ಪರೀಕ್ಷೆ ಮುಂದೂಡಿಕೆ: ಅಧಿಕೃತವಾಗಿ ಘೋಷಿಸಿದ ಶಿಕ್ಷಣ ಸಚಿವ
ದೇಶಾದ್ಯಂತ ಕೊರೋನ ಸೋಂಕು ಮತ್ತೆ ಮಿತಿಮೀರುತ್ತಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮತ್ತೆ ಪರೀಕ್ಷೆಗಳು ಮುಂದೂಡಲ್ಪಡುತ್ತಿದ್ದು, ಇದೀಗ ಈ ಸಾಲಿಗೆ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (JEE) ಯೂ ಸೇರಿದೆ.
ನವದೆಹಲಿ, (ಏ.18): ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (JEE) ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಲ್ಪಟ್ಟಿದ್ದನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಕೂಡ ದೃಢಪಡಿಸಿದ್ದಾರೆ.
ಸದ್ಯದ ಕೊವಿಡ್-19 ಸ್ಥಿತಿಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡುವುದೇ ಒಳಿತು ಎಂದು ನಾನೂ ಸಹ ಎನ್ಟಿಎಗೆ ಸಲಹೆ ನೀಡಿದ್ದೆ. ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಅವರ ಸುರಕ್ಷತೆ ನನ್ನ ಮತ್ತು ಶಿಕ್ಷಣ ಸಚಿವಾಲಯದ ಮೊದಲ ಆದ್ಯತೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
1 ರಿಂದ 9 ನೇ ತರಗತಿ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್
ಏಪ್ರಿಲ್ 27ರಿಂದ 30ರವರೆಗೆ ನಡೆಯಲಿದ್ದ JEE ಮುಖ್ಯ ಪರೀಕ್ಷೆ(2021)ಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಮುಂದೂಡಿದೆ. ಸದ್ಯಕ್ಕೇನೂ ಪರೀಕ್ಷೆಯ ಹೊಸ ದಿನಾಂಕವನ್ನು ಘೋಷಣೆ ಮಾಡಿಲ್ಲ.
ದೇಶದಲ್ಲಿ ಸದ್ಯದಲ್ಲಿರುವ ಕೊವಿಡ್ 19 ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಪರೀಕ್ಷಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಏಪ್ರಿಲ್ ಸೆಷನ್ನಲ್ಲಿ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎನ್ಟಿಎ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಪರೀಕ್ಷೆ ನಡೆಸುವ 15 ದಿನಗಳ ಮೊದಲು ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಿದೆ.
ಇನ್ನು ಜೆಇಇ ಮುಖ್ಯಪರೀಕ್ಷೆಯ ಫೆಬ್ರವರಿ ಮತ್ತು ಮಾರ್ಚ್ ಸೆಷನ್ಗಳು ಮುಕ್ತಾಯಗೊಂಡಿದ್ದು, ಏಪ್ರಿಲ್ದು 27ರಿಂದ ಪ್ರಾರಂಭವಾಗಲಿತ್ತು. ಆದರೆ ಅದನ್ನು ಮುಂದೂಡಬೇಕು.
ಕೊರೋನಾ ಸಮಯದಲ್ಲಿ ಪರೀಕ್ಷೆ ಬರೆಯುವುದು ಸುರಕ್ಷಿತವಲ್ಲ ಎಂದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಕೂಡ ಬೇಡಿಕೆ ಮುಂದಿಟ್ಟಿದ್ದರು. ಈ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದರು.