ಇದು ಪರೀಕ್ಷೆಗಳ ಕಾಲ. ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಈ ಬೋರ್ಡ್ ಎಕ್ಸಾಂಗಳು ಮಹತ್ತರವಾದುದು ಎಂದು ಎಲ್ಲರಿಗೂ ತಿಳಿದೇ ಇದೆ. ಪಿಯುಸಿ ವಿದ್ಯಾಭ್ಯಾಸ ಹಂತದಲ್ಲಿ ಬದುಕಿನ ಹಾದಿಯನ್ನು ನಿರ್ಧರಿಸಿಕೊಳ್ಳುವ ಹಂತ. 

ಅದರಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಂತೂ ಯಥೇಚ್ಛವಾದ ಜವಾಬ್ದಾರಿಗಳಿರುತ್ತವೆ. ಒಂದೆಡೆ ಪಿಯುಸಿ ಪರೀಕ್ಷೆ ಮುಗಿದ ನೆಮ್ಮದಿ , ಮತ್ತೊಂದೆಡೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಟೆನ್ಷನ್‌ ಟೆನ್ಷನ್‌.

3 ವರ್ಷಕ್ಕೆ 13 ಸರ್ಕಾರಿ ನೌಕರಿ ಗಿಟ್ಟಿಸಿದ ರೇಣುಕಾ

ಸಿಇಟಿಯು ವೃತ್ತಿಪರ ಶಿಕ್ಷಣಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ವೃತ್ತಿಪರ ಸಿಇಟಿ ಪರೀಕ್ಷೆಗಳಲ್ಲಿ ಒಂದ್ ಲೇವಲ್‌ಗೆ ರ್ಯಾಂಕಿಂಗ್ ಬಂದ್ರೆ ಸಾಕಾಪ್ಪ ಸಾಕೆಂದು ಊಟ ನಿದ್ರೆ ಬಿಟ್ಟು ಓದಿದ್ದೇ ಓದಿದ್ದು. 

ಆದ್ರೆ ಇಲ್ಲೋರ್ವ ವಿದ್ಯಾರ್ಥಿನಿ NEET, AIIMS, MBBS, JIPMER, JEE ಮೇನ್ಸ್ ಸೇರಿಂದತೆ ಭಾರತದ ಎಲ್ಲಾ ವೃತ್ತಿಪರ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. 

ಸೂರತ್‌ ಮೂಲದ ಸ್ತುತಿ ಖಂಡ್ವಾಲಾ ಎನ್ನುವ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದು,  ಅಮೆರಿಕದಲ್ಲಿರುವ ವಿಶ್ವದ ಉನ್ನತ ವಿಶ್ವವಿದ್ಯಾಲಯದಲ್ಲಿ ಸೀಟ್‌ ಗಿಟ್ಟಿಸಿಕೊಂಡಿದ್ದಾರೆ.  

ಅಮೆರಿಕದಲ್ಲಿರುವ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿನಲ್ಲಿ ಇಂಜಿನಿಯರಿಂಗ್ ಮಾಡಲು ಯುಎಸ್‌ಎಗೆ ಹೊರಟು ನಿಂತಿದ್ದಾರೆ. ಸ್ತುತಿಯ ಈ ಸಾಧನೆಗೆ ಪೋಷಕರು, ಕೋಚಿಂಗ್ ಸಂಸ್ಥೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. 

AIIMS MBBS ಪ್ರವೇಶ ಪರೀಕ್ಷೆಯಲ್ಲಿ ಭಾರತಕ್ಕೆ 10ನೇ ರ‍್ಯಾಂಕ್ ಪಡೆದರೆ, JEE ನಲ್ಲಿ 1086, NEET 71ನೇ ರ‍್ಯಾಂಕ್ ಹಾಗೂ AIR ನಲ್ಲಿ 27ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.

ಸ್ತುತಿ ದಿನಕ್ಕೆ 12 ರಿಂದ 13 ಗಂಟೆಗಳ ಕಾಲ ಸ್ವಯಂ ಅಧ್ಯಯನಕ್ಕೆ ಮೀಸಲಿಟ್ಟಿದ್ದಾರಂತೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಅಥವಾ ಜೀವಶಾಸ್ತ್ರ ವಿಷಯಗಳನ್ನು ಸಮಾನ ರೀತಿಯಲ್ಲಿ ಓದಿದಕ್ಕೆ ಈ ಸಾಧನೆ ಮಾಡಲು ಸಾಧ್ಯವಾಗಿದೆಯಂತೆ.