ಬೆಂಗಳೂರು (ಜೂ. 15): ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ಸುವರ್ಣ ನ್ಯೂಸ್ ಒಂದರ ಹಿಂದೆ ಇನ್ನೊಂದು ಅಭಿಯಾನವನ್ನು, ವರದಿಯನ್ನು ಬಿತ್ತರಿಸುತ್ತಲೇ ಇದೆ. ಅದು 'ಈ ವರ್ಷ ಅರ್ಧ ಫೀಸ್' ಇರಬಹುದು, 'ಆನ್‌ಲೈನ್‌ ಕ್ಲಾಸ್‌ ರದ್ದುಮಾಡಿ' ಇರಬಹುದು. ಆರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸದ್ಯಕ್ಕೆ ನಡೆಸಬೇಡಿ ಎಂಬುದರಿಂದ ಹಿಡಿದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ವರದಿಯನ್ನು ಪ್ರಸಾರ ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. 

"

ಕೊರೊನಾ ಸಮಯದಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಅವರವರದ್ದೇ ಆದ ತೊಂದರೆ ತಾಪತ್ರಯಗಳಲ್ಲಿ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ  ಮಕ್ಕಳ ಅಡ್ಮಿಶನ್ ಮಾಡಿಸಲು ಹೋದ ಪೋಷಕರ ಜೊತೆ ಕೆಲವು ಶಾಲೆಗಳು ವರ್ತಿಸಿದ ರೀತಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

"

ಕೊರೊನಾ ಸಮಯದಲ್ಲಿ ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಕ್ಕಳನ್ನು ಅಡ್ಮೀಶನ್ ಮಾಡಿಸಬೇಕು. ಫೀಸ್‌ನಲ್ಲಿ ರಿಯಾಯಿತಿ ಕೊಡಿ ಎಂದು ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ತಂಡ ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿತು. ಆಗ ಫೀ ದಂಧೆಗಿಳಿದಿರುವ ಶಾಲೆಗಳ ಅಸಲಿ ಬಂಡವಾಳ ಬಯಲಾಗಿದೆ. ಫ್ರೀ ನರ್ಸರಿ ಮಗುವಿನ ಅಡ್ಮಿಷನ್‌ಗೆ 96 ಸಾವಿ ಕಟ್ಟಬೇಕಂತೆ! ಸ್ಕೂಲ್‌ ವ್ಯಾನ್‌ಗೆ ಹೆಚ್ಚುವರಿಯಾಗಿ 18 ಸಾವಿರ ಕಟ್ಟಬೇಕಂತೆ. ಒಂದು ರೂ ಕಡಿಮೆ ಮಾಡಲ್ಲ ಅಂತ ಕಡ್ಡಿ ಮುರಿದಂಗೆ ಹೇಳ್ತಾರೆ ಸಿಬ್ಬಂದಿಗಳು. 

"

ಖಾಸಗಿ ಶಾಲೆಗಳಲ್ಲಿ ಫೀಸ್ ರಿಯಾಯಿತಿ ಕೇಳಿದ್ರೆ ಏನ್ ಹೇಳ್ತಾರೆ ಅಂತ ತಿಳಿದುಕೊಳ್ಳಲು ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿದಾಗ ತಿಳಿದು ಬಂದ ಸತ್ಯವಿದು.!

"

"