ಮೈಸೂರು (ಜೂ. 21) : ಜಿಲ್ಲಾ ಕೈಗಾರಿಕ ಕೇಂದ್ರದ ವತಿಯಿಂದ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳ ವಯೋಮಿತಿ ಸಾಮಾನ್ಯ ವರ್ಗದವರಿಗೆ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ, ವಿಶೇಷ ವರ್ಗದವರಿಗೆ ( ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ ಮಹಿಳೆ) ಕನಿಷ್ಟ 18 ರಿಂದ ಗರಿಷ್ಟ 45 ವರ್ಷ. ಯೋಜನಾ ವೆಚ್ಚ ರೂ.5.00 ಲಕ್ಷ ಮತ್ತು ಅದಕ್ಕಿಂದ ಮೇಲ್ಪಟ್ಟ ಯೋಜನೆಗಳನ್ನು ಸ್ಥಾಪಿಸುವ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ 8ನೇ ತರಗತಿ ಉತ್ತೀರ್ಣರಾಗಿರಬೇಕು.

ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಸಾಮಾನ್ಯ ವರ್ಗದವರಿಗೆ ಯೋಜನಾ ವೆಚ್ಚದ ಶೇ.25% (ಗರಿಷ್ಠ 2.50 ಲಕ್ಷದವರಿಗೆ) ಹಾಗೂ ವಿಶೇಷ ಉದ್ಯಮಶೀಲರಿಗೆ ( ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ ಮಹಿಳೆ)ಯೋಜನಾ ವೆಚ್ಚ ಶೇ.35%ರಷ್ಟು (ಗರಿಷ್ಠ ರೂ. 3.50 ಲಕ್ಷದವರಿಗೆ) ಸಹಾಯಧನ ಮಂಜೂರು ಮಾಡಲಾಗುವುದು.

ಇದನ್ನೂ ಓದಿ | ಕೆಎಸ್ಆರ್‌ಟಿಸಿ ನೇಮಕಾತಿ : ಚಾಲಕ, ನಿರ್ವಾಹಕ ಹುದ್ದೆ ಭರ್ತಿ

ಆಸಕ್ತರು www.cmegp.kar.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಜುಲೈ 12ರೊಳಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿಯ ಪ್ರತಿಯನ್ನು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಯ್ಯಾಜಿರಾವ್ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2520886, 0821-2563370 ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.