ಬೇರೆಯವರಿಂದ ಪರೀಕ್ಷೆ ಬರೆಸಿ ರಾಜ್ಯಕ್ಕೆ ಫಸ್ಟ್ ಬಂದಿದ್ದ ಟಾಪರ್ ಅರೆಸ್ಟ್

ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆಯಲ್ಲಿ ಶೇ. 99.8 ಫಲಿತಾಂಶದೊಂದಿಗೆ ಟಾಪರ್ ಆಗಿದ್ದ ವಿದ್ಯಾರ್ಥಿಯ ಅಸಲಿ ಕಾರಣ ಬಹಿರಂಗವಾಗಿದೆ.

JEE Mains Topper In Assam Arrested, Allegedly Used Proxy For Exam rbj

ಗುವಾಹಟಿ, (ಅ.29): ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ ಜೆಇಇನಲ್ಲಿ ಉತ್ತಮ ಅಂಕ ಪಡೆದು ಅಸ್ಸಾಂಗೆ ಪ್ರಥಮ ಸ್ಥಾನ ಬಂದಿದ್ದ ಯುವಕನ ಬಣ್ಣ ಬಯಲಾಗಿದೆ. 

ಆತ ತನ್ನ ಬದಲು ಬೇರೆಯವರಿಂದ ಎಕ್ಸಾಂ ಬರೆಸಿದ್ದ ಎಂಬ ವಿಷಯ ಬಹಿರಂಗವಾಗಿದೆ. ಈ ಹಿನ್ನೆಲೆ ಅಸ್ಸಾಂ ಟಾಪರ್ ಎನಿಸಿಕೊಂಡಿದ್ದ ವಿದ್ಯಾರ್ಥಿ ನೀಲ್​ ನಕ್ಷತ್ರ ದಾಸ್​​, ಆತನ ತಂದೆ ಹಾಗೂ ಇತರೆ ಮೂವರನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ಮಂದಿಗೆ ಶೇ.100 ಅಂಕ!

ನೀಲ್​ ನಕ್ಷತ್ರ ದಾಸ್ ಪರೀಕ್ಷೆಗೆ ಹಾಜರಾಗಿರಲಿಲ್ಲ. ಬದಲಾಗಿ ಟೆಸ್ಟಿಂಗ್​ ಸೆಂಟರ್​ವೊಂದರ ಸಹಾಯದಿಂದ ತನ್ನ ಬದಲಿಗೆ ಬೇರೊಬ್ಬರಿಂದ ಪರೀಕ್ಷೆ ಬರೆಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.  ಈ ಪರೀಕ್ಷೆಯಲ್ಲಿ ನೀಲ್​ ನಕ್ಷತ್ರ ದಾಸ್ 99.8 ರಿಸಲ್ಟ್‌ನೊಂದಿಗೆ ಅಸ್ಸಾಂಗೆ ಟಾಪರ್ ಆಗಿದ್ದ.

ಈ ವಂಚನೆಯಲ್ಲಿ ಭಾಗಿಯಾದ ಆರೋಪದ ಮೇಲೆ ನೀಲ್ ತಂದೆ ಡಾ. ಜ್ಯೋತಿರ್ಮೋಯ್​​ ದಾಸ್​ ಹಾಗೂ ಟೆಸ್ಟಿಂಗ್ ಸೆಂಟರ್​ನ ಸಿಬ್ಬಂದಿ ಹರ್ಮೇಂದ್ರ ನಾಥ್ ಶರ್ಮಾ, ಪ್ರಾಂಜಲ್​​ ಹಾಗೂ ಹೀರೂಲಾಲ್ ಎಂಬ ಮೂವರನ್ನ ಕೂಡ ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಅಝಾರಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಗುವಾಹಟಿ ಪೊಲೀಸ್​ ಆಯುಕ್ತರ ಪ್ರತಿಕ್ರಿಯೆ
ವಂಚನೆ ಜಾಲದಲ್ಲಿ ಏಜೆನ್ಸಿಯೊಂದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದು, ಅದರ ಸಹಾಯದಿಂದ ಅಭ್ಯರ್ಥಿ ನೀಲ್​​​​, ಬೇರೊಬ್ಬರನ್ನ ಪರೀಕ್ಷೆ ಬರೆಯಲು ಬಳಸಿಕೊಂಡಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಟೆಸ್ಟಿಂಗ್​ ಸೆಂಟರ್​ನ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಮತ್ತಷ್ಟು ಆರೋಪಿಗಳಿಗಾಗಿ ನಾವು ಹುಡುಕಾಡುತ್ತಿದ್ದೇವೆ. ಆದ್ರೆ ಇದೊಂದು ದೊಡ್ಡ ಹಗರಣವಾಗಿರಬಹುದು ಎನ್ನುವ ಅನುಮಾನವಿದೆ. ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಗುವಾಹಟಿ ಪೊಲೀಸ್​ ಆಯುಕ್ತ ಎಂಪಿ ಗುಪ್ತಾ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios