ಕೊರೋನಾ ವೈರಸ್‌ ಜೊತೆಗೆ ಅಂಫಾನ್ ಚಮಡ ಮಾಡುತದಿಂದ ತತ್ತರಿಸಿದ ಪಶ್ಚಿಮ ಬಂಗಾಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ 1 ರೂಪಾಯಿ ಕಾಲೇಜು ಫೀಸ್ ನಿಗದಿ ಮಾಡಲಾಗಿದೆ. ಪಶ್ಚಿಮ ಬಂಗಳಾದಲ್ಲಿ ಬಹಳಷ್ಟು ಜನ ಕೆಲಸ ಕಳೆದುಕೊಂಡಿದ್ದು, ಜನ ಕಷ್ಟ ಎದುರಿಸುತ್ತಿದ್ದಾರೆ.

ಮಕ್ಕಳ ಉನ್ನತ ಶಿಕ್ಷಣ ಶುಲ್ಕ ಭರಿಸಲು ಪೋಷಕರು ಎದುರಿಸಬಹುದಾದ ಕಷ್ಟವನ್ನು ಮನಗಂಡು ಪಶ್ಚಿಮ ಬಂಗಾಳದ ನೈಹಾಟಿಯಲ್ಲಿರುವ ರಿಷಿ ಬಂಕಿಮ್ ಚಂದ್ರ ಕಾಲೇಜು ಆರಿಸಿದ ಯುಜಿ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ 1 ರೂಪಾಯಿ ನಿಗದಿಪಡಿಸಿದೆ.

ಕೆಪಿಎಸ್‌ಸಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ

ಸಬ್ಜೆಕ್ಟ್‌ಗಳನ್ನು ಆಧರಿಸಿ ಯುಜಿ ಕೋರ್ಸ್ ಶುಲ್ಕ ಸುಮಾರು 3500ರಿಂದ 11 ಸಾವಿರದ ತನಕ ಇರುತ್ತದೆ. ಬಹುಶಃ ಭಾರತದಲ್ಲಿಯೇ ಶಿಕ್ಷಣ ಶುಲ್ಕ 1 ರೂಪಾಯಿಗೆ ಇಳಿಸಿದ ಮೊದಲ ಕಾಲೇಜು ಇದಾಗಿದೆ.

ಕಾಲೇಜು ಪ್ರಾಂಶುಪಾಲ ಡಾ. ಸಂಜಿಬ್ ಕುಮಾರ್ ಸಾಹಾ ಈ ಬಗ್ಗೆ ಪ್ರತಿಕ್ರಿಯಿಸಿ, ಕಾಲೇಜಿಗೆ ಬಡ ವಿದ್ಯಾರ್ಥಿಗಳ ಎಪ್ಲಿಕೇಷನ್‌ಗಳೇ ಹೆಚ್ಚಾಗಿ ಬರುತ್ತದೆ. ನೈಹಾಟಿ ಹಾಗೂ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬಡ ಕುಟುಂಬದಿಂದ ವಿದ್ಯಾರ್ಥಿಗಳು ಬರುತ್ತಾರೆ. ಕೊರೋನಾ ಬಡಜನರ ಬದುಕಿನ ಮೇಲೆ ಭಾರೀ ಪರಿಣಾಮ ಬೀರಿರುವುದು ಎಲ್ಲರಿಗೂ ಗೊತ್ತು ಎಂದಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: 4000 ಹುದ್ದೆಗಳಿಗೆ ನೇಮಕಾತಿ

ಸೈಕ್ಲೋನ್‌ನಿಂದಾಗಿ ಜನರ ಬದುಕು ತತ್ತರಿಸಿದೆ. ಗ್ರಾಮೀಣ ಭಾಗದ ಜನರು ಭಾರೀ ನಷ್ಟ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಆಡಳಿತ ಮಂಡಳಿ ಇಂತಹ ನಿರ್ಧಾರ ತೆಗೆದುಕೊಂಡಿದೆ. ಸುಮಾರು 21 ಯುಜಿ ಕೋರ್ಸ್‌ಗಳ ಶುಲ್ಕ 1 ರೂಪಾಯಿ ಇರಲಿದೆ ಎಂದಿದ್ದಾರೆ.