯಲ್ಲಿ ಇವುಗಳನ್ನು ಸಲ್ಲಿಸಿದ್ದರೆ ಅಂಥವರು ಪುನಃ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!

ಜುಲೈ 22, 23ರಂದು ಆರ್‌ಡಿ ಸಂಖ್ಯೆ ಪರಿಶೀಲನೆ ವೃತ್ತಿಪರ ಕೋರ್ಸುಗಳಿಗೆ ಜಾತಿ, ಆದಾಯ, ಕಲ್ಯಾಣ ಕರ್ನಾಟಕ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ, ವ್ಯಾಸಂಗ ಪ್ರಮಾಣಪತ್ರ ಪರಿಶೀಲನೆಯನ್ನು ಬಿಇಒ ಕಚೇರಿಯಲ್ಲಿ ಮುಗಿಸಿ ಸ್ವೀಕೃತಿ ಪತ್ರ ಪಡೆದಿದ್ದರೂ ನಾನಾ ಕಾರಣಗಳಿಂದಾಗಿ ಮೀಸಲಾತಿ ಆರ್‍‌ಡಿ ಸಂಖ್ಯೆಯು ತಿರಸ್ಕೃತವಾಗಿರುವಂತಹ (ಇನ್‌ವ್ಯಾಲಿಡ್‌) ಅಭ್ಯರ್ಥಿಗಳು ಸಮರ್ಪಕ ಪ್ರಮಾಣಪತ್ರ ಮತ್ತು ದಾಖಲೆಗಳೊಂದಿಗೆ ಇದರ ಪರಿಶೀಲನೆಗೆ ಜುಲೈ 22 ಮತ್ತು 23ರಂದು ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು ಎಂದು ಇದೇ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇಂತಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದ್ದು, ಯಾವ ರ್‍ಯಾಂಕ್‌ ಪಡೆದಿರುವವರು ಎಂದು ಹಾಜರಾಗಬೇಕೆಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಎಲ್ಲ ಪ್ರಮಾಣಪತ್ರಗಳನ್ನು ತಮ್ಮ ಹೆಸರಿನಲ್ಲೇ, ಸರಕಾರದ ನಿಗದಿತ ನಮೂನೆಗಳಲ್ಲಿಯೇ ಪಡೆದುಕೊಂಡಿರಬೇಕು ಮತ್ತು ಅವೆಲ್ಲವೂ ಚಾಲ್ತಿಯಲ್ಲಿರಬೇಕು ಎಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios