ಬೆಂಗಳೂರು(ಜು.26): ಪಿಇಎಸ್‌ ವಿಶ್ವವಿದ್ಯಾಲಯ ಬಿ.ಟೆಕ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪಿಸ್ಯಾಟ್‌ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜು.26ರಿಂದ 31ರ ವರೆಗೆ ಅವಕಾಶ ನೀಡಿದೆ. ಆ.1ರಿಂದ 20ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸಾರ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲು ಪಿಇಎಸ್‌ ವಿವಿಯು ಸಜ್ಜಾಗಿದೆ. ಅರ್ಜಿ ಸಲ್ಲಿಸಲು ಜು.26ರಿಂದ 31ರ ವರೆಗೆ ಅವಕಾಶ ನೀಡಿದೆ. ಈ ವೇಳೆ ವಿದ್ಯಾರ್ಥಿಗಳು ತಮ್ಮಗೆ ಅನುಕೂಲಕರವಾದ ದಿನ ಮತ್ತು ಸ್ಥಳವನ್ನು ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆ.25ರಂದು ಫಲಿತಾಂಶ ಪ್ರಕಟಿಸಲಿದೆ. ಸೆ.9ರಿಂದ 11ರ ಅವಧಿಯಲ್ಲಿ ಮೊದಲ ಸುತ್ತಿನ ಕೌನ್ಸೆಲಿಂಗ್‌ ನಡೆಯಲಿದೆ. ಮೂಲ ದಾಖಲೆಗಳನ್ನು ಸಲ್ಲಿಸಲು ಸೆ.21 ಕೊನೆಯ ದಿನವಾಗಿದೆ. ಸೆಪ್ಟಂಬರ್‌ ಕೊನೆಯ ವಾರದಲ್ಲಿ ಎರಡನೇ ಸುತ್ತಿನ ಕೌನ್ಸೆಲಿಂಗ್‌ ನಡೆಯಲಿದೆ.

ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

ದೇಶದ 35 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪರೀಕ್ಷೆ ನಡೆಸಲು ಅಗತ್ಯ ಸುರಕ್ಷತಾ ಕ್ರಮನ್ನು ಅನುಸರಿಸುತ್ತಿದ್ದು, ವಿದ್ಯಾರ್ಥಿಗಳು ಬಳಕೆ ಮಾಡುವ ಕಂಟ್ಯೂಟರ್‌ ಹಾಗೂ ಮತ್ತಿತರ ಪರಿಕರಗಳನ್ನು ಸ್ಯಾನಿಟೈಸ್‌ ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸುರಕ್ಷತೆ ಬಗ್ಗೆ ಭಯ ಬೇಡ ಎಂದು ಪಿಇಎಸ್‌ ವಿವಿ ಪ್ರಕಟಣೆ ತಿಳಿಸಿದೆ.