ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ವಾಕರಾಲಿ ಸೈಮಂಡ್ಸ್ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ ಟಾಪ್ 150ರೊಳಗೆ ಸ್ಥಾನ ಪಡೆದುಕೊಂಡಿದೆ.
ನವದೆಹಲಿ: ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ವಾಕರಾಲಿ ಸೈಮಂಡ್ಸ್ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ ಟಾಪ್ 150ರೊಳಗೆ ಸ್ಥಾನ ಪಡೆದುಕೊಂಡಿದೆ. ಇನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) 211ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಅಮೆರಿಕದ ಮಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸತತ 13ನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ.
ಪಟ್ಟಿಯಲ್ಲಿ ಕಳೆದ ವರ್ಷ 149ನೇ ಸ್ಥಾನದಲ್ಲಿದ್ದ ಐಐಟಿ ಬಾಂಬೆ ಈ ವರ್ಷ 31 ಸ್ಥಾನ ಏರಿಕೆ ಕಂಡು 118ನೇ ಸ್ಥಾನ ತಲುಪಿದೆ. ಇನ್ನೊಂದೆಡೆ ಐಐಟಿ ದೆಹಲಿ 47 ಸ್ಥಾನ ಏರಿಕೆ ಕಾಣುವ ಮೂಲಕ 150ನೇ ಸ್ಥಾನ ಪಡೆದಿದೆ. ಕಳೆದ ವರ್ಷ 225ನೇ ಸ್ಥಾನದಲ್ಲಿದ್ದ ಬೆಂಗಳೂರಿನ ಐಐಎಸ್‌ಸಿ ಈ ಬಾರಿ 211ನೇ ಸ್ಥಾನಕ್ಕೆ ಏರಿದೆ. ಉಳಿದಂತೆ ಐಐಟಿ ಖರಗ್‌ಪುರ 222, ಐಐಟಿ ಮದ್ರಾಸ್ 227, ಐಐಟಿ ಕಾನ್ಪುರ 263, ದೆಹಲಿ ವಿಶ್ವವಿದ್ಯಾಲಯ 328 ಮತ್ತು ಅಣ್ಣಾ ವಿಶ್ವವಿದ್ಯಾಲಯ 383ನೇ ಸ್ಥಾನ ಪಡೆದಿವೆ.
ಇನ್ನು ಉದ್ಯೋಗ ಕಲ್ಪಿಸುವ ಸಾಧ್ಯತೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ವಿಶ್ವದಲ್ಲೇ 44ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರ ಐಕಾನಿಕ್ IIT ಫೋಟೋ ವೈರಲ್, ಪಕ್ಕದಲ್ಲಿರುವ ಯುವತಿ ಕೂಡ ಫೇಮಸ್!
