ಬೆಂಗಳೂರು, (ಜೂನ್.03): ರಾಜ್ಯದಲ್ಲಿ ಜುಲೈ 1ರಿಂದ ಶಾಲೆ ಶುರುಮಾಡುವ ಪ್ರಸ್ತಾವಿತ ದಿನಾಂಕವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದರಿಂದಾಗಿ ರಾಜ್ಯಾದ್ಯಂತ ಈ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ.

ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕರು, ಶಿಕ್ಷಕರು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿವೆ. ಈ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಬುಧವಾರ ಇಡೀ ದಿನ ಶಾಲೆ ಪ್ರಾರಂಭಿಸಬೇಕೆ? ಬೇಡ್ವಾ? ಎನ್ನುವ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯಗಳನ್ನು ಕೇಳಿದ್ದು, ಹಲವಾರು ಜನರು ಈಗಲೇ ಶಾಲೆ ಬೇಡ ಎನ್ನುವ ಮಾತುಗಳನ್ನಾಡಿದ್ದಾರೆ.

ಜುಲೈನಲ್ಲಿ ಶಾಲೆ ಪುನರಾರಂಭಕ್ಕೆ ಪೋಷಕರ ವಿರೋಧ..!

ಇದರ ಬೆನ್ನಲ್ಲೇ ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್‌ ಅವರು ಫೇಸ್‌ಬುಕ್ ಮೂಲಕ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಅದು ಈ ಕೆಳಗಿನಂತಿದೆ.

ಶಾಲೆ ಪ್ರಾರಂಭ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ
 ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಆರೋಗ್ಯಕರ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ 'ಖಾಸಗಿ ಲಾಬಿ ಪ್ರಭಾವಕ್ಕೆ ಮಣಿದಿರುವ ಸರ್ಕಾರ' ಎಂಬಂತೆ ಬಿಂಬಿತವಾಗಿರುವುದು ಅತ್ಯಂತ ದುರ್ದೈವದ ಸಂಗತಿ. ಎಲ್ಲಾ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಜೂನ್ 10, 11 ಮತ್ತು 12 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ (ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳೂ ಸೇರಿದಂತೆ) ಪೋಷಕರ ಸಭೆ ಕರೆದು ಕೆಳಕಂಡ 3 ಅಂಶಗಳ ಕುರಿತು ಅಭಿಪ್ರಾಯ ಸಂಗ್ರಹಿಸಬೇಕೆಂದು 1.6.2020 ರ ಸುತ್ತೋಲೆಯ ಮೂಲಕ ಸೂಚಿಸಿದೆ.

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಕ್ಕಳಿಗೆ ಶಿಕ್ಷಕಿಯ ಪೋರ್ನೋಗ್ರಫಿ ಪಾಠ: ಪೋಷಕರು ಗರಂ!

ಅ) ಶಾಲೆಗಳನ್ನು ಯಾವಾಗ (ಎಂದಿನಿಂದ) ಪ್ರಾರಂಭ ಮಾಡಬೇಕು?
* ನರ್ಸರಿ ಮತ್ತು ಪ್ರಾಥಮಿಕ‌ ತರಗತಿಗಳು.
* ಉನ್ನತ ಪ್ರಾಥಮಿಕ ತರಗತಿಗಳು.
* ಪ್ರೌಢಶಾಲಾ ತರಗತಿಗಳು.
ಆ) ಕೊರೋನಾ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಗತಿಗಳನ್ನು ನಡೆಸುವ ಬಗ್ಗೆ.
ಇ) ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮಗಳು.

ಶಾಲೆಗಳನ್ನು ತರಾತುರಿಯಲ್ಲಿ ಪ್ರಾರಂಭ_ಮಾಡುವ ಯಾವುದೇ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವುದಿಲ್ಲ. ಮಕ್ಕಳ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡುತ್ತದೆ.

'ಸ್ಕೂಲ್ ಓಪನ್ ಮಾಡ್ಬೇಡಿ'; ಕೋವಿಡ್ ಆತಂಕದ ಮಧ್ಯೆ ಶಾಲೆ ಆರಂಭಕ್ಕೆ ವಿರೋಧ

ಮಕ್ಕಳಲ್ಲಿ ಕಲಿಕೆಯನ್ನು ನಿರಂತರವಾಗಿ ಇಡಲು ದೂರದರ್ಶನದ ಪ್ರತ್ಯೇಕ ಶಿಕ್ಷಣ ಚಾನೆಲ್ ಪ್ರಾರಂಭಿಸುವುದೂ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಶೋಧಿಸುತ್ತಿದೆ. ಈ ಅಂಶಗಳನ್ನು ಅರ್ಥೈಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲ‌ ಮಾಧ್ಯಮಗಳಲ್ಲಿ ಬರುತ್ತಿರುವ ಟೀಕೆಗಳನ್ನು ಗಮನಿಸಿದ್ದೇನೆ.

ಎಳೆಯ ಮಕ್ಕಳ ಕುರಿತ ಪೋಷಕರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ ಮತ್ತು ಆ ಕಾಳಜಿಗೆ ಅಗತ್ಯ ಮನ್ನಣೆ ನೀಡುತ್ತೇನೆ. ಆ ಮಕ್ಕಳಿಗೆ ಮತ್ತು ಪೋಷಕರಿಗೆ ಕಿಂಚಿತ್ ಆಪತ್ತು ತರುವ ಯಾವುದೇ ಕಾರ್ಯ ನಮ್ಮಿಂದ ಆಗುವುದಿಲ್ಲ.

ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಿಸುವ ಅತಿ ದೊಡ್ಡ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.‌ ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಸರಕಾರದ ಪ್ರತಿ ಹೆಜ್ಜೆ ಸಂವೇದನಾಶೀಲತೆಯಿಂದ ಕೂಡಿರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ.

- ಎಸ್​. ಸುರೇಶ್​ ಕುಮಾರ್​, ಶಿಕ್ಷಣ ಸಚಿವರು