Asianet Suvarna News Asianet Suvarna News

Daily Horoscope: ವೃಷಭಕ್ಕೆ ಕಾಡುವ ಭಯ, ತುಲಾ ರಾಶಿಗೆ ಹೆಚ್ಚುವ ನಷ್ಟ

2 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ಆಸ್ತಿ ಖರೀದಿ ಯೋಗ

Daily horoscope of March 2nd 2022 in Kannada SKR
Author
Bangalore, First Published Mar 2, 2022, 5:06 AM IST | Last Updated Mar 2, 2022, 8:13 AM IST

ಮೇಷ(Aries): ವಸ್ತು, ವಾಹನ, ಆಸ್ತಿ ಖರೀದಿ ಯೋಗವಿದೆ. ವೃತ್ತಿ ಕೌಶಲ್ಯದಿಂದ ಅಸಾಧ್ಯವಾದುದನ್ನೂ ಸಾಧಿಸಿ ಸೈ ಎನಿಸಿಕೊಳ್ಳುವಿರಿ. ವಾಹನಗಳ ವೇಗದ ಚಾಲನೆ ಬೇಡವೇ ಬೇಡ. ಅತಿಯಾದ ಆತ್ಮವಿಶ್ವಾಸ ಯಾವುದಕ್ಕೂ ಒಳ್ಳೆಯದಲ್ಲ. ಮಕ್ಕಳಿಗೆ ನಿಮ್ಮಿಂದ ನೆರವು ಸಿಗುವುದು. ಗಣಪತಿ ಸ್ಮರಣೆ ಮಾಡಿ. 

ವೃಷಭ(Taurus): ಕೆಲಸದ ವಿಷಯದಲ್ಲಿ ಅಂಜಿಕೆಯೊಂದು ಕಾಡಬಹುದು. ಹೆದರಿಕೊಂಡು ಕುಳಿತರೆ ಏನೂ ಪ್ರಯೋಜನವಿಲ್ಲ. ಕೈಗೊಂಡ ಕಾರ್ಯಗಳಿಗೆ ಅಡೆ ತಡೆ ಉಂಟಾಗಬಹುದು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ನಡೆದುಕೊಳ್ಳಿ. ರಾಮ ಧ್ಯಾನ ಮಾಡಿ. 

ಮಿಥುನ(Gemini): ಬುದ್ಧಿಕೌಶಲದಿಂದ ಉದ್ಯೋಗದಲ್ಲಿ ಭಡ್ತಿ ದೊರೆಯುವುದು. ಸರ್ಕಾರಿ ನೌಕರರ ತೊಂದರೆಗಳು ನಿವಾರಣೆಯಾಗುವುವು. ಇಂದು ನೀವು ತೆಗೆದುಕೊಳ್ಳುವ ಮಹತ್ತರ ನಿರ್ಧಾರ ಮುಂದಿನ ಬದುಕಿನ ಗತಿ ಬದಲಿಸಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಗಣಪತಿಗೆ ದರ್ಬೆ ಅರ್ಪಿಸಿ.

ಕಟಕ(Cancer): ಉದಾಸೀನವಾಗಿ ದಿನ ಕಳೆಯುವಿರಿ. ಯಾವುದರಲ್ಲೂ ಏಕಾಗ್ರತೆ ನಿಲ್ಲುವುದಿಲ್ಲ. ಸುಸ್ತು ಆವರಿಸಬಹುದು. ಉದ್ಯೋಗದಲ್ಲಿ ಬಹಳ ಕಷ್ಟದಿಂದ ಜವಾಬ್ದಾರಿಗಳನ್ನು ನಿಭಾಯಿಸುವಿರಿ. ನಿಮ್ಮ ಆಸೆಗಳು ದುರಾಸೆಯಾಗಿ ಬದಲಾಗುವ ಮುಂಚೆ ಒಂದಿಷ್ಟು ಮಿತಿಗಳನ್ನು ಹಾಕಿಕೊಳ್ಳಿ. ರಾಮ ಧ್ಯಾನ ಮಾಡಿ.

ಸಿಂಹ(Leo): ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡಿದಂತೆನಿಸಬಹುದು. ಮಕ್ಕಳ ಆರೋಗ್ಯ ಚೇತರಿಕೆಯಿಂದ ಸಮಾಧಾನವಾಗುವುದು. ಯಾವ ಉದ್ದೇಶದ ಮಾತುಕತೆಯಲ್ಲಿ ತೊಡಗಿದ್ದೀರೋ ಅದು ಮುಂದಿನ ಹಂತಕ್ಕೆ ತಲುಪುತ್ತದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕನ್ಯಾ(Virgo): ಮುಂದೆಯೇ ಸಾಗದೆ  ನಿಂತಿದ್ದ ಸರ್ಕಾರಿ ಕೆಲಸಗಳು ಇಂದು ಕೊಂಚ ಮುಂದೋಡುವುದು. ಮನೆ ಹಿರಿಯರ ಆರೋಗ್ಯದಲ್ಲಿ ಏರುಪೇರಾಗಬಹುದು. ಮನೆಯಲ್ಲಿ ಮುನಿಸು, ಜಗಳ ಹೆಚ್ಚಿ ಮನಸ್ಸಿನ ಶಾಂತಿ ಕಸಿಯಬಹುದು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ತುಲಾ(Libra): ಶೇರು ವ್ಯವಹಾರಗಳಲ್ಲಿ ನಷ್ಟ ಹೆಚ್ಚುವುದು. ಕುಟುಂಬ ಸದಸ್ಯರ ಮೇಲೆ ವೃಥಾ ಅನುಮಾನ ಮಾಡಿ ಮತ್ತೊಂದು ಸಮಸ್ಯೆ ಮೈ ಮೇಲೆ ಎಳೆದುಕೊಳ್ಳಬೇಡಿ. ದ್ವೇಷಿಸುವವರ ಕಾಟ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ವಿವಿಧ ಮೂಲಗಳಿಂದ ಹಣಕಾಸು ಬರಲಿದೆ. ಚಟಗಳಿಂದಾಗಿ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಈ ಚಟಗಳು ವೈಯಕ್ತಿಕ ಬದುಕನ್ನೂ ಹಾಳು ಮಾಡುತ್ತಿವೆ. ಮೊದಲು ಅದರಿಂದ ಹೊರ ಬರಲು ಪ್ರಯತ್ನಿಸಿ.  ಗಣಪತಿ ಸ್ಮರಣೆ ಮಾಡಿ. 

Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!

ಧನುಸ್ಸು(Sagittarius): ಮಕ್ಕಳು ಮಾಡಿಕೊಳ್ಳುವ ಎಡವಟ್ಟುಗಳು ಮನಸ್ಸಿಗೆ ಆಘಾತ ಕೊಡಬಹುದು. ಮಕ್ಕಳನ್ನು ಗದರದೆ ಪ್ರೀತಿಯಿಂದ ಅವರ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಿ. ಮತ್ತೊಬ್ಬರ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗಿ ದ್ವೇಷ ಕಟ್ಟಿ ಕೊಳ್ಳಬೇಡಿ. ಹಸುವಿಗೆ ಆಹಾರ ನೀಡಿ. 

ಮಕರ(Capricorn): ಮಾತಿನ ಮೋಡಿಯಿಂದ ಜನರನ್ನು ಗೆಲ್ಲುತ್ತೀರಿ. ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಕಚೇರಿಯಲ್ಲಿ ಮೆಚ್ಚುಗೆ ಇರಲಿದೆ. ಖರ್ಚು ವೆಚ್ಚ ಹೆಚ್ಚಬಹುದು. ಉದ್ಯೋಗದಲ್ಲಿ ಸಮಯ ಸಾಲದೆ ಒದ್ದಾಡುವಿರಿ. ಶುಭ ಕಾರ್ಯ ಸಂಬಂಧಿ ಕೆಲಸಕ್ಕಾಗಿ ಓಡಾಡುವಿರಿ. ದತ್ತಾತ್ರೇಯ ಸ್ಮರಣೆ ಮಾಡಿ. 

ಕುಂಭ(Aquarius): ಮಾತೇ ಮುತ್ತು, ಮಾತೇ ಮೃತ್ಯು ಎಂಬುದನ್ನು ನೆನಪಲ್ಲಿಡಿ. ಮಾತನಾಡುವಾಗ ಹೆಚ್ಚು ಜಾಗ್ರತೆ ವಹಿಸಿ. ಸಾಮಾಜಿಕವಾಗಿ ಗೌರವಾದರಗಳು ಹೆಚ್ಚಲಿವೆ. ಪರೋಪಕಾರ ಬುದ್ಧಿಯಿಂದ ಜನ ಮೆಚ್ಚುಗೆ ಗಳಿಸುವಿರಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

Maha Shivratri 2022: ಶಿವ ರಾತ್ರಿಯ ಸಂಭ್ರಮ ಸಡಗರದಲ್ಲಿ ಮಿಂದೆದ್ದ ಭಕ್ತರು

ಮೀನ(Pisces): ಪೋಷಕರ ಆರೋಗ್ಯ ಸಮಸ್ಯೆಗಳು ಮನಸ್ಸನ್ನು ಕದಡಬಹುದು. ಚಿಕಿತ್ಸೆಗಾಗಿ ಅಪಾರ ಧನವ್ಯಯವಾಗಬಹುದು. ಕೋರ್ಟ್ ವಿಚಾರಗಳು ವಿಳಂಬವಾಗಲಿವೆ. ಹಳೆಯ ಹರಕೆಗಳನ್ನು ಮುಂದೆ ಹಾಕುತ್ತಾ ಹೋಗುವುದರಿಂದ ಸಮಸ್ಯೆಗಳಾಗಬಹುದು. ಮೊದಲು ಅವನ್ನು ಈಡೇರಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios