Daily Horoscope: ಈ ರಾಶಿಯ ನಿರುದ್ಯೋಗಿಗಳಿಗಿಂದು ತೆರೆಯಲಿದೆ ಭಾಗ್ಯದ ಬಾಗಿಲು

20 ಏಪ್ರಿಲ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಹೆಚ್ಚುವ ಕೊರಗು

Daily horoscope of April 20th 2022 in Kannada SKR

ಮೇಷ(Aries): ಯಾರೋ ಅಪರಿಚಿತರೊಂದಿಗೆ ವಾಗ್ವಾದವಾಗಿ ಮನಸ್ಸು ಹದಗೆಡಬಹುದು. ಕೋಪ ನಿಯಂತ್ರಿಸಿಕೊಳ್ಳಿ. ಯಾವುದೋ ವಸ್ತು ಹಾನಿಯಿಂದಾಗಿ ಧನನಷ್ಟ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇರುವೆಗಳಿಗೆ ಸಿಹಿ ತಿನ್ನಿಸಿ. 

ವೃಷಭ(Taurus): ಎಷ್ಟೇ ಕೆಲಸ ಮಾಡಿದರೂ ತಕ್ಕ ಫಲ ಸಿಗುತ್ತಿಲ್ಲ ಎನಿಸಬಹುದು. ಭರವಸೆ ಕಳೆದುಕೊಳ್ಳಬೇಡಿ.  ಮಕ್ಕಳೊಂದಿಗೆ ಸಮಯ ಕಳೆಯಿರಿ. ಆರೋಗ್ಯ ಕಿರಿಕಿರಿ ಹೈರಾಣಾಗಿಸುವುದು. ಪೋಷಕಾಂಶಗಳನ್ನು ಡಯಟ್‌ನಲ್ಲಿ ಹೆಚ್ಚು ಸೇರಿಸಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮಿಥುನ(Gemini):  ನಾಯಕತ್ವ ಕಾರ್ಯಗಳನ್ನು ಚೆನ್ನಾಗಿ ನಿಭಾಯಿಸಲಿರುವಿರಿ. ಹಠಮಾರಿ ಸ್ವಭಾವದಿಂದ ಮನೆಯವರ ಸಿಟ್ಟಿಗೆ ಕಾರಣವಾಗುವಿರಿ. ಸರ್ಕಾರಿ ನೌಕರರಿಗೆ ಹೆಚ್ಚಿನ ಜವಾಬ್ದಾರಿ ಬರಬಹುದು. ಆಪ್ತರ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆ ಆಗಬಹುದು. ಹಸಿರು ಹುಲ್ಲನ್ನು ಹಸುವಿಗೆ ತಿನ್ನಿಸಿ. 

ಕಟಕ(Cancer): ಕಚೇರಿಯಲ್ಲಿ ಕೆಲಸ ವಿಪರೀತವಾಗಿ ಆಯಾಸವಾಗುವುದು.  ಧನ ಸಮೃದ್ಧಿಯಿಂದ ಸಂತೋಷ. ಸಂತಾನಾಪೇಕ್ಷಿ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಗಣಪತಿ ನಾಮ ಸ್ಮರಣೆ ಮಾಡಿ. 

ಸಿಂಹ(Leo): ಧಾರ್ಮಿಕ ಕೆಲಸಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯದಲ್ಲಿ ಏರುಪೇರಾಗಬಹುದು. ಜೀವನಶೈಲಿ ಉತ್ತಮ ಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ಹವ್ಯಾಸಗಳು ಮನಸ್ಸಿಗೆ ಮುದ ತರಲಿವೆ. ಕಚೇರಿ ಕೆಲಸ ವಿಪರೀತವಿರಲಿದೆ. ಇರುವೆಗೆ ಸಿಹಿ ತಿನ್ನಿಸಿ. 

ಕನ್ಯಾ(Virgo): ಬೇಡದ ವಿಷಯಗಳನ್ನು ತಲೆಗೆ ಹಚ್ಚಿಕೊಂಡು ದಿನವಿಡೀ ಕೊರಗುವಿರಿ. ಆರೋಗ್ಯದ ಕಾಳಜಿ ಅಗತ್ಯ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಎದುರಿಸುವ ಛಲವಿದ್ದವರು ಗೆಲ್ಲುತ್ತಾರೆ, ಹೆದರಿದವರು ಸೋಲುತ್ತಾರೆ ಎಂಬುದನ್ನು ನೆನಪಿಡಿ. ಮನೆ ದೇವರ ಸ್ಮರಣೆ ಮಾಡಿ. 

ತುಲಾ(Libra): ಕಚೇರಿಯಲ್ಲಿ ಕೆಲಸ ವಿಪರೀತವಾಗಿ ಆಯಾಸವಾಗುವುದು. ಖರ್ಚುಗಳು ಅನಿವಾರ್ಯವಾಗಿವೆ. ಇದಕ್ಕಾಗಿ ನೀವು ಹೊಸ ಹೊಸ ಆದಾಯದ ಮೂಲಗಳನ್ನು ಹುಡುಕಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ತಂದೆಯ ಸಹಕಾರ ಸಿಗಲಿದೆ. ವಿನಾಯಕನಿಗೆ ಸಿಹಿ ನೈವೇದ್ಯ ಮಾಡಿ. 

ಹೆಸರು 'S'‌ನಿಂದ ಶುರುವಾದರೆ, ವ್ಯಕ್ತಿತ್ವ ಹೀಗಿರುತ್ತದೆ..

ವೃಶ್ಚಿಕ(Scorpio): ಉದ್ಯೋಗ, ವ್ಯಾಪಾರ, ಉದ್ಯಮ, ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿರುವಿರಿ. ತಂದೆಯ ಬೆಂಬಲದಿಂದ ಆಸ್ತಿವ್ಯಾಜ್ಯಗಳು ಮಾತುಕತೆಯಲ್ಲೇ ಇತ್ಯರ್ಥವಾಗುವುದು. ವೃತ್ತಿಯಲ್ಲಿ ಅನುಕೂಲ, ಹೊಸ ಅವಕಾಶಗಳು ಬರಬಹುದು. ಗಣಪತಿ ಶ್ಲೋಕ ಹೇಳಿಕೊಳ್ಳಿ. 

ಧನುಸ್ಸು(Sagittarius): ಕಠಿಣ ಕಲಿಕೆಯಲ್ಲಿ ತೊಡಗಿ ಮನಸ್ಸು ಸಂತೋಷವಾಗಿರುವುದು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಲಭಿಸುವುದು. ನಿಮ್ಮ ಎಲ್ಲ ಪ್ರಯತ್ನಗಳೂ ಫಲ ಕೊಡಲಿವೆ. ಚೆನ್ನಾಗಿ ಅಭ್ಯಾಸ ಮಾಡಿ. ಕಚೇರಿಯಲ್ಲಿ ನಿಮ್ಮ ಹೊಸ ಆಲೋಚನೆಗಳು ಪ್ರಯೋಜನಕಾರಿಯಾಗಬಹುದು, ಮನೆ ದೇವರಿಗೆ ಪ್ರಾರ್ಥಿಸಿ. 

ಮಕರ(Capricorn): ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೆಚ್ಚುಗೆ ಗಳಿಸುವಿರಿ. ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯುತ್ತವೆ. ಪೋಷಕರ ಬೇಜವಾಬ್ದಾರಿ ವರ್ತನೆ ಕೋಪ ತರಿಸುವುದು. ಅದರಿಂದ ನಿಮಗೆ ನಷ್ಟವಾಗಬಹುದು. ಗುರುಹಿರಿಯರ ಆಶೀರ್ವಾದ ಪಡೆಯಿರಿ. 

ಕುಂಭ(Aquarius): ಕಸದಿಂದಲೂ ರಸ ತೆಗೆಯುವ ನಿಮ್ಮ ಚಾಣಾಕ್ಷತೆಗೆ ಬೆಲೆ ಬರುತ್ತದೆ. ಸಂಬಂಧಗಳ ಮಧ್ಯೆ ಏರ್ಪಟ್ಟಿರುವ ಅಂತರ ಕಡಿಮೆಯಾಗಿ ಸಮಾಧಾನವಾಗುವುದು. ತಾಯಿಯ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

Weekly Horoscope: ಧನಸ್ಸಿಗೆ ಬದಲಾವಣೆಯ ಪರ್ವ, ನಿಮ್ಮ ಪಾಲಿಗೆ ಈ ವಾರ ಹೇಗಿರಲಿದೆ?

ಮೀನ(Pisces): ಹಗಲುಗನಸಿನಲ್ಲಿ ಸಮಯ ಹಾಳು ಮಾಡುವಿರಿ. ಕೆಲಸಗಳು ಮುಂದೆ ಸಾಗದೆ ತೊಂದರೆಯಾಗುವುದು. ಬೈಸಿಕೊಳ್ಳಬೇಕಾಗುವುದು. ತಂದೆಯ ಹಟಮಾರಿತನ ದೊಡ್ಡ ತಲೆನೋವಾಗಬಹುದು. ಬಂದುದೆಲ್ಲ ಬರಲಿ, ಭಗವಂತನ ದಯೆಯೊಂದಿರಲಿ ಎಂದು ಮುಂದುವರಿಯಿರಿ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios