ರಾಂಚಿ, (ಸೆ.23): ಪರೀಕ್ಷೆಯಲ್ಲಿ ಪಾಸ್ ಆದ್ರೆ, ಸ್ವೀಟ್, ಪಾರ್ಟಿ ಕೊಡುವುದನ್ನು ನೋಡಿರುತ್ತೇವೆ. ಕೇಳಿರುತ್ತೇವೆ ಕೂಡ. ಅಲ್ಲದೇ ರಾಜ್ಯ ಬಂದ್ರೆ ಪೋಷಕರು ಇಲ್ಲ ಸರ್ಕಾರವೋ ಏನಾದ್ರೂ ಒಂದು ಸಣ್ಣ ಪುಟ್ಟ ಉಡುಗೊರೆ ಕೊಟ್ಟು ಪ್ರೋತ್ಸಾಹಿಸುತ್ತಾರೆ. ಆದ್ರೆ, ಇಲ್ಲಿ 10,12ನೇ ತರಗತಿಯ ಟಾಪರ್‌ಗಳಿಗೆ ಕಾರು ಗಿಫ್ಟ್ ಕೊಡಲಾಗಿದೆ.

ಹೌದು...ಇದು ಅಚ್ಚರಿ ಎನಿಸಿದರೂ ಸತ್ಯ. ಜಾರ್ಖಂಡ್‌ ಸರ್ಕಾರ ಇದೇ ಮೊದಲ ಬಾರಿಗೆ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

ಕಾರ್ಮಿಕರಿಗೆ 48 ಸಾವಿರ ರೂ ನೀಡಿ ವಿಮಾನದಲ್ಲಿ ಕಳುಹಿಸಿದ ಬಾಲಕಿ; ಧನ್ಯವಾದ ಹೇಳಿದ ಸಿಎಂ!

 ಇಂದು (ಬುಧವಾರ)  ರಾಜ್ಯ ಶಿಕ್ಷಣ ಸಚಿವ ಜಗರ್ನಾಥ್ ಮಹ್ಟೋ ಅವರು ಟಾಪರ್‌ಗಳಿಗೆ ಮಾರುತಿ ಆಲ್ಟೊ ಕಾರುಗಳನ್ನು ನೀಡಿದರು.

ಫಲಿತಾಂಶ ಪ್ರಕಟವಾದ ದಿನದಂದು, ಮಹ್ಟೋ ಅವರು 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು.  ಅದರಂತೆ ಈಗ ಕಾರು ಗಿಫ್ಟ್ ನೀಡಿದ್ದಾರೆ.

ಮುಂದಿನ ವರ್ಷದಿಂದ 11ನೇ ತರಗತಿಯ ಟಾಪರ್‌ ಗಳಿಗೂ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಬಹುದು ಎಂದು ಸಚಿವರು ಹೇಳಿದ್ದಾರೆ.