ಬೆಂಗಳೂರು (ಸೆ.11): ರಾಜ್ಯಾದ್ಯಂತ ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪೂರಕ ಪರೀಕ್ಷೆಯಲ್ಲಿ ಆರು ಕೊರೋನಾ ಪಾಸಿಟಿವ್‌ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ರಾಜ್ಯಾದ್ಯಂತ ನಡೆದ ಪರೀಕ್ಷೆಗೆ 1,08,375 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,02,431 ವಿದ್ಯಾರ್ಥಿಗಳು ಹಾಜರಾಗಿದ್ದು, 5,941 ಮಂದಿ ಗೈರು ಹಾಜರಾಗಿದ್ದರು. ಆರು ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪಿಪಿಇ ಕಿಟ್‌ ಧರಿಸಿ ಪರೀಕ್ಷೆ ಬರೆಸಲಾಗಿದೆ. ಉಳಿದಂತೆ ಸ್ಯಾನಿಟೈಸ್‌, ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಯಿತು.

ಕಲಬುರಗಿ: MLC ಸುನೀಲ ವಲ್ಯಾಪೂರೆ, ಪುತ್ರನಿಗೆ ಕೊರೋನಾ ಸೋಂಕು ...

ಕಳೆದ ಮಾಚ್‌ರ್‍ ತಿಂಗಳಿನಲ್ಲಿ ನಡೆಯಬೇಕಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ಕೊರೋನಾ ಸಾಂಕ್ರಾಮಿಕ ವೈರಾಣು ಹರಡಿದ್ದರಿಂದ ಜೂ.18ಕ್ಕೆ ಮುಂದೂಡಲಾಗಿತ್ತು. ಅಂದಿನ ಪರೀಕ್ಷೆಯಲ್ಲಿಯೂ ಅನಾರೋಗ್ಯದಿಂದ ಗೈರು ಹಾಜರಾಗಿದ್ದವರಿಗೆ ಗುರುವಾರ ನಡೆದ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು ಎಂದು ಪಿಯು ಇಲಾಖೆ ಮಾಹಿತಿ ನೀಡಿದೆ.