JEE Advanced 2022 Results ಪ್ರಕಟ: ಫಲಿತಾಂಶ ನೋಡಲು ವಿವರ ಇಲ್ಲಿದೆ..
ಐಐಟಿ ಬಾಂಬೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ 2022 ರ ಫಲಿತಾಂಶಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 11 ರಂದು ಫಲಿತಾಂಶ ಪ್ರಕಟವಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.
ಆಗಸ್ಟ್ 28 ರಂದು ನಡೆದ ಜಂಟಿ ಪ್ರವೇಶ ಪರೀಕ್ಷೆ (Joint Entrance Examination) ಅಥವಾ ಜೆಇಇ ಅಡ್ವಾನ್ಸ್ಡ್ 2022 (JEE Advanced 2022) ಪರೀಕ್ಷೆಯ ಫಲಿತಾಂಶ (Exam Results) ಸೆಪ್ಟೆಂಬರ್ 11 ರಂದು ಅಂದರೆ ಇಂದು ಪ್ರಕಟವಾಗಿದೆ. ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ - jeeadv.ac.in - ಜೆಇಇ ಅಡ್ವಾನ್ಸ್ಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು (Candidates) ತಮ್ಮ ರಿಜಿಸ್ಟರ್ ನಂಬರ್ (Roll Number) ಹಾಗೂ ಹುಟ್ಟಿದ ದಿನಾಂಕವನ್ನು (Date of Birth) ನಮೂದಿಸುವ ಮೂಲಕ ಲಾಗಿನ್ ಆಗಿ ಫಲಿತಾಂಶವನ್ನು ನೋಡಬಹುದು. ಜೆಇಇ ಅಡ್ವಾನ್ಸ್ಡ್ ಸ್ಕೋರ್‌ಕಾರ್ಡ್ (Score Card) ಅನ್ನು ಸಹ ವಿದ್ಯಾರ್ಥಿಗಳು ಇದೇ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ವೆಬ್‌ಸೈಟ್‌ನ ಪರದೆ ಮೇಲೆ ಜೆಇಇ ಅಡ್ವಾನ್ಸ್ಡ್ 2022 ಸ್ಕೋರ್‌ಕಾರ್ಡ್ ಅನ್ನು ನೋಡಬಹುದಾಗಿದೆ. ಬಳಿಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಪ್ರಿಂಟ್‌ಔಟ್ ಅನ್ನೂ ತೆಗೆದುಕೊಳ್ಳಬಹುದು.
ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ ನೋಡುವುದು ಹೇಗೆ..?
- ಜೆಇಇ ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್ jeeadv.ac.in. ಗೆ ಭೇಟಿ ನೀಡಿ
- ಮುಖಪುಟದ ಅಧಿಕೃತ ಸೈಟ್‌ನಲ್ಲಿ ಲಭ್ಯವಿರುವ JEE ಅಡ್ವಾನ್ಸ್ಡ್ 2022 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ‘ಸಬ್ಮಿಟ್’ ಕ್ಲಿಕ್ ಮಾಡಿ.
- ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
- ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ.
- ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ..
ಈ ವರ್ಷ ಆಗಸ್ಟ್ 28 ರಂದು ನಡೆದ JEE ಅಡ್ವಾನ್ಸ್ಡ್ ಪರೀಕ್ಷೆಗೆ ಸುಮಾರು 1.56 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. JEE ಅಡ್ವಾನ್ಸ್ಡ್ 2022 ರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಸೆಪ್ಟೆಂಬರ್ 12 ರಂದು ನಡೆಸಲಾಗುವ ಜಂಟಿ ಸೀಟ್ ಹಂಚಿಕೆ (JoSAA) ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. JEE ಅಡ್ವಾನ್ಸ್ಡ್ 2022 ಕಟ್-ಆಫ್ ಅನ್ನು ಪೂರೈಸುವ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್, AAT 2022 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 11 ರಿಂದ 12 ರವರೆಗೆ ನಡೆಯಲಿದೆ. ಹಾಗೂ, AAT 2022 ಸೆಪ್ಟೆಂಬರ್ 14 ರಂದು ನಡೆಯಲಿದೆ.
ಇದನ್ನು ಓದಿ: JEE Advanced 2022; ದೇಶದ ಎಲ್ಲಾ 23 ಐಐಟಿ ಗಳಲ್ಲಿ ಒಟ್ಟು 16,598 ಸೀಟು
ಇನ್ನು, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ವರ್ಗವಾರು ಅಖಿಲ ಭಾರತ ರ‍್ಯಾಂಕ್‌ಗಳು ಸಹ ಫಲಿತಾಂಶ ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಪ್ರಕಟವಾಗಲಿದೆ. ಜೆಇಇ ಅಡ್ವಾನ್ಸ್ಡ್ ಆನ್‌ಲೈನ್ ಪೋರ್ಟಲ್‌ನಲ್ಲಿ ಇದು ಲಭ್ಯವಾಗಲಿದೆ. ಹಾಗೆ, ಅಭ್ಯರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ನಂಬರ್‌ಗಳಿಗೆ ಸಂದೇಶಗಳನ್ನೂ ಕಳಿಸಲಾಗುತ್ತದೆ. ಹಾಗೆ, ಐಐಇಟ ಜೆಇಇ ಅಧಿಕೃತ ವೆಬ್‌ಸೈಟ್‌ನಲ್ಲೂ ಅಬ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಸಿಯುಇಟಿಯಲ್ಲಿ ವಿಲೀನವಾಗಲಿದೆ ನೀಟ್, ಜೆಇಇ..? ಕೇಂದ್ರ ಸರ್ಕಾರಕ್ಕೆ ಯುಜಿಸಿ ಪ್ರಸ್ತಾವ