ನವದೆಹಲಿ, (ಸೆ.04): ಸಿಬಿಎಸ್‌ಇ 10,12ನೇ ತರಗತಿ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗೆ  ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ)  ವಿರೋಧ ವ್ಯಕ್ತಪಡಿಸಿದೆ.

ಕೋವಿಡ್​ 19  ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ದ ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) ಶುಕ್ರವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. 

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಂಜೀವ್​ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಅನಿಕಾ ಸಂವೇದಿ ಸಲ್ಲಿಸಿದ್ದ ಅರ್ಜಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದು, ಈ  ವೇಳೆ ನ್ಯಾಯಪೀಠವು, ಪರೀಕ್ಷೆ ಮುಂದೂಡುವುದರಿಂದ ನಿಜವಾಗಿಯೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಯೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ. 

ಸಿಬಿಎಸ್​ಇ ಪರ ವಕೀಲರು ಪರೀಕ್ಷಾ ಸಿದ್ಧತೆಯ ವಿವರವನ್ನು ನೀಡಿದ್ದು, ಇದುವರೆಗೆ 575 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಕೋವಿಡ್ ಇರುವ ಕಾರಣ 1,278 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದೆ. ಕೋವಿಡ್ ನಿಯಮ ಪಾಲಿಸುತ್ತ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು. 

40 ಜನ ಕುಳಿತುಕೊಳ್ಳುವ ತರಗತಿಯಲ್ಲಿ ಈ ಬಾರಿ 12 ವಿದ್ಯಾರ್ಥಿಗಳಷ್ಟೇ ಕುಳಿತುಕೊಳ್ಳಲಿದ್ದಾರೆ ಎಂಬ ವಿವರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಪ್ಟೆಂಬರ್ 7ರೊಳಗೆ ಒಂದು ಅಫಿಡವಿಟನ್ನು ಸಲ್ಲಿಸಿ ಎಂದು ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ. 

ಇಂಥದ್ದೇ ವಿರೋಧದ ನಡುವೆ ಕರ್ನಾಟಕಕ ಪ್ರೌಢ ಶಿಕ್ಷಣ ಇಲಾಖೆಯೂ SSLC ನಡೆಸಿದ್ದು, ಯಶಸ್ವಿಯಾಗಿ ಫಲಿತಾಂಶವನ್ನು ನೀಡಿದೆ. 

ಒಟ್ಟುನಲ್ಲಿ ಈ ಮಹಾಮಾರಿ ಕೊರೋನಾದಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.