Daily Horoscope June 11 2026 ಜೂನ್ 11, 2026 ರ ದಿನ ಭವಿಷ್ಯ ಇಲ್ಲಿದೆ. ಇಂದು ಯಾವ ವ್ರತವಿದೆ? ಯಾವ ಗ್ರಹವು ರಾಶಿ ಬದಲಿಸಲಿದೆ? ಯಾವೆಲ್ಲಾ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳಲಿವೆ? ಇಲ್ಲಿದೆ ಮಾಹಿತಿ.

ಮೇಷ ರಾಶಿ ಭವಿಷ್ಯ ಜೂನ್ 11, 2026

ನೀವು ಸಾಮಾಜಿಕವಾಗಿ ಹೆಚ್ಚು ಆಕ್ಟಿವ್ ಆಗಿರ್ತೀರಿ. ನಿಮ್ಮ ಅನುಭವ ಮತ್ತು ಸಲಹೆಗಳಿಂದ ಜನರಿಗೆ ಲಾಭವಾಗಲಿದೆ. ಕೆಲಸದ ಹೊರೆ ಸ್ವಲ್ಪ ಕಡಿಮೆಯಾಗಿ ನಿಮಗೆ ರಿಲ್ಯಾಕ್ಸ್ ಅನಿಸಲಿದೆ. ಮುಖ್ಯ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಗುರಿಗಳ ಮೇಲೆ ಗಮನ ಇರಲಿ. ಆರೋಗ್ಯ ಚೆನ್ನಾಗಿರುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ ರಾಶಿ ಭವಿಷ್ಯ ಜೂನ್ 11, 2026

ಹಳೆಯ ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಸದ್ಯಕ್ಕೆ ದೂರದ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಷಯಗಳು ನಿಮ್ಮನ್ನು ಕಾಡಬಹುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಹೆಚ್ಚು ತೊಡಗುವುದಿಲ್ಲ.

ಮಿಥುನ ರಾಶಿ ಭವಿಷ್ಯ ಜೂನ್ 11, 2026

ದಿನದ ಆರಂಭ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಸಹಕಾರ ಮತ್ತು ಸಲಹೆ ನಿಮಗೆ ಲಾಭ ತಂದುಕೊಡಲಿದೆ. ಮಕ್ಕಳ ಜೊತೆ ಸಮಯ ಕಳೆದು ಖುಷಿಪಡುತ್ತೀರಿ. ಬ್ಯುಸಿನೆಸ್‌ನಲ್ಲಿ ಹೊಸ ತಂತ್ರಜ್ಞಾನ ಮತ್ತು ಆಧುನಿಕ ವಿಧಾನಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದು.

ಕರ್ಕಾಟಕ ರಾಶಿ ಭವಿಷ್ಯ ಜೂನ್ 11, 2026

ಹೊಸ ಕೆಲಸ ಹುಡುಕುತ್ತಿರುವವರಿಗೆ ಇಷ್ಟವಾದ ಉದ್ಯೋಗ ಸಿಗಬಹುದು. ಒಂದೇ ಬಾರಿಗೆ ಹಲವು ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ, ಇಲ್ಲದಿದ್ದರೆ ಕಷ್ಟವಾಗಬಹುದು. ನೀವು ನಿಮ್ಮ ಕೆಲಸಗಳನ್ನು ಯೋಚಿಸಿ ಪೂರ್ಣಗೊಳಿಸುತ್ತೀರಿ. ಜನರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಾರೆ ಮತ್ತು ನೀವು ಅವರಿಗೆ ಸಹಾಯ ಮಾಡುತ್ತೀರಿ.

ಸಿಂಹ ರಾಶಿ ಭವಿಷ್ಯ ಜೂನ್ 11, 2026 

ಮೈಗ್ರೇನ್ ಅಥವಾ ತಲೆನೋವಿನ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳ ಮೇಲೆ ಸುಖಾಸುಮ್ಮನೆ ಕೋಪಗೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಕಷ್ಟವಾಗಬಹುದು. ಸಣ್ಣಪುಟ್ಟ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ರಾಜಕೀಯ ಕ್ಷೇತ್ರದವರು ಜಾಗರೂಕರಾಗಿರಬೇಕು.

ಕನ್ಯಾ ರಾಶಿ ಭವಿಷ್ಯ ಜೂನ್ 11, 2026

ಮುಖಸ್ತುತಿ ಮಾಡುವ ಜನರಿಂದ ಅಂತರ ಕಾಯ್ದುಕೊಳ್ಳಿ. ಸ್ನೇಹಿತರೊಂದಿಗೆ ಮನರಂಜನೆಗಾಗಿ ಕಾರ್ಯಕ್ರಮ ರೂಪಿಸಬಹುದು. ಅನಿರೀಕ್ಷಿತವಾಗಿ ಹಣದ ಲಾಭವಾಗುವ ಸೂಚನೆಗಳಿವೆ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಕಾಡಬಹುದು. ಕೆಲವರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು, ಆದ್ದರಿಂದ ಎಚ್ಚರದಿಂದಿರಿ.

ತುಲಾ ರಾಶಿ ಭವಿಷ್ಯ ಜೂನ್ 11, 2026 

ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಪ್ರಭಾವಿ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ಗಟ್ಟಿಯಾಗಬಹುದು. ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ವ್ಯಾಪಾರ ವಿಸ್ತರಣೆಗೆ ಸಮಯ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬಹುದು.

ವೃಶ್ಚಿಕ ರಾಶಿ ಭವಿಷ್ಯ ಜೂನ್ 11, 2026 

ಕೆಲಸದಲ್ಲಿ ನಿಮ್ಮ ಅಧಿಕಾರಿಗಳು ಯಾವುದೋ ವಿಷಯಕ್ಕೆ ನಿಮ್ಮ ಮೇಲೆ ಕೋಪಗೊಳ್ಳಬಹುದು. ಹಳೆಯ ಅನುಭವಗಳು ನಿಮಗೆ ಉಪಯೋಗಕ್ಕೆ ಬರುತ್ತವೆ. ನಿಮ್ಮ ನಡವಳಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಿ. ನಿಮ್ಮ ಕೆಲಸಗಳ ಬಗ್ಗೆ ಎಲ್ಲರ ಬಳಿಯೂ ಅಭಿಪ್ರಾಯ ಕೇಳುವುದು ಸರಿಯಲ್ಲ. ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಬಹುದು.

ಧನು ರಾಶಿ ಭವಿಷ್ಯ ಜೂನ್ 11, 2026

ದೊಡ್ಡ ಕಂಪನಿಯಿಂದ ಉದ್ಯೋಗದ ಅವಕಾಶ ಸಿಗಬಹುದು. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಆರೋಗ್ಯವೂ ಮೊದಲಿಗಿಂತ ಉತ್ತಮವಾಗಿರುತ್ತದೆ.

ಮಕರ ರಾಶಿ ಭವಿಷ್ಯ ಜೂನ್ 11, 2026 

ನಿಮ್ಮ ಹಠಮಾರಿ ಸ್ವಭಾವದಿಂದಾಗಿ ಜನರು ನಿಮ್ಮಿಂದ ದೂರ ಉಳಿಯಬಹುದು. ಯಾವುದೇ ರೀತಿಯ ವ್ಯಸನದಿಂದ ದೂರವಿರುವುದು ನಿಮಗೆ ಒಳ್ಳೆಯದು. ಹಣಕಾಸಿನ ವಿಷಯಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಮನೆಯ ವಾತಾವರಣದಲ್ಲಿ ಮನಸ್ಸು ಹೆಚ್ಚು ಕಾಲ ಉಳಿಯುವುದಿಲ್ಲ. ಮಕ್ಕಳ ಮೇಲೆ ನಿಗಾ ಇರಲಿ.

ಕುಂಭ ರಾಶಿ ಭವಿಷ್ಯ ಜೂನ್ 11, 2026

ಇಂದು ನಿಮಗೆ ಒಂದು ಸಿಹಿ ಸುದ್ದಿ ಸಿಗಬಹುದು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡುವ ಯೋಗವಿದೆ. ನಿಮ್ಮ ಉತ್ತಮ ಕೆಲಸಗಳನ್ನು ಎಲ್ಲರೂ ಹೊಗಳುತ್ತಾರೆ. ಸಕಾರಾತ್ಮಕ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಮೀನ ರಾಶಿ ಭವಿಷ್ಯ ಜೂನ್ 11, 2026

ಶೇರು ಮಾರುಕಟ್ಟೆ ಅಥವಾ ರಿಸ್ಕ್ ಇರುವ ಹೂಡಿಕೆಗಳಲ್ಲಿ ಜಾಗರೂಕರಾಗಿರಿ. ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟುಹೋಗಬಹುದು. ಮಕ್ಕಳ ಭವಿಷ್ಯ ಮತ್ತು ವೃತ್ತಿಜೀವನದ ಬಗ್ಗೆ ಚಿಂತೆ ಕಾಡಬಹುದು. ಮನೆಯ ಜವಾಬ್ದಾರಿಗಳಲ್ಲಿ ಹೆಚ್ಚು ನಿರತರಾಗಿರುತ್ತೀರಿ. ಸುಳ್ಳು ಹೇಳುವುದರಿಂದ ನಿಮ್ಮ ಇಮೇಜ್ ಹಾಳಾಗಬಹುದು.