ಪಿಯು ಮೌಲ್ಯಮಾಪಕರ ಬಾಕಿ ಶೀಘ್ರ ಬಿಡುಗಡೆ: ಸಚಿವ ಮಧು ಬಂಗಾರಪ್ಪ
ದ್ವಿತೀಯ ಪಿಯು ಪ್ರಾಯೋಗಿಕ, ವಾರ್ಷಿಕ, ಪೂರಕ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಿದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನೀಡಬೇಕಿರುವ ದಿನಭತ್ಯೆ, ಪ್ರಯಾಣಭತ್ಯೆ, ಮೌಲ್ಯಮಾಪನ ಸಂಭಾವನೆಯನ್ನು ಅಧಿವೇಶನ ಮುಗಿದ ಕೂಡಲೆ ಪಾವತಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಪರಿಷತ್ (ಜು.21) : ದ್ವಿತೀಯ ಪಿಯು ಪ್ರಾಯೋಗಿಕ, ವಾರ್ಷಿಕ, ಪೂರಕ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಿದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನೀಡಬೇಕಿರುವ ದಿನಭತ್ಯೆ, ಪ್ರಯಾಣಭತ್ಯೆ, ಮೌಲ್ಯಮಾಪನ ಸಂಭಾವನೆಯನ್ನು ಅಧಿವೇಶನ ಮುಗಿದ ಕೂಡಲೆ ಪಾವತಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ(Minister Madhu bangarappa), 2023ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ವಿವಿಧ ಭತ್ಯೆ, ಸಂಭಾವನೆ ನೀಡುವುದು ಬಾಕಿ ಉಳಿದಿದೆ.
ಕಲ್ಯಾಣ ಕರ್ನಾಟಕದಲ್ಲೇ 18,000 ಶಿಕ್ಷಕರ ಹುದ್ದೆ ಖಾಲಿ..!
ಈವರೆಗೆ 6,635 ಮೌಲ್ಯಮಾಪಕರಿಗೆ ಪ್ರಯಾಣಭತ್ಯೆ ಹಾಗೂ 7,507 ಮೌಲ್ಯಮಾಪಕರಿಗೆ ಸಂಭಾವನೆ ಪಾವತಿಸಲಾಗಿದೆ. ಇನ್ನೂ ಸಾವಿರಾರು ಮೌಲ್ಯಪಾಲಕರು, ಸಿಬ್ಬಂದಿಗೆ ಭತ್ಯೆ, ಸಂಭಾವನೆ ನೀಡಬೇಕಿದೆ. ಅದಕ್ಕಾಗಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ ಅಧಿವೇಶನದಲ್ಲಿ ಉಳಿಕೆ ಸಾಲಿನ ಲೇಖಾನುದಾನಕ್ಕೆ ಅನುಮೋದನೆ ದೊರೆತ ಕೂಡಲೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆರ್ಥಿಕ ಇಲಾಖೆ ಅನುದಾನ ಕೊಟ್ಟರೆ ಅರೆಕಾಲಿಕ ಉಪನ್ಯಾಸಕರಿಗೆ ವೇತನ: ಸುಧಾಕರ್
ವಿಧಾನಪರಿಷತ್: ಆರ್ಥಿಕ ಇಲಾಖೆ ಅನುದಾನ ಒದಗಿಸಿದ ಕೂಡಲೇ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅರೆಕಾಲಿಕ ಉಪನ್ಯಾಸಕರಿಗೆ ಬಾಕಿ ಇರುವ ವೇತನ ಪಾವತಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಯ ಕಾರ್ಯಭಾರ ತಗ್ಗಿಸುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಅದರಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ 395 ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ 1,301 ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಅವರ ಸೇವೆ 2023ರ ಮಾಚ್‌ರ್‍ನಲ್ಲಿ ಪೂರ್ಣಗೊಂಡಿದೆ. ಆದರೂ, ಹೆಚ್ಚುವರಿಯಾಗಿ ಅವರನ್ನು ಸೇವೆಯಲ್ಲಿ ಕೆಲ ತಿಂಗಳು ಮುಂದುವರಿಸಲಾಗಿದೆ. ಹೀಗೆ ಹೆಚ್ಚುವರಿಯಾಗಿ ಕೆಲಸ ಮಾಡಿದವರಿಗೆ ವೇತನ ಪಾವತಿ ಸಾಧ್ಯವಾಗಿಲ್ಲ. ಅನುದಾನ ದೊರೆತ ಕೂಡಲೆ ಏಪ್ರಿಲ್ 2023ರ ನಂತರ ಕರ್ತವ್ಯ ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ಮುಂದೆ ಮಂಡಳಿ: ಸುಧಾಕರ್