ಮಂಗಳೂರು :  ಕುಖ್ಯಾತ ಸೈಕೋ ಕಿಲ್ಲರ್ ಸೈನೈಡ್  ಮೋಹನ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. 

ಸೈಕೋ ಕಿಲ್ಲರ್ ಗೆ ಮಂಗಳೂರು ಜಿಲ್ಲಾ ನ್ಯಾಯಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. 

ಮೋಹನ್ ವಿರುದ್ಧ 20ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಸೈನೈಡ್ ಬಳಸಿ ಮಹಿಳೆಯರನ್ನು ಆತ ಹತ್ಯೆ ಮಾಡುತ್ತಿದ್ದ. 

ಮದುವೆಯಾಗುವುದಾಗಿ ಮಹಿಳೆಯರನ್ನು ನಂಬಿಸಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದ ಆತ, ಔಷಧಿ ರೂಪದಲ್ಲಿ ಸೈನೈಡ್ ನೀಡಿಮಹಿಳೆಯರನ್ನು ಕೊಲೆಗೈಯುತ್ತಿದ್ದ. 

ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸೈನೈಡ್ ಮೋಹನ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದು, ಇದೀಗ ಈ ಸಂಬಂಧ ವಿಚಾರಣೆಗ ನಡೆಸಿದ ಮಂಗಳೂರು ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.