Bagalkote; ಇಳಕಲ್ ಸೀರೆಯಲ್ಲಿ ಎತ್ತಿನ ಬಂಡಿ ಏರಿದ ಕಾಲೇಜ್ ಹುಡುಗೀರು, ಧೋತಿಯಲ್ಲಿ ಮಿಂಚಿದ ಹುಡುಗ್ರು
ರಾಷ್ಟ್ರೀಯ ಭಾವೈಕ್ಯತೆ ಜೊತೆ ಸಂಪ್ರದಾಯಿಕತೆಗೆ ಸಾಕ್ಷಿಯಾದ ಕಾಲೇಜ್ ಟ್ರೆಡಿಷನಲ್ ಡೇ ಲಂಬಾಣಿ, ಕೊಡಗು, ಕೇರಳ ಸೇರಿ ಹಲವು ವೈವಿಧ್ಯಮಯ ಸಂಪ್ರದಾಯಿಕ ಉಡುಗೆ ಪ್ರದರ್ಶನ. ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಿಂದ ನಡೆದ ಸಾಂಪ್ರದಾಯಿಕ ದಿನ ಆಚರಣೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಆ.28): ಅವರೆಲ್ಲಾ ಇಂದಿನ ಹೈಪೈ ಯುಗದಲ್ಲಿ ಕಾಲೇಜ್ ಓದುವ ಹುಡುಗ ಹುಡುಗಿಯರು, ಆದ್ರೆ ಕಾಲೇಜಗೆ ಮಾತ್ರ ಅವರು ಸಂಪ್ರದಾಯಿಕ ಉಡುಗೆ ತೊಡಗೆ ತೊಟ್ಟು ಎತ್ತಿನ ಬಂಡಿ ಏರಿ ಇಂದು ಕಾಲೇಜ್ಗೆ ಬಂದಿದ್ರು, ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವಂತಹ ಅಪರೂಪದ ಟ್ರೇಡಿಷನಕಲ್ ಡೇ ಆಚರಣೆ ಮೂಲಕ ಭಾರತದ ಸಂಸ್ಕೃತಿಯನ್ನ ಪ್ರದರ್ಶನ ಮಾಡಿದ್ದರು. ಇಂತಹ ಅಪರೂಪದ ಸಾಂಪ್ರದಾಯಿಕ ದಿನಕ್ಕೆ ಸಾಕ್ಷಿಯಾಗಿದ್ದು ಮುಳುಗಡೆ ನಗರಿ ಬಾಗಲಕೋಟೆ. ಇಲಕಲ್ ಸೀರೆಯಲ್ಲಿ ಮಿಂಚಿದ ಕಾಲೇಜ್ ಹುಡುಗಿಯರು, ಪಂಜೆ ಧೋತಿ ತೊಟ್ಟು ಖದರ್ ತೋರಿದ ಕಾಲೇಜ್ ಹುಡುಗರು, ಇವುಗಳ ಮಧ್ಯೆ ದೇಶದ ವಿವಿಧ ಸಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಗಮನ ಸೆಳೆದ ರ್‍ಯಾಂಪ್ ವಾಕ್. ಅಂದಹಾಗೆ ಇಂತಹವೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ. ಹೌದು, ಈ ಕಾಲೇಜ್ ನಲ್ಲಿ ಟ್ರೇಡಿಶನಲ್ ಡೇ ಆಚರಣೆ ಮಾಡಲಾಗಿತ್ತು. ಕಾಲೇಜ್ ನ ಬಿಕಾಂ, ಬಿಬಿಎ, ಎಮ್ ಕಾಂ ಸೇರಿದಂತೆ ವಿವಿಧ ವಿಭಾಗಗಳ ಸಾವಿರಕ್ಕೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬೆಳಿಗ್ಗೆಯಿಂದಲೇ ವಿಭಿನ್ನ ಬಗೆಯ ವೇಷ ಭೂಷಣ ಧರಿಸಿ ಯುವಕ ಯುವತಿಯರು ಕಾಲೇಜ್ ಗೆ ಬಂದಿದ್ರು.
ಕಾಲೇಜ್ಗೆ ಎತ್ತಿನ ಬಂಡಿ ಏರಿ ಬಂದ ಇಲಕಲ್ ಸೀರೆಯುಟ್ಟ ಹುಡುಗಿಯರು: ಪ್ರತಿನಿತ್ಯ ಸಾಮಾನ್ಯ ಡ್ರೆಸ್ನಲ್ಲಿ ಕಾಲೇಜ್ಗೆ ಬರುತ್ತಿದ್ದ ಹುಡುಗಿಯರೆಲ್ಲಾ ಇಂದು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಇಲಕಲ್ ಸೀರೆಯುಟ್ಟು ಬಂದಿದ್ದು, ಇನ್ನೂ ಕೆಲವು ಹುಡುಗಿಯರು ಕೊಡಗು, ಲಂಬಾಣಿಗರ ವೇಷ, ಕೇರಳಿಯರ ಉಡುಗೆ ತೊಟ್ಟು ಅಲಂಕಾರಿಕವಾಗಿ ಕಾಲೇಜ್ಗೆ ಬಂದಿದ್ದರು. ಇನ್ನು ಇತ್ತ ಹುಡುಗರು ನೆಹರು ಶರ್ಟ, ಪೈಜಾಮ್ ಸಹಿತ ಪೇಟ ಸುತ್ತಿದ್ದ ಹುಡುಗರು ಸೇರಿದಂತೆ ದೇಶದ ನಾನಾ ರಾಜ್ಯಗಳು ಅಂದ್ರೆ ಮಹಾರಾಷ್ಟ್ರ, ಕೇರಳ,ತಮಿಳುನಾಡು, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಉಡುಗೆ ತೊಡುಗೆ ತೊಟ್ಟು ಪ್ರದರ್ಶನ ನಡೆಸಿದರು.
ಈ ಮಧ್ಯೆ ಕಾಲೇಜ್ಗೆ ಎತ್ತಿನ ಬಂಡಿ ತಂದು ಅದರಲ್ಲಿ ಕುಳಿತು ಮೆರವಣಿಗೆ ಮಾಡಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಪ್ರದಾಯಿಕ ಡೇ ಆಚರಣೆ ಮಾಡುವುದು ಇದರ ಮೂಲ ಉದ್ದೇಶವಾಗಿದೆ ಎಂದು ಕಾಲೇಜ್ ಪ್ರಚಾರ್ಯ ಜಗನ್ನಾಥ ಚವ್ಹಾಣ ಹೇಳಿದರು.
ಕ್ಯಾಂಪಸ್ ತುಂಬ ಕಣ್ಮನ ಸೆಳೆದ ಬಂಡಿ ಮೆರವಣಿಗೆ ಡೊಳ್ಳು ಕುಣಿತಕ್ಕೆ ಸಖತ್ ಸ್ಟೆಪ್ ಹಾಕಿದ ಕಾಲೇಜ್ ಯುವಕರು, ಯುವತಿಯರು. ಬಸವೇಶ್ವರ ಕಾಮರ್ಸ ಕಾಲೇಜ್ನಲ್ಲಿ ಟ್ರೆಟಿಷನಲ್ ಡೇ ನಿಮಿತ್ಯ ಎತ್ತಿನ ಬಂಡಿ ತರಿಸಲಾಗಿತ್ತು. ಪಕ್ಕಾ ಹಳ್ಳಿಯ ಸ್ಟೈಲ್ನಲ್ಲಿಯೇ ಬಟ್ಟೆ ತೊಟ್ಟು ಬಂದಿದ್ದ ಕಾಲೇಜ್ ಹುಡುಗರು, ಹುಡುಗಿಯರು ಎತ್ತಿನ ಬಂಡಿ ಏರಿದ್ದರು. ಈ ಮೂಲಕ ವಿಭಿನ್ನ ಉಡುಗೆ ತೊಟ್ಟ ವಿದ್ಯಾರ್ಥಿಗಳು ಎತ್ತಿನ ಬಂಡಿ ಏರಿ ಕಾಲೇಜ್ ಕ್ಯಾಂಪಸ್ ನಲ್ಲಿ ಭರ್ಜರಿಯಾಗಿ ಮೆರವಣಿಗೆ ಮಾಡಿದರು.
ಅದರಲ್ಲೂ ಮೆರವಣಿಗೆಯುದ್ಧಕ್ಕೂ ಡೊಳ್ಳು ಕುಣಿತದೊಂದಿಗೆ ಕಾಲೇಜ್ ಹುಡುಗ ಹುಡುಗಿಯರು ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿದ್ರು. ನಮ್ಮ ಕಾಲೇಜ್ ನಮಗೆ ಕೇವಲ ಶಿಕ್ಷಣ ನೀಡುವುದಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ನಮಗೆ ಕಲಿಕೆ ಜೊತೆಗೆ ನಮ್ಮ ಸಂಸ್ಕ್ರತಿ ಜಾಗೃತಿ ಮೂಡಿಸಲು ಸಾಕ್ಷಿಯಾಗಿದೆ ಎಂದು ಕಾಲೇಜು ವಿದ್ಯಾರ್ಥಿನಿಯರಾದ ಐಶ್ವರ್ಯ ಮತ್ತು ಭಾಗ್ಯಶ್ರೀ ಅಭಿಪ್ರಾಯಪಟ್ಟರು.
ರಾಯಚೂರು ಕೃಷಿ ವಿವಿಗೆ ಕೇಂದ್ರ ಹಣಕಾಸು ಸಚಿವರಿಂದ ಭರ್ಜರಿ ಗಿಫ್ಟ್..!
ಕಲರ್ ಕಲರ್ ವೇಷಭೂಷಣದೊಂದಿಗೆ ಆಕರ್ಷಣೆಯಾದ ರ್‍ಯಾಂಪ್ ವಾಕ್: ಇನ್ನು ಸುಮಾರು 1 ಗಂಟೆಗಳ ಕಾಲ ಕಾಲೇಜ್ ಕ್ಯಾಂಪಸ್ನಲ್ಲಿ ಬರ್ಜರಿ ಮೆರವಣಿಗೆ ನಡೆಸಿದ ಬಳಿಕ ಕಾಲೇಜ್ನ ಹುಡುಗ ಹುಡಗಿಯರು ರ್‍ಯಾಂಪ್ ವಾಕ್ ನಲ್ಲಿ ಬ್ಯೂಸಿಯಾಗಿದ್ದರು. ಕಾಲೇಜ್ನ ಆವರಣದಲ್ಲಿ ನಾಲ್ಕು ಕಡೆಗೆ ವಿದ್ಯಾರ್ಥಿಗಳೆಲ್ಲಾ ನಿಂತು ಚಪ್ಪಾಳೆ ತಟ್ಟುವ ಮೂಲಕ ರ್‍ಯಾಂಪ್ ವಾಕ್ ಮಾಡುವವರಿಗೆ ಹುರುದುಂಬಿಸುತ್ತಿದ್ದರೆ ಇತ್ತ ವಿಭಿನ್ನ ಮಾದರಿಯ ವೇಷಭೂಷಣ ತೊಟ್ಟ ಕಾಲೇಜ್ನ ಹುಡುಗರು, ಹುಡುಗಿಯರು ರ್‍ಯಾಂಪ್ ವಾಕ್ ಮಾಡುವ ಮೂಲಕ ಎಂಜಾಯ್ ಮಾಡಿದರು.
ಶಿಕ್ಷಣ ಉದ್ಯೋಗಕ್ಕೆ ಮಾತ್ರ ಸೀಮಿತವಾಗದಿರಲಿ: ಸಚಿವ ನಾಗೇಶ್
ಒಟ್ಟಿನಲ್ಲಿ ಹೇಳುವುದಾದರೆ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಕಾಲೇಜ್ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆ ಜೊತೆಗೆ ಭಾರತೀಯ ಸಂಸ್ಕ್ರತಿಯ ಅನಾವರಣಕ್ಕೆ ಮುಂದಾಗಿದ್ದು ಎಲ್ಲರೂ ಅಭಿಮಾನಪಡುವಂತಾಯಿತು.