ನವದೆಹಲಿ, (ಜೂನ್.03): ಹಿಂದಿ ಭಾಷಾ ಕಲಿಕೆ ಕಡ್ಡಾಯ ನೀತಿ ಬಗ್ಗೆ ರಾಷ್ಟ್ರಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2019ನ್ನು ಕೇಂದ್ರ ಸರ್ಕಾರ  ತಿದ್ದುಪಡಿಗೊಳಿಸಿದ್ದು, ತ್ರಿಭಾಷಾ ನೀತಿಯಲ್ಲಿ ಹಿಂದಿ ಭಾಷೆ ವಿದ್ಯಾರ್ಥಿಯ ಆಯ್ಕೆಯ ವಿಷಯವಾಗಿದೆ ಎಂದು ತಿದ್ದುಪಡಿ ಮಾಡಿದೆ.

"

ಕೇಂದ್ರದಿಂದ ಹಿಂದಿ ಹೇರಿಕೆ; ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ

ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವಿರುವ ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.  

3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು ಎಂದು  ಸಿಎಂ ಕುಮಾರಸ್ವಾಮಿ ಅವರು ಸಹ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

ಇನ್ನು ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಪೇಸ್ ಬುಕ್ ಗಳಲ್ಲಿ #StopHindiImposition, #TNAgainstHindiImposition ಎಂಬ ಅಭಿಯಾನ ನಡೆದಿತ್ತು.

ಕಸ್ತೂರಿ ರಂಗನ್‌ ಸಿದ್ಧಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2019ರಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಕಲಿಕೆ ಕಡ್ಡಾಯವಾಗಿತ್ತು. ಮತ್ತೊಂದು ಪ್ರದೇಶಿಕ ಭಾಷೆಗೆ ಸ್ಥಾನವನ್ನು ನೀಡಲಾಗಿತ್ತು. 

ಮೇ 31ರಂದು ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಡ್ರಾಫ್ಟ್‌ ಸಲ್ಲಿಕೆಯಾದ ನಂತರ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಪ್ರಾದೇಶಿಕ ಭಾಷೆ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.