ಖಾಸಗಿ ಶಿಕ್ಷಣ ಸಂಸ್ಥೆಗಳೇ ಎಚ್ಚರ, ಶಿಕ್ಷಣ ಇಲಾಖೆಯ ಖಡಕ್ ಸೂಚನೆ ಒಮ್ಮೆ ನೋಡಿ
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಖಡಕ್ ಸೂಚನೆ/ ಸ್ವಿಚ್ಛೆಯಿಂದ ಮುಂದೆ ಬಂದರೆ ಸ್ವೀಕರಿಸಿ/ ಹಣ ಪಡೆದರೆ ಶಿಕ್ಷಕರಿಗೆ ವೇತನ ನೀಡುವುದಕ್ಕೆ ಮೊದಲ ಆದ್ಯತೆ ನೀಡಿ/
ಬೆಂಗಳೂರು(ಏ. 23) ಲಾಕ್ ಡೌನ್ ಅವಧಿ ಮುಗಿಯುವವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿಗೆ ಮುಂದಾಗಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇದರ ಜತೆಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಮಕ್ಕಳ ಬೋಧನಾ ಶುಲ್ಕ ಕಟ್ಟಲು ಸಮರ್ಥರಿರುವ ಪೋಷಕರು ಸ್ವ ಇಚ್ಛೆಯಿಂದ ನೀಡಲು ಮುಂದೆ ಬಂದರೆ ಅವರಿಂದ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರಿಗೆ ಖಡಕ್ ಸೂಚನೆ ನೀಡಿದ ರಾಜ್ಯ ಸರ್ಕಾರ
ಒಂದು ವೇಳೆ ಹಣ ಕಟ್ಟಲು ಒತ್ತಾಯ ಮಾಡುವ ದೂರುಗಳು ಕೇಳಿ ಬಂದರೆ ಅಂಥ ಶಿಕ್ಷಣ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಪೋಷಕರು ನೀಡುವ ಹಣವನ್ನು ಶಿಕ್ಷಕರಿಗೆ ವೇತನ ನೀಡುವುದುದಕ್ಕೆ ಮೊದಲ ಆದ್ಯತೆಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು ಎಂಬ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ.