ಮೇಷ - ಕೆಲಸ ಕಾರ್ಯಗಳಲ್ಲಿ ಯಶಸ್ಸು, ನಿಮ್ಮ ಕೆಲಸದಿಂದ ಪರರಿಗೆ ಉಪಯೋಗ, ಮಾನಸಿಕ ಚಿಂತೆಯೂ ಕಾಡಲಿದೆ, ಸ್ವಲ್ಪ ಎಚ್ಚರಿಕೆ ಬೇಕು, ಈಶ್ವರ ಪ್ರಾರ್ಥನೆ -ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಉತ್ಸಾಹಶಕ್ತಿ ಕುಂದಲಿದೆ, ಸ್ತ್ರೀಯರಿಗೆ ಭಯದ ವಾತಾವರಣ, ಮಾನಸಿಕ ಅಸಮಧಾನ, ದುರ್ಗಾ ಪ್ರಾರ್ಥನೆ ಮಾಡಿ                                            

ಮಿಥುನ - ಹಣಕಾಸಿಗೆ ಪರದಾಟ, ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸ, ದುರ್ಗಾ ದೇವಸ್ಥಾನಕ್ಕೆ ಹೋಗಿಬನ್ನಿ.

ಕಟಕ - ಅದೃಷ್ಟ ಹೀನತೆಯ ದಿನ, ಮಂಕಾದ ವಾತಾವರಣ, ರೋಗ ಬಾಧೆ ಹಾಗೂ ಶತ್ರುಬಾಧೆ ಕಾಡಲಿದೆ, ಚಂದ್ರ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

ಸಿಂಹ - ಮಾನಸಿಕವಾಗಿ ಅಧೀರತೆ ಕಾಡಲಿದೆ, ಆತ್ಮಬಲ ವೃದ್ಧಿಗೊಳಿಸಿಕೊಳ್ಳಿ, ಮಕ್ಕಳಿಂದ ಸಹಾಯ, ಶತ್ರುಗಳು ದೂರಾಗುತ್ತಾರೆ, ಶಿವನ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿ ಮಂಕಾಗುತ್ತದೆ, ಹಿರಿಯರ ಮಾರ್ಗದರ್ಶನ ಪಡೆಯಿರಿ, ಸಮಾಧಾನ ಇರಲಿದೆ, ದುರ್ಗಾ ಸಪ್ತಶತಿ ಪಠಿಸಿ

ತುಲಾ - ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ, ಕುಟುಂಬದವರಲ್ಲಿ ಕಲಹ ವಾತಾವರಣ, ಉದ್ಯೋಗದಲ್ಲಿ ಎಚ್ಚರಿಕೆ ಬೇಕು, ಶತ್ರುಬಾಧೆ, ಗೋಧಿದಾನ-ಅಕ್ಕಿದಾನ ಮಾಡಿ

ವೃಶ್ಚಿಕ - ಆತ್ಮವಿಶ್ವಾಸ ಹೆಚ್ಚಲಿದೆ, ಸಹೋದರರ ಸಹಕಾರ, ವಾತಾವರಣ ಮಂಕಾಗಲಿದೆ, ಧರ್ಮಕಾರ್ಯದಲ್ಲಿ ತೊಡಗಿ.

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

ಧನುಸ್ಸು - ಮಾನಸಿಕವಾಗಿ ಕುಗ್ಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರವಿರಲಿ, ನವಗ್ರಹ ಸ್ತೋತ್ರ ಮಾಡಿ

ಮಕರ - ಅಧೈರ್ಯ, ಅಂಜಿಕೆ ಉಂಟಾಗಲಿದೆ, ಸುಖಕ್ಕೆ ಕತ್ತರಿ ಬೀಳಲಿದೆ, ಸಮಾಧಾನ ಸಿದ್ಧಿಗೆ ದುರ್ಗಾ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ನೀರಿನಿಂದ ಆರೋಗ್ಯ ಹಾಳಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಸಂಜೀವಿನಿ ಯಂತ್ರ ಧಾರಣೆ ಮಾಡಿ

ಮೀನ - ತುಂಬ ಎಚ್ಚರಿಕೆಯಿಂದ ಇರಬೇಕಾದ ದಿನ, ತಂದೆ-ಮಕ್ಕಳಲ್ಲಿ ವೈಮನಸ್ಸು ಮೂಡಲಿದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ