ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆಗೆ ಗಡುವು ಜು.25ಕ್ಕೆ ವಿಸ್ತರಣೆ!

* 12ನೇ ತರಗತಿ ಫಲಿತಾಂಶ ಪ್ರಕಟಣೆಗೆ ನೀಡಿದ್ದ ಜು.22ರ ಗಡುವು ವಿಸ್ತರಣೆ

* ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆಗೆ ಗಡುವು ಜು.25ಕ್ಕೆ ವಿಸ್ತರಣೆ

* ಫಲಿತಾಂಶ ಪ್ರಕಟಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಶಿಕ್ಷಕರಲ್ಲಿ ಒತ್ತಡ ಮತ್ತು ಆತಂಕ

CBSE extends deadline for finalising class 12 result till July 25 pod

ನವದೆಹಲಿ(ಜು.22): 12ನೇ ತರಗತಿ ಫಲಿತಾಂಶ ಪ್ರಕಟಣೆಗೆ ನೀಡಿದ್ದ ಜು.22ರ ಗಡುವನ್ನು ಸಿಬಿಎಸ್‌ಇ ಜು.25ರವರೆಗೆ ವಿಸ್ತರಿಸಿದೆ. ಫಲಿತಾಂಶ ಪ್ರಕಟಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಶಿಕ್ಷಕರು ಒತ್ತಡ ಮತ್ತು ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ಹೆಚ್ಚುವರಿ 3 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಾಮ್‌ ಭಾರದ್ವಾಜ್‌ ತಿಳಿಸಿದ್ದಾರೆ.

ಹೈಸ್ಕೂಲ್‌ಗೆ ಮುನ್ನ ಪ್ರಾಥಮಿಕ ಶಾಲೆ ಆರಂಭಿಸಿ!

ಒಂದು ವೇಳೆ ಶಾಲೆಗಳಿಗೆ ಅಂಕಗಳನ್ನು ನಿಗದಿಪಡಿಸಲು ಸಾಧ್ಯವಾಗದೇ ಇದ್ದರೆ ಅಂತಹ ಶಾಲೆಗಳ ಫಲಿತಾಂಶವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ 10 ಮತ್ತು 12ನೇ ತರಗತಿಯ ಖಾಸಗಿ ಅಭ್ಯರ್ಥಿಗಳ ಪರೀಕ್ಷೆ ಆ.16ರಿಂದ ಸೆ.15ರವರೆಗೆ ನಡೆಯಲಿದೆ. ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳ ಮೌಲ್ಯಮಾಪನಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಸಿಬಿಎಸ್‌ಇ ತಿಳಿಸಿದೆ.

Latest Videos
Follow Us:
Download App:
  • android
  • ios