ನವದೆಹಲಿ, (ಮೇ.18): ಸಿಬಿಎಸ್‌ಇ 10 ಹಾಗೂ 12 ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್‌ಇ ಪರೀಕ್ಷೆ ಆರಂಭವಾಗಲಿವೆ.

ಇಂದು (ಸೋಮವಾರ) ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಬಿಡುಗಡೆ ಮಾಡಿದ್ದು, 10ನೇ ತರಗತಿ ಪರೀಕ್ಷೆ ಜುಲೈ 1ರಿಂದ ಜುಲೈ 15ರವರೆಗೆ ನಡೆಯಲಿದೆ. ಇನ್ನು 12ನೇ ತರಗತಿ ಪರೀಕ್ಷೆಗಳು ಸಹ ಜುಲೈ 1 ರಿಂದ 15ರವರೆಗೆ ನಡೆಯಲಿದೆ. 

ಕರ್ನಾಟಕದ SSLC, PUC ಪರೀಕ್ಷೆ ದಿನಾಂಕ ಘೋಷಣೆ 

ಈ ಹಿಂದೆ ನಿಗದಿಯಾದಂತೆ ಮಾರ್ಚ್ 19 ರಿಂದ ಮಾರ್ಚ್ 31ರವರೆಗೂ ಸಿಬಿಎಸ್‌ಇ ಪರೀಕ್ಷೆಗಳು ನಡೆಯಬೇಕಿತ್ತು. ಆದ್ರೆ, ದೇಶದಲ್ಲಿ ಕೊರೋನಾ ಅಟ್ಟಹಾಸದಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. 

ಸಿಬಿಎಸ್‌ಇ ಪರೀಕ್ಷೆ ಫಲಿತಾಂಶವು ಆಗಸ್ಟ್‌ನಲ್ಲಿ ಬರಲಿದೆ. ಕಳೆದ ವರ್ಷ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಮೇ 2 ರಂದು ಪ್ರಕಟವಾಗಿತ್ತು. 10ನೇ ತರಗತಿ ಫಲಿತಾಂಶ ಮೇ 6 ರಂದು ಬಂದಿತ್ತು. ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇ. 83.4 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.