14ನೇ ಜೂನ್ 2025 ಶನಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ 

ಮೇಷ(Aries): ಎಷ್ಟೇ ವೇಗವಾಗಿ ಕೆಲಸ ಮಾಡಬೇಕೆಂದರೂ ಬಾಹ್ಯ ವಿಚಾರಗಳು ಜೊತೆಗೆ ಕೈ ಜೋಡಿಸದೆ ಎಲ್ಲವೂ ವಿಳಂಬವಾಗುತ್ತವೆ. ಹೀಗಾಗಿ, ಇಡೀ ದಿನ ಅಸಮಾಧಾನ ಕಾಡಬಹುದು. ತಲೆನೋವು ಬಾಧಿಸಬಹುದು. ಷೇರಿನಲ್ಲಿ ನಷ್ಟ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡಿ.

ವೃಷಭ(Taurus): ಇಡೀ ದಿನ ಚಟುವಟಿಕೆಯಿಂದ ಕೆಲಸ ಮಾಡುತ್ತೀರಿ. ಹೊಸ ಹುಮ್ಮಸ್ಸೊಂದು ಆವರಿಸಿದಂತೆನಿಸುತ್ತದೆ. ಪ್ರೇಮ ಸಂಬಂಧಗಳು ಆರಂಭವಾಗಬಹುದು. ವಿವಾಹ ಕೆಲಸಗಳು ಸರಾಗಿವಾಗಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ಸುಬ್ರಹ್ಮಣ್ಯನ ಸ್ಮರಣೆಯಿಂದ ನೆಮ್ಮದಿ.

ಮಿಥುನ(Gemini): ಆಡಳಿತ ನಿರ್ವಹಣೆಯ ಕೆಲಸ ಸಿಗುವ ಸಾಧ್ಯತೆ ಇದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಸಂಗಾತಿಯ ಮನೋಭಿಲಾಶೆ ಏನೆಂದು ಆಲಿಸಿ. ಮಕ್ಕಳ ಆರೋಗ್ಯ ಸಮಸ್ಯೆಗಳು ಕಂಗೆಡಿಸಬಹುದು. ನಿಮ್ಮ ಬದುಕಿನ ಗುರುಗಳನ್ನು ನೆನೆಸಿಕೊಳ್ಳಿ.

ಕಟಕ(Cancer): ನೀವು ಇನ್ನೊಬ್ಬರ ಒಳಿತಿಗಾಗಿ ಎಂದು ಆಡಿದ ಮಾತುಗಳೇ ತಪ್ಪು ಅರ್ಥೈಸುವಿಕೆಗೆ ಕಾಣವಾಗಬಹುದು. ಇಲ್ಲವೇ ಕೋಪದ ಭರದಲ್ಲಿ ನೀವಾಡುವ ಮಾತುಗಳಿಂದ ನೆಮ್ಮದಿ ಕೆಡಬಹುದು. ಕಚೇರಿಯಲ್ಲಿ ಆದಷ್ಟು ಮೌನವಾಗಿದ್ದು ಕೆಲಸದ ಕಡೆ ಗಮನ ವಹಿಸಿ. ಮನೆ ದೇವರ ಪ್ರಾರ್ಥನೆ ಮಾಡಿ.

ಸಿಂಹ(Leo): ನಿಮ್ಮ ನಿರೀಕ್ಷೆಗಳು ಈಡೇರದೇ ನಿರಾಸೆಯಾಗುವ ಸಾಧ್ಯತೆ ಇದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗದೆ ಕಂಗಾಲಾಗುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಬಹುದು. ತಾಯಿಯ ಆರೋಗ್ಯದ ಕುರಿತು ಚಿಂತಿತರಾಗುವಿರಿ. ಧನ್ವಂತರಿ ಶ್ಲೋಕ ಹೇಳಿಕೊಳ್ಳಿ.

ಕನ್ಯಾ(Virgo): ಹೃದಯ ವ್ಯಾಧಿಯಿಂದ ಬಳಲುವ ಸಾಧ್ಯತೆ ಇದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಯಾವುದೇ ಕಷ್ಟ ಎದುರಿಸುತ್ತಿದ್ದರೆ ಅದನ್ನು ನಿಮ್ಮ ಹಿರಿಯರು ಹೇಗೆ ಎದುರಿಸಿದ್ದರು ಎಂದು ವಿಚಾರಿಸಿ. ಅವರಿಗೆ ನೆರವಿಗೆ ಬಂದ ವಿಷಯಗಳು ನಿಮಗೂ ನೆರವಾಗಬಹುದು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.

ತುಲಾ(Libra): ಸಂಗಾತಿಯ ಮೇಲೆ ಅನಗತ್ಯ ಅನುಮಾನದಿಂದ ಯಾವ ಲಾಭವೂ ಇಲ್ಲ. ಮಾತುಕತೆಯಲ್ಲಿ ವಿಷಯ ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ವೃಥಾ ಮನಸ್ಸು ಹಾಳಾಗುವುದು. ನಿಮ್ಮ ಪ್ರೇಮ ನಿವೇದನೆಗೆ ಫಲ ಸಿಗಲಿದೆ. ಹೊಸ ಭಾವನೆಗಳು ಭರಪೂರವಾಗಿ ಮನಸ್ಸನ್ನು ಆವರಿಸಲಿವೆ. ಶಿವ ಶತನಾಮಾವಳಿ ಹೇಳಿ.

ವೃಶ್ಚಿಕ(Scorpio): ದೊಡ್ಡ ಹಣಕಾಸಿನ ಹೊಣೆ ಹೆಗಲೇರುವುದು. ಒತ್ತಡಕ್ಕೊಳಗಾಗುವ ಅಗತ್ಯವಿಲ್ಲ. ಹಂತ ಹಂತವಾಗಿ ನಿಭಾಯಿಸುವುದನ್ನು ಕಲಿಯುವಿರಿ. ಸಂಗಾತಿಯೊಂದಿಗೆ ಅತ್ಯುತ್ತಮ ಕ್ಷಣಗಳನ್ನು ಕಳೆಯುವಿರಿ. ಹೂಡಿಕೆ ಮಾಡಬೇಡಿ. ಈಶ್ವರ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲಗಳು ಕಾಡಬಹುದು. ಮನಸ್ಸು ಚಂಚಲವಾಗಿರುವುದು. ಅನಗತ್ಯ ಆತಂಕಗಳು ಕಾಡುವುವು. ಆಸ್ತಿ ವಿಚಾರಗಳನ್ನು ಇಂದು ಕೈಗೆತ್ತಿಕೊಳ್ಳಬೇಡಿ. ಶಿವ ಸಹಸ್ರನಾಮ ಪಠಿಸಿ.

ಮಕರ(Capricorn): ಗೃಹ ಸೌಖ್ಯ ಇರಲಿದೆ. ಹಬ್ಬದ ತಯಾರಿ ಕೆಲಸಗಳಿಂದ ಸ್ತ್ರೀಯರಿಗೆ ಹುರುಪು ದೊರೆಯಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ದೇವತಾ ಕಾರ್ಯಗಳಿಗೆ ದೈವಾನುಕೂಲ ಒದಗಿ ಬಂದು ಎಲ್ಲ ಸುಸೂತ್ರದಲ್ಲಿ ಸಾಗುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಕುಂಭ(Aquarius): ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ಧಿಸಲಿದೆ. ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮ. ಮನೆ ಕೆಲಸದವರ ಧೋರಣೆಯಿಂದ ಬೇಸರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಮೀನ(Pisces): ಕ್ರಯ ವಿಕ್ರಯದಿಂದ ನಷ್ಟ. ಗೃಹ ನವೀಕರಣ ಕಾರ್ಯಗಳು ನಡೆಯಲಿವೆ. ನಿಮ್ಮ ಬಜೆಟ್‌ನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಮಾನಸಿಕ ತುಮುಲಗಳು ಕಾಡಲಿವೆ. ಧ್ಯಾನದ ಸಹಾಯ ಪಡೆಯಿರಿ. ಪಾರ್ವತಿ ಅಷ್ಟೋತ್ತರ ಪಠಿಸಿ.