Asianet Suvarna News

ಕಾಲು ಬೆರಳಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾವಳೇಶ್ವರದ ಛಲಗಾರ!

* ಕಾಲು ಬೆರಳಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾವಳೇಶ್ವರದ ಛಲಗಾರ!
* ಈ ಬಾರಿಯ ಎಸ್ಸೆಸ್ಸೆಲ್ಸಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಈತನ ಪರೀಕ್ಷೆಯನ್ನು ಸುಲಭಗೊಳಿಸಿತ್ತು

Kalaburagi student writes SSLC  Exams from his leg rbj
Author
Bengaluru, First Published Jul 22, 2021, 10:43 PM IST
  • Facebook
  • Twitter
  • Whatsapp

ಕಲಬುರಗಿ, (ಜು.22): ತನ್ನೆರಡು ಕೈಗಳಿಲ್ಲದಿದ್ದರೂ ಪಾದದ ಹೆಬ್ಬರಳಿನ ಸಹಾಯದಿಂದಲೇ ಪರೀಕ್ಷೆ ಬರೆಯುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯ 2 ನೇ ದಿನವಾದ ಗುರುವಾರ ಜಿಲ್ಲೆಯ ಆಳಂದ ತಾಲೂಕಿನ ವಿದ್ಯಾರ್ಥಿಯೋರ್ವ ಗಮನ ಸೆಳೆದಿದ್ದಾನೆ.

ಆಳಂದದ ಸಾವಳೇಶ್ವರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ  ವಿಶ್ವಸನ್ಮತಿ ಪ್ರೌಢಶಾಲೆಯ 10ನೇ ತರಗತಿಯ ಲಕ್ಷ್ಮೀಪುತ್ರ ಅಮೃತ ಮಾಡ್ಯಾಳೆ ಎಂಬಾತನೇ ಛಲದಿಂದ ಪರೀಕ್ಷೆ ಎದುರಿಸಿದ್ದಾನೆ.

ಈತ ಯಾರ ಸಹಾಯವೂ ಇಲ್ಲದೆ ತಾನೇ ಒಬ್ಬನೆ ಕುಳಿತು ತನ್ನ ಪಾದದ ಹೆಬ್ಬರಳಿನಿಂದಲೇ ಯಾರ ಸಹಾಯವೂ ಇಲ್ಲದೆ ಪರೀಕ್ಷೆ ಬರೆದು ಗಮನ ಸೆಳೆದನು. ತನ್ನ ಎರಡೂ ಕೈಗಳ್ಳಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆ ಹೊಂದದ ಲಕ್ಷ್ಮೀಪುತ್ರ ಕಾಲಿನ ಬೆರಳಿನ ಸಹಾಯದಿಂದಲೇ ಊಟ ಮಾಡುವ ಇತನ್ನು ಓದು ಬರಹ ಕಲಿತು ಪರೀಕ್ಷೆಗೆ ಹಾಜರಾಗಿದ್ದಾನೆ ಇವನ್ನು ಛಲವೇ ನಮಗೆ ಹುಮ್ಮಸು ತರಿಸುತ್ತಿದೆ ಎಂದು ಪಾಲಕರು ಹೇಳುತ್ತಾರೆ.

ಈ ಬಾರಿಯ 10ನೇ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಇರುವುದರಿಂದ ಪತ್ರಿಕೆಯ ಓಎಂಆರ್ ಶೀಟ್ ಸಹ ಪಾದದ ಬೆರಳುಗಳಿಂದಲೇ ಪೆನ್ನು ಹಿಡಿದು ಗುರುತು ಹಾಕಿ ಬರೆಯಲು ಈ ವಿದ್ಯಾರ್ಥಿಗೆ ಮತ್ತುಷ್ಟು ಅನುಕೂಲವಾಯಿತು.

ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ವಿದ್ಯಾರ್ಥಿಯ ಛಲಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು, ಪರೀಕ್ಷಾ ಕೇಂದ್ರದ ಅಧೀಕ್ಷಕಿ ಮಧುಮತಿ ಇಕ್ಕಳಕಿ ಹಾಜರಿದ್ದರು.

Follow Us:
Download App:
  • android
  • ios