Daily Horoscope:ಈ ರಾಶಿಗೆ ಇಂದು ಸಂಗಾತಿ ಮೇಲೆ ಅನುಮಾನ, ಮನಸ್ಸಿನ ನೆಮ್ಮದಿ ಹಾಳು

12 ಮೇ 2023, ಶುಕ್ರವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ?
 

Daily Horoscope of may 12th 2023 in kannada anu

ಮೇಷ (Aries): ಇಂದು ನಿಮ್ಮ ಸಂಗಾತಿಯ ದೌರ್ಬಲ್ಯ ಯಾವುದು ಎಂಬುದು ನಿಮಗೆ ತಿಳಿಯಲಿದೆ. ಹೀಗಾಗಿ ನಿಮ್ಮಿಬ್ಬರ ನಡುವೆ ಜಗಳ ನಡೆದಾಗ ಸಂಗಾತಿಯ ಈ ದೌರ್ಬಲ್ಯವನ್ನೇ ಬಳಸಿಕೊಂಡು ಸಂಬಂಧವನ್ನು ಮತ್ತೆ ಸುಧಾರಿಸಬಹುದು ಎಂಬ ಸತ್ಯ ನಿಮಗೆ ಗೋಚರವಾಗುತ್ತದೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ನಾನಾ ತಂತ್ರಗಳನ್ನು ಹಣೆಯುತ್ತೀರಿ. ಆದರೆ, ನಿಮ್ಮ ಪ್ರೀತಿ ಸಂಗಾತಿಗೆ ಅರ್ಥವಾಗದೆ ಹೋಗುವ ಸಾಧ್ಯತೆಯೂ ಇದೆ. 

ವೃಷಭ(Taurus): ಇಂದಿನ ದಿನ ನಿಮಗೆ ಸಕಾರಾತ್ಮಕವಾಗಿಲ್ಲ. ಕಳೆದ ಕೆಲವು ದಿನಗಳಲ್ಲಿ ನೀವು ಮಾಡಿದ ತಪ್ಪುಗಳು ಹಾಗೂ ನಿಮ್ಮ ವರ್ತನೆ ಬಗ್ಗೆ ನಿಮಗೆ ಅರಿವಾಗುತ್ತದೆ. ಇದು ನಿಮ್ಮ ಈಗಿನ ಯಶಸ್ಸು ಹಾಗೂ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಇಂದು ಸಕಾರಾತ್ಮಕ ಹೆಜ್ಜೆ ಇಡುತ್ತೀರಿ. ನಿಮ್ಮ ಪ್ರೇಮ ಜೀವನ ಕೂಡ ಇಂದು ಸುಖಮಯವಾಗಿರುತ್ತದೆ. 

ಮಿಥುನ(Gemini): ಇಂದು ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇಂದು ನಿಮಗೆ ಶುಭಸುದ್ದಿ ಸಿಗಲಿದೆ. ಇನ್ನು ನೀವು ಈಗಾಗಲೇ ಉದ್ಯೋಗದಲ್ಲಿದ್ದರೆ ಸ್ವಲ್ಪ ಶ್ರಮವಹಿಸಿ ಹೊಸ ಉದ್ಯೋಗದ ಹುಡುಕಾಟ ನಡೆಸೋದು ಅಗತ್ಯ. ಹಣಕಾಸಿನ ಸ್ಥಿತಿ ಸುಧಾರಿಸಲು ಹೆಚ್ಚಿನ ಗಮನ ಕೇಂದ್ರೀಕರಿಸುವ ಕಾರಣ ನಿಮ್ಮ ಪ್ರೀತಿ ಜೀವನಕ್ಕೆ ತುಸು ಹಿನ್ನಡೆಯಾಗಬಹುದು. ಆದರೆ, ಸಂಗಾತಿಯಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಲಿದ್ದು, ಇದು ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ಕಟಕ(Cancer): ಇಂದು ನೀವು ಸಕಾರಾತ್ಮಕ ವ್ಯಕ್ತಿತ್ವದ ಅನೇಕ ಜನರನ್ನು ಭೇಟಿಯಾಗಲಿದ್ದೀರಿ. ಇದು ನಿಮ್ಮನ್ನು ಖುಷಿಪಡಿಸುವ ಜೊತೆಗೆ ಉತ್ತಮ ವ್ಯಕ್ತಿತ್ವ ಹೊಂದಲು ಸ್ಫೂರ್ತಿ ತುಂಬುತ್ತದೆ. ನಿಮ್ಮ ಸಂಬಂಧಿಗಳು ಇಂದು ನಿಮಗೆ ಅಚ್ಚರಿ ನೀಡುವಂತಹ ಕಾರ್ಯಕ್ರಮವೊಂದನ್ನು ಆಯೋಜಿಸಿರುತ್ತಾರೆ. ಇಂದು ಸುಭದ್ರತೆಯ ಅನುಭವ ಹೊಂದುವ ಜೊತೆಗೆ ಆತ್ಮವಿಶ್ವಾಸದಿಂದ ಇರುತ್ತೀರಿ.

ಸಿಂಹ(Leo): ಇಂದಿನ ದಿನ ನಿಮಗೆ ಉತ್ತಮವಾಗಿದೆ. ಪರಿಸ್ಥಿತಿ ಹೇಗೆ ಇದ್ದರೂ ನಾವೆಲ್ಲರೂ ಒಬ್ಬರ ಮುಖದಲ್ಲಿ ಮತ್ತೊಬ್ಬರು ನಗು ತರಿಸಲು ಸಮರ್ಥರು ಎಂಬುದನ್ನು ನೀವು ಇಂದು ಎಲ್ಲರಿಗೂ ಮನವರಿಕೆ ಮಾಡಿಸುತ್ತೀರಿ. ನಿಮ್ಮ ಸುತ್ತಮುತ್ತಲಿನ ಜನರು ಇಂದು ನಿಮಗೆ ಪ್ರೀತಿ ತೋರುತ್ತಾರೆ. ದೊಡ್ಡ ಪ್ರಮಾಣದ ಲಾಭವಾಗಲಿದೆ. ಹೊಸ ಹೂಡಿಕೆಗಳನ್ನು ಮಾಡಲು ಇಂದಿನ ದಿನ ಸೂಕ್ತವಾಗಿದೆ. 

ಮನೆಯಲ್ಲಿ ಪದೇ ಪದೇ ಹೀಗಾಗ್ತಿದ್ರೆ ಪಿತೃ ದೋಷವೇ ಕಾರಣ

ಕನ್ಯಾ(Virgo): ಸಮಯವನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾದರೆ ಇಂದು ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಇಂದು ಯಾವೆಲ್ಲ ಕೆಲಸಗಳನ್ನು ಮಾಡಿ ಮುಗಿಸಬೇಕಿದೆ ಎಂಬ ಪಟ್ಟಿಯನ್ನು ಆಗಾಗ ಪರಿಶೀಲಿಸುತ್ತಲಿರಿ. ಇಂದು ಯಾವುದೇ ಕೆಲಸಗಳು ಉಳಿಯದಂತೆ ಮಾಡಿ ಮುಗಿಸಿ. ಸಹನುಭೂತಿ, ಕಾಳಜಿ ಮೂಲಕ ಉತ್ತಮ ಸಂಗಾತಿಯಾಗಲು ಪ್ರಯತ್ನಿಸಿ.

ತುಲಾ(Libra):ಇಂದು ನೀವು ಖುಷಿಪಡುವ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ. ಸಂಗಾತಿ ನಿಮಗೆ ಎಲ್ಲ ಕೆಲಸಗಳಲ್ಲೂ ನೆರವು ನೀಡುತ್ತಾರೆ. ಹಿಂದಿನ ಕಹಿ ಅನುಭವವೊಂದು ಆಗಾಗ ನೆನಪಾಗಿ ಮನಸ್ಸಿಗೆ ಕಿರಿಕಿರಿಯ ಅನುಭವವಾಗುವ ಸಾಧ್ಯತೆ. ಆಪ್ತಸ್ನೇಹಿತರ ಭೇಟಿ ಮನಸ್ಸಿಗೆ ತುಸು ನೆಮ್ಮದಿ ನೀಡಲಿದೆ.

ವೃಶ್ಚಿಕ(Scorpio): ನಿಮ್ಮ ಬಹುದಿನದ ಕನಸು ನನಸಾಗಲು ಸಾಕಷ್ಟು ಶ್ರಮ ವಹಿಸೋದು ಅಗತ್ಯ. ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ಹೊಸ ಅವಕಾಶಗಳು ಇಂದು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಹೀಗಾಗಿ ತೆರೆದ ಮನಸ್ಸಿನಿಂದ ಈ ಅವಕಾಶಗಳ ಬಗ್ಗೆ ಯೋಚಿಸಿ. ಈ ವಿಚಾರದಲ್ಲಿ ಸಂಗಾತಿ ಕೂಡ ನಿಮಗೆ ನೆರವು ನೀಡಲಿದ್ದಾರೆ. ಸಂಗಾತಿ ಉತ್ತಮ ಸಲಹೆಗಳನ್ನು ನೀಡಲಿದ್ದು, ಗಮನವಿಟ್ಟು ಕೇಳಿಸಿಕೊಳ್ಳಿ.

ಧನುಸ್ಸು(Sagittarius): ಉದ್ಯಮಕ್ಕೆ ಸಂಬಂಧಿಸಿ ಉತ್ತಮ ಸಲಹೆ ಪಡೆಯುತ್ತೀರಿ. ಇಂದು ಸಾಕಷ್ಟು ಲಾಭ ಗಳಿಸುವ ಜೊತೆಗೆ ನಿಮ್ಮ ನೆಚ್ಚಿನ ಜನರೆಲ್ಲರೂ ನಿಮ್ಮೊಂದಿಗೆ ಇರುತ್ತಾರೆ. ಇದರಿಂದ ಈ ದಿನ ನಿಮಗೆ ಹೆಚ್ಚು ಖುಷಿ ಹಾಗೂ ಸಂತಸವನ್ನು ನೀಡಲಿದೆ. ನಿಮ್ಮ ಸಂಗಾತಿ ಜೊತೆಗಿನ ಸಂಬಂಧ ಕೂಡ ಉತ್ತಮವಾಗಿರುತ್ತದೆ. ಇನ್ನೊಬ್ಬರ ಕಷ್ಟಕ್ಕೆ ಇಂದು ನೆರವಾಗುತ್ತೀರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಮಕರ(Capricorn): ದೊಡ್ಡ ಉದ್ಯಮ ಅವಕಾಶವೊಂದು ಇಂದು ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಸರಿಯಾಗಿ ಯೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಿ. ಸಂಗಾತಿಯಿಂದ ಅಗತ್ಯ ನೆರವು ದೊರೆಯಲಿದೆ. ಸಹೋದರರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಅಧಿಕ. ಯಾವುದೇ ಕಾರಣಕ್ಕೂ ಕೋಪದ ಕೈಗೆ ಬುದ್ಧಿ ಕೊಡಬೇಡಿ.

Astrology Tips : ಆರ್ಥಿಕ ಮುಗ್ಗಟ್ಟಿಗೆ ಗಣೇಶನಲ್ಲಿದೆ ಪರಿಹಾರ

ಕುಂಭ(Aquarius): ನಿಮ್ಮ ತಂಡದೊಂದಿಗೆ ಕೆಲಸ ಮಾಡೋದ್ರಿಂದ ನಿಮ್ಮ ಶಕ್ತಿ ಹೆಚ್ಚಲಿದೆ. ನಿಮ್ಮ ವೃತ್ತಿಜೀವನ ಇಂದು ಸಕಾರಾತ್ಮಕವಾಗಿರಲಿದೆ. ನಿಮಗೆ ಇಂದು ಮಾಡಲು ಸಾಕಷ್ಟು ಕೆಲಸ ಬಾಕಿ ಇರುತ್ತದೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕು ಎರಡೂ ಇಂದು ಉತ್ತಮವಾಗಿರುತ್ತದೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯೇ ನಿಮ್ಮ ದೊಡ್ಡ ಶಕ್ತಿ. 

ಮೀನ(Pisces): ಅದೃಷ್ಟ ಇಂದು ನಿಮ್ಮ ಕೈಹಿಡಿದು ಮುನ್ನಡೆಸುತ್ತದೆ. ಉದ್ಯಮ ಉನ್ನತ ಮಟ್ಟವನ್ನು ತಲುಪುವ ಮೂಲಕ ನೆಮ್ಮದಿ ನೀಡುತ್ತದೆ. ಅನುಮಾನಗಳು ತಲೆಯನ್ನು ಹೊಕ್ಕಿ ನೆಮ್ಮದಿ ಕೆಡಿಸುತ್ತವೆ. ಇದೇ ಅನುಮಾನ ಸಂಗಾತಿಯನ್ನು ನಂಬದಂತೆ ಮಾಡುತ್ತದೆ. ಸರಿಯಾಗಿ ಗಮನಿಸದೆ ನಿಮ್ಮ ತಲೆಯಲ್ಲಿರುವ ಯೋಚನೆಗಳು ಹಾಗೂ ಅನುಮಾನಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಬೇಡಿ.

 


 

Latest Videos
Follow Us:
Download App:
  • android
  • ios