Asianet Suvarna News Asianet Suvarna News

Numerology Today: ಜಾಬ್ ಬಗ್ಗೆ ಡೋಂಟ್ ಕೇರ್; ಯುವಕರಿಗೆ ಭವಿಷ್ಯದಲ್ಲಿ ಲಾಸ್..!

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು.

numerology prediction for August 7th 2023 here is what you can expect today as per your birth number suh
Author
First Published Aug 7, 2023, 9:56 AM IST | Last Updated Aug 7, 2023, 9:56 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)

ಇಂದು ನೀವು ಭಾವನಾತ್ಮಕವಾಗಿ ಸದೃಢರಾಗಿರುತ್ತೀರಿ. ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಕ್ಕೆ ತೆರಳುವ ಕಾರ್ಯಕ್ರಮವೂ ನಡೆಯಲಿದೆ.ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆ ಆಗಲಿದೆ.  ಕೆಲವು ತೊಂದರೆ ಮತ್ತು ಸಮಸ್ಯೆ ಎದುರಾಗಬಹುದು.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)

ನೀವು ಭೂಮಿ-ಆಸ್ತಿ ಮತ್ತು ಹೂಡಿಕೆಯಂತಹ ಚಟುವಟಿಕೆಗಳಲ್ಲಿ ನಿರತರಾಗಿರಬಹುದು. ಇಂದು ಯಾವುದಾದರೂ ಒಂದು ಅತ್ಯುತ್ತಮ ಸುದ್ದಿ ಸಹ ಪಡೆಯಬಹುದು. ನೀವು ಪ್ರತಿ ಕೆಲಸದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ ಮತ್ತು ಕೆಲಸವನ್ನು ನಿರ್ವಹಿಸುತ್ತೀರಿ. ಯುವಕರಿಗೆ ತಮ್ಮ ವೃತ್ತಿ ಸಂಬಂಧಿತ ಕಾರ್ಯಗಳಲ್ಲಿ ಹೆಚ್ಚಿನ ಗಮನ ಬೇಕು.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)

ಮಾನಸಿಕವಾಗಿ ಇಂದು ನೀವು ಸದೃಢವಾಗಿ ಇರುವಿರಿ. ಯಾರನ್ನಾದರೂ ಭೇಟಿಯಾದ ನಂತರ ಪ್ರಯೋಜನಕಾರಿ ಯೋಜನೆಗಳನ್ನು ಪಡೆಯುವಿರಿ. ವಾಹನಕ್ಕೆ ಅಧಿಕ ಖರ್ಚು
ಅಥವಾ ಮನೆ ದುರಸ್ತಿ ಕಾರ್ಯಗಳು ಬಜೆಟ್ ಅನ್ನು ಹಾಳುಮಾಡಬಹುದು.

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)

ಇಂದು ಕೆಲವು ಕೆಲಸಗಳಲ್ಲಿ ಉತ್ತಮ ಯಶಸ್ಸು ಸಿಗುತ್ತದೆ, ಇದರಿಂದ ಉತ್ಸಾಹ ಹೆಚ್ಚಾಗಲಿದೆ. ಆದ್ದರಿಂದ ನೀವು ದಿನವಿಡೀ ದಣಿವನ್ನು ಮರೆತುಬಿಡುತ್ತೀರಿ. ಒಂದು ಯಾವುದೇ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸಿನ ಉತ್ತಮ ಅವಕಾಶ ಇದೆ. 

ಆಗಸ್ಟ್‌ನಲ್ಲಿ 4 ಗ್ರಹಗಳ ರಾಶಿ ಬದಲಾವಣೆ; ದೋಷದಿಂದ ಪಾರಾಗಲು ಹನುಮಾನ್ ಮೊರೆ ಹೋಗಿ..!

 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)

ಇಂದು ಅದೃಷ್ಟ ನಿಮ್ಮ ಕಡೆ ಇದೆ. ಲಾಭದ ಹೊಸ ಮಾರ್ಗಗಳು ಹೊರಹೊಮ್ಮುತ್ತವೆ. ಹಣಕಾಸಿನ ವಿಷಯಗಳು ಸಹ ಯಶಸ್ವಿಯಾಗುತ್ತವೆ. ನಿಮ್ಮ ವಿರೋಧಿಗಳ ಚಲನವಲನಗಳನ್ನು ನಿರ್ಲಕ್ಷಿಸಬೇಡಿ. ಸಣ್ಣ ವಿಷಯಕ್ಕೆ ಯಾರೊಂದಿಗಾದರೂ ಜಗಳವಾಗಬಹುದು.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)

ಇಂದು ಕನಸನ್ನು ನನಸಾಗಿಸುವ ಮೂಲಕ ಮಾನಸಿಕ ನೆಮ್ಮದಿ ಪಡೆಯಬಹುದು. ಸಮಯ ಬಹಳ ಮುಖ್ಯ, ಅದರ ಸದುಪಯೋಗ ಮಾಡಿಕೊಳ್ಳಿ. ನೀವು ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ನಿಮ್ಮ ನಿರ್ಧಾರ ತುಂಬಾ ಸರಿ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)

ನಿಮ್ಮ ನಡವಳಿಕೆ ಮತ್ತು ಕೆಟ್ಟ ಸಂಬಂಧಗಳನ್ನು ಸರಿಪಡಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆಯಲ್ಲಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಅಪಾರ್ಥಗಳು ಉಂಟಾಗಬಹುದು

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)

ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕೊಡುಗೆ ಇರಲಿದೆ. ಯುವಕರ ವೃತ್ತಿಜೀವನದ ಬಗ್ಗೆ ಅಜಾಗರೂಕತೆ, ಭವಿಷ್ಯಕ್ಕೆ ಹಾನಿಕಾರಕ. 

ಗುರು ಸ್ಥಾನ ಬದಲಾವಣೆ; ಈ ರಾಶಿಗಳಿಗೆ ಸಂಪತ್ತು, ವರ್ಷಪೂರ್ತಿ ಅದೃಷ್ಟ..!

 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)

ಸಮಯ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನಿಕಟ ವ್ಯಕ್ತಿಯ ನಕಾರಾತ್ಮಕ ಚಟುವಟಿಕೆಯಿಂದ ನೀವು ಆಘಾತಕ್ಕೊಳಗಾಗಬಹುದು. ವಾಹನ ಅಥವಾ ಮನೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ಜೋಪಾನವಾಗಿ ಇರಿಸಿ.

Latest Videos
Follow Us:
Download App:
  • android
  • ios