ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಗುವ ಸಮಸ್ಯೆ ನಿವಾರಿಸಲು ಶಿಕ್ಷಣ ಇಲಾಖೆ ಆರಮಭ ಮಾಡಿರುವ ಯೂ ಟ್ಯೂಬ್ ಚಾನಲ್ ಸಕ್ಸಸ್ ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಇದರ ಅನುಕೂಲತೆ ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರು (ಆ.31): ಕೊರೋನಾದಿಂದಾಗಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲ ಆಗಿದ್ದು, ಆನ್‌ಲೈನ್ ಹಾಗೂ ಯೂ ಟ್ಯೂಬ್ ಚಾನಲ್‌ಗಳು.

ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆ ಜಾರಿಗೆ ತಂದಿದ್ದ ಯೂ ಟ್ಯೂಬ್ ಚಾನಲ್ ನಿಂದ ಹಲವು ವಿದ್ಯಾರ್ಥಿಗಳು ಅನುಕೂಲ ಪಡೆದುಕೊಂಡಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ್ದ ದ್ವಿತೀಯ ಪಿಯುಸಿ ಯೂ ಟ್ಯೂಬ್ ಚಾನಲ್ ಸರಾಗವಾಗಿ ನಡೆಯುತ್ತಿದೆ.

ಪ್ರೀ ರೆಕಾರ್ಡಿಂಗ್ ಕ್ಲಾಸ್ ಇದಾಗಿದ್ದು, ವಿದ್ಯಾರ್ಥಿಗಳಿಂದ ಇದಕ್ಕೆ ಗುಡ್ ರೆಸ್ಪಾನ್ಸ್ ದೊರೆಯುತ್ತಿದೆ. 

ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ: 40,000 ಉದ್ಯೋಗವಕಾಶ'...

ಜುಲೈ 22 ರಿಂದ ಈ ತನಕ ಯೂ ಟ್ಯೂಬ್ ಚಾನಲ್‌ಗೆ 1 ಕೋಟಿ ವೀವ್ಸ್ ಆಗಿದ್ದು 1.3 ಲಕ್ಷ ಸಬ್ ಸ್ಕ್ರೈಬರ್ ಆಗಿದ್ದಾರೆ.

ಅದರ್ವಾರ್ಷಿಕ ಪರೀಕ್ಷೆ ಪಠ್ಯ ಮುಗಿಸಲು ಚಿಂತನೆ ನಡೆದಿದ್ದು, ಸಾಕಷ್ಟು ವಿದ್ಯಾರ್ಥಿಗಳು ಇದರ ಅನುಕೂಲತೆ ಪಡೆದುಕೊಳ್ಳುತ್ತಿದ್ದಾರೆ.

ಕೆ-ಸೆಟ್ ಪರೀಕ್ಷೆಗೆ ದಿನಾಂಕ ಪ್ರಕಟ: ಆಲ್‌ ದಿ ಬೆಸ್ಟ್...

ಕೋವಿಡ್ ಕಾರಣ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಿಲೆಬಸ್ ಶೇಕಡ 30ರಷ್ಟು ಕಡಿತಕ್ಕೆ ಚಿಂತನೆ ನಡೆದಿದ್ದು, ಸದ್ಯದಲ್ಲೇ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.