ಬೆಂಗಳೂರು[ಫೆ.25]: ಹರಿಯಾಣ ಮೂಲದ ಸೈನ್ಸ್‌ ಓಲಂಪಿಯಾಡ್‌ ಫೌಂಡೇಶನ್‌ ವತಿಯಿಂದ ನಡೆಸಲಾದ ಇಂಟರ್‌ ನ್ಯಾಷನಲ್‌ ಮ್ಯಾಥಮೆಟಿಕ್‌ ಓಲಂಪಿಯಾಡ್‌ ಸ್ಪರ್ಧೆಯಲ್ಲಿ ನಗರದ ರಾಜಾಜಿನಗರದ ಸೇಂಟ್‌ ಆನ್ಸ್‌ ಹೈಸ್ಕೂಲ್‌ನ ಆರನೇ ತರಗತಿ ವಿದ್ಯಾರ್ಥಿನಿ ಸಿ.ಎಸ್‌.ಸಂಜನಾ ಶಾಲೆಗೆ ಚಿನ್ನದ ಪದಕದೊಂದಿಗೆ ಮೊದಲ ರಾರ‍ಯಂಕ್‌ ಪಡೆದ್ದಾರೆ.

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ..

ಈ ಸ್ಪರ್ಧೆಯಲ್ಲಿ ಜಾಗತಿಕ ಮಟ್ಟದಲ್ಲಿ 5,764ನೇ ಸ್ಥಾನ ಪಡೆದರೆ, ರಾಷ್ಟ್ರಮಟ್ಟದಲ್ಲಿ 2,186ನೇ ಸ್ಥಾನ ಪಡೆದಿದ್ದಾರೆ.

ಪತ್ರಕರ್ತ ಚೆನ್ನವೀರ ಸಗರನಾಳ್‌ ಹಾಗೂ ಜ್ಯೋತಿ ದಂಪತಿ ಪುತ್ರಿಯಾಗಿರುವ ಸಂಜನಾರ ಈ ಸಾಧನೆಗೆ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.