Daily Horoscope: ಮಿಥುನ ರಾಶಿಗಿಂದು ಮನಸ್ಸಿಗೆ ಕಸಿವಿಸಿ, ಕನ್ಯಾ ರಾಶಿಗೆ ಧನನಷ್ಟ

22 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಅವಕಾಶ, ಪ್ರಗತಿ. ಸಿಂಹಕ್ಕೆ ಮಿಶ್ರಫಲ

Daily horoscope of December 22nd 2021 in Kannada SKR

ಮೇಷ(Aries): ಯಾವುದೋ ಭಯ ನಿಮ್ಮನ್ನು ಕಾಡಬಹುದು. ಅದರಿಂದ ಹೊರ ಬರದೆ ನೆಮ್ಮದಿ ಇರದು. ಮಧ್ಯಾಹ್ನದ ನಂತರ ಮನಸ್ಸು ನಿರಾಳವಾಗುವುದು. ಉದ್ಯೋಗದಲ್ಲಿ ಸಾಮಾನ್ಯ ದಿನ. ವ್ಯಾಪಾರದಲ್ಲಿ ವಂಚನೆ ಸಾಧ್ಯತೆ. ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ. 

ವೃಷಭ(Taurus): ಹೆಚ್ಚಲಿರುವ ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಪ್ರಶಂಸೆ. ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗುವುವು. ಪ್ರವಾಸದ ಯೋಜನೆಗಳಲ್ಲಿ ತೊಡಗಿ ಮನೋಲ್ಲಾಸ ಹೆಚ್ಚುವುದು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮಿಥುನ(Gemini): ಆಪ್ತರೆನಿಸಿಕೊಂಡವರ ಹೊಟ್ಟೆಕಿಚ್ಚಿನ ಬುದ್ಧಿಯಿಂದ ಮನಸ್ಸು ಹಾಳಾಗುವುದು. ಸ್ನೇಹಿತರಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ. ಶೇರು ವ್ಯವಹಾರಗಳಲ್ಲಿ ನಷ್ಟ. ಮನೆಯಲ್ಲಿ ಸಂಗಾತಿಯೊಂದಿಗೆ ಮುಸುಕಿನ ಮುನಿಸು. ಹೆತ್ತವರ ಸಹಕಾರದಿಂದ ಕೊಂಚ ನೆಮ್ಮದಿ. ಪಕ್ಷಿಗಳಿಗೆ ಕಾಳು ಹಾಕಿ. 

ಕಟಕ(Cancer): ಒಳ್ಳೆಯ ಸುದ್ದಿಯೊಂದು ಕಿವಿಗೆ ಬಿದ್ದು ಇಡೀ ದಿನ ಪ್ರಫುಲ್ಲರಾಗಿ ಇರುವಿರಿ. ಬಹು ಕಾಲದ ಕನಸೊಂದು ಸುಲಭವಾಗಿ ಈಡೇರುವುದು. ವಿಮಾನ ಯಾನ ಸಾಧ್ಯತೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಪ್ರವಾಸದಿಂದ ಹೆಚ್ಚುವ ಚೈತನ್ಯ. ಗಣಪತಿಗೆ ಕಡಲೆ ಬೆಲ್ಲ ಅರ್ಪಿಸಿ. 

Astro Remedies For Pitra Dosh: ಪಿತೃದೋಷವಿದ್ದರೆ ಹೀಗ್ ಮಾಡಿ ಪರಿಹಾರ ಕಂಡ್ಕೊಳ್ಳಿ..

ಸಿಂಹ(Leo): ಉದ್ಯೋಗದಲ್ಲಿ ಕೊಂಚ ಬಿಡುವು ದೊರೆತು ಸಹೋದ್ಯೋಗಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಹತ್ತಿರದವರ ಆರೋಗ್ಯ ಏರುಪೇರಿನಿಂದ ಆತಂಕ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ. ವ್ಯಾಪಾರಿಗಳಿಗೆ ಲಾಭ, ವಿವಾಹ ಸಂಬಂಧ ಮಾತುಕತೆಗಳು ಮುಂದುವರಿಯುವುವು. ಶಿವಶಕ್ತಿ ಪ್ರಾರ್ಥನೆ ಮಾಡಿ. 

ಕನ್ಯಾ(Virgo): ವಾಹನ ಬಿಡಿ ಭಾಗಗಳ ವ್ಯಾಪಾರ, ಲೋಹದ ವ್ಯಾಪಾರ, ವಸ್ತ್ರ, ವಾಹನ ವ್ಯಾಪಾರದಲ್ಲಿ ನಷ್ಟ.  ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ. ವಾತ, ಕಫ ಸಂಬಂಧಿ ಸಮಸ್ಯೆಗಳು ಹೆಚ್ಚುವುವು. ಬೃಹಸ್ಪತಿಯನ್ನು ಸ್ಮರಿಸಿಕೊಳ್ಳಿ. 

ತುಲಾ(Libra): ಸುಮ್ಮನೆ ಕನಸು ಕಾಣುತ್ತಾ ಕಾಲಹರಣ ಮಾಡುವಿರಿ. ಸ್ನೇಹಿತರ ವಲಯದಲ್ಲಿ ಅಪವಾದಕ್ಕೆ ಗುರಿಯಾಗುವಿರಿ. ಕೋರ್ಟ್ ವ್ಯವಹಾರಗಳಲ್ಲಿ ಹಿನ್ನಡೆ. ಆಪ್ತರೊಂದಿಗೆ ಮಾತಿಗೆ ಮಾತು ಬೆಳೆದೀತು. ಪ್ರೇಮ ವ್ಯವಹಾರಗಳಲ್ಲಿ ಮುನಿಸು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Ways To Please Saturn : ಕೋಪಗೊಂಡ ಶನಿ ದೇವರನ್ನು ಒಲಿಸಿಕೊಳ್ಳುವ ದಾರಿ ಇಲ್ಲಿದೆ..

ವೃಶ್ಚಿಕ(Scorpio): ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲವಲ್ಲ. ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದೆ. ಕೌಟುಂಬಿಕವಾಗಿ ಕಿರಿಕಿರಿಗಳು ತಪ್ಪಲಾರವು. ಹೆತ್ತವರ ಅನಾರೋಗ್ಯದಿಂದ ಮನಸ್ಸಿನ ನೆಮ್ಮದಿ ಕೆಡಲಿದೆ. ಕೇವಲ ಒಳ್ಳೆಯ ವಿಷಯ ಗ್ರಹಿಸಲು ಪ್ರಯತ್ನಿಸಿ. ಗಣೇಶ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ನಾನಾ ಕಡೆಗಳಿಂದ, ನಾನಾ ರೀತಿಯಲ್ಲಿ ಖರ್ಚು ವೆಚ್ಚ ಕಂಡುಬರುವುದು. ಹೆತ್ತವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. 

ಮಕರ(Capricorn): ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ಕೇಳಿ ಬರುವುದು. ಸೃಜನಶೀಲ ಕೆಲಸಗಳಲ್ಲಿ ಧನಲಾಭ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಇಡೀ ದಿನ ಹೈರಾಣಾಗಿಸಲಿವೆ. ವಿಶ್ರಾಂತಿ ಅಗತ್ಯ. ಗಾಯತ್ರಿ ಜಪ ಮಾಡಿ. 

ಕುಂಭ(Aquarius): ನಿಮ್ಮ ಪ್ರೀತಿಪಾತ್ರರ ನಡವಳಿಕೆ ಅನಿರೀಕ್ಷಿತವಾಗಿದ್ದು, ಬೇಸರ ಮೂಡಿಸಲಿದೆ. ಮನೆ ಸದಸ್ಯರ ಜಗಳಗಳಿಂದ ಕಂಗಾಲಾಗುವಿರಿ. ಧೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಹಾಗೂ ಆರೈಕೆಯ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಧನ್ವಂತರಿ ಸ್ಮರಣೆ ಮಾಡಿ. 

ಮೀನ(Pisces): ವೃತ್ತಿರಂಗದಲ್ಲಿ ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಂಡು ಮುನ್ನಡೆಯುವುದರಿಂದ ಯಶಸ್ಸಿನತ್ತ ನಡೆಯಿರಿ. ಕುಟುಂಬ ವರ್ಗದಲ್ಲಿ ವಿಚಾರ ವಿನಿಮಯದಿಂದ ಕಾರ್ಯಸಿದ್ದಿ. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ.

Latest Videos
Follow Us:
Download App:
  • android
  • ios