JEE ಮತ್ತು NEET ಪರೀಕ್ಷೆ ಮುಂದೂಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ  ಸ್ವಿಡನ್‌ನ ಪರಿಸರ ಹೋರಾಟಗಾರ್ತಿ ಬೆಂಬಲಕ್ಕೆ ನಿಂತಿದ್ದಾರೆ.

ನವದೆಹಲಿ, (ಆ.25): ಇದೇ ಸೆಪ್ಟೆಂಬರ್‌ನಲ್ಲಿ JEE, NEET ಪರೀಕ್ಷೆಗಳು ನಡೆಸಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದೆ. ಮತ್ತೊಂದೆಡೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನ ಮುಂದೂಡಬೇಕೆಂಬ ಕೂಗು ಎದ್ದಿದೆ. ಈ ಕೂಗಿಗೆ ಇದೀಗ ಸ್ವಿಡನ್‌ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಧ್ವನಿಗೂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗ್ರೇಟಾ ಥನ್‍ಬರ್ಗ್, ಕೊರೋನಾ ಸೋಂಕು ದೊಡ್ಡ ಮಟ್ಟದಲ್ಲಿ ಹರಡುತ್ತಿದೆ. ಅಲ್ಲದೇ ನೆರೆ, ಪ್ರವಾಹದಿಂದ ಜನರು ತತ್ತರಿಸುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳನ್ನ ಪರೀಕ್ಷೆ ಬರೆಯಲು ಹೇಳಿತ್ತಿರುವುದು ಅಸಮಂಜಸ ಎಂದು ಅಸಮಾಧಾನ ಹೊರಹಾಕಿದ್ದಾರೆ.

NEET,JEE ಪರೀಕ್ಷೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ

ಕೇವಲ 17 ವರ್ಷ ವಯಸ್ಸಿನ ಗ್ರೇಟಾ ಥನ್‍ಬರ್ಗ್, ವಿಶ್ವಸಂಸ್ಥೆಯಲ್ಲಿ ಹವಾಮಾನ ಸಮ್ಮೆಳನದಲ್ಲಿ ಪಾಲ್ಗೊಂಡು ವಿಶ್ವದ ಗಮನಸೆಳೆದಿದ್ದರು. ಅತಿ ಚಿಕ್ಕ ವಯಸ್ಸಿನ ಗ್ರೆಟಾ ಟ್ವಿಟ್ಟರ್‌ನಲ್ಲಿ ಬರೋಬ್ಬರಿ 4.1 ಮಿಲಿಯನ್ ಪಾಲೋರ್ಸ್ ಹೊಂದಿದ್ದಾರೆ.

Scroll to load tweet…

ಸೆಪ್ಟೆಂಬರ್.1 ರಿಂದ 6ರವರೆಗೆ ಜೆಇಇ ಮತ್ತು ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪ್ರವೇಶಕ್ಕಾಗಿ ನಡೆಸುವಂತ ಎನ್‌ಇಇಟಿ ಪರೀಕ್ಷೆ ಇದೇ ಸೆಪ್ಟೆಂಬರ್.13ಕ್ಕೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದಿನಾಂಕ ನಿಗದಿ ಮಾಡಿದೆ.

ಈ ಪರೀಕ್ಷೆಗಳನ್ನ ಮುಂದೂಡುವಂತೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಕೋರ್ಟ್, ಪರೀಕ್ಷೆ ಮುಂದೂಡುವ ಅರ್ಜಿಯನ್ನು ವಜಾಗೊಳಿಸಿತ್ತು.