Asianet Suvarna News Asianet Suvarna News

Assault on Kirik Keerthi: ನಶೆಯಲ್ಲಿ ಫೋಟೋ ಕ್ಲಿಕ್‌: ಕಿರಿಕ್‌ ಕೀರ್ತಿ ಮೇಲೆ ಬಿಯರ್‌ ಬಾಟಲಿಂದ ಹಲ್ಲೆ

*  ಬೆಂಗಳೂರಿನ ಹ್ಯಾಮರ್ಡ್‌ ಪಬ್‌ನಲ್ಲಿ ನಡೆದ ಘಟನೆ
*  ಪಬ್‌ನಲ್ಲಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದ ಕೀರ್ತಿ ಹಾಗೂ ನಾಲ್ಕೈದು ಸ್ನೇಹಿತರು
*  ಕಿರಿಕ್‌ ಕೀರ್ತಿ ಮೇಲೆ ಹಲ್ಲೆ ನಡೆಸಿ ಪಬ್‌ನಿಂದ ಪರಾರಿಯಾದ ಯುವಕರು
 

Youths Assault on Kirik Keerthi at Pub in Bengaluru grg
Author
Bengaluru, First Published Dec 4, 2021, 8:03 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.04):  ಪಬ್‌ವೊಂದರಲ್ಲಿ(Pub) ಪಾರ್ಟಿ ಮಾಡುವಾಗ ಫೋಟೋ ಕ್ಲಿಕ್ಕಿಸಿದ ವಿಚಾರಕ್ಕೆ ನಡೆದ ಜಗಳದ ವೇಳೆ ಯುವಕರ ಗುಂಪೊಂದು ಬಿಗ್‌ ಬಾಸ್‌(Bigboss) ರಿಯಾಲಿಟಿ ಶೋ ಸ್ಪರ್ಧಿ 'ಕಿರಿಕ್‌' ಕೀರ್ತಿ(Kirik Keerthi) ಅಲಿಯಾಸ್‌ ಕೀರ್ತಿ ಶಂಕರಘಟ್ಟ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆಗೈದಿರುವ ಘಟನೆ ನಡೆದಿದೆ.  ಸದಾಶಿವನಗರ ಠಾಣೆ ವ್ಯಾಪ್ತಿಯ ಹ್ಯಾಮರ್ಡ್‌ ಪಬ್‌ನಲ್ಲಿ(Hammer Pub) ಗುರುವಾರ ತಡರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಕೀರ್ತಿಯ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ(Treatment) ಪಡೆದಿದ್ದಾರೆ. ಹಲ್ಲೆ ಸಂಬಂಧ ಕೀರ್ತಿ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಸಾರದ ಸರಿಗಮದಲ್ಲಿ ಸಪ್ತವರ್ಷ ದಾಟಿದ ‘ಕಿರಿಕ್’ಜೋಡಿ!

ಕೀರ್ತಿ ಹಾಗೂ ನಾಲ್ಕೈದು ಸ್ನೇಹಿತರು ಹ್ಯಾಮರ್ಡ್‌ ಪಬ್‌ನಲ್ಲಿ ತಡರಾತ್ರಿ ಪಾರ್ಟಿ(Party) ಮಾಡುತ್ತಿದ್ದರು. ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಐದಾರು ಮಂದಿ ಅಪರಿಚಿತ ಯುವಕರ ಪೈಕಿ ಓರ್ವ ಮೊಬೈಲ್‌ ಫೋನ್‌ನಲ್ಲಿ ಕೀರ್ತಿ ಅವರ ಫೋಟೋ(Photo) ಕ್ಲಿಕ್ಕಿಸಲು ಮುಂದಾಗಿದ್ದಾನೆ. ಈ ವೇಳೆ ಕೀರ್ತಿ ಆ ಯುವಕನನ್ನ ಪ್ರಶ್ನಿಸಿದ್ದಾರೆ. ಇದರಿಂದ ಕೀರ್ತಿ ಹಾಗೂ ಆ ಯುವಕ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕನೊಬ್ಬ ಬಿಯರ್‌ ಬಾಟಲಿಯಿಂದ ಕೀರ್ತಿ ಅವರ ತಲೆಗೆ ಹೊಡೆದಿದ್ದಾನೆ. ಘಟನೆ ಬಳಿಕ ಹಲ್ಲೆ(Assault) ಮಾಡಿದ ಯುವಕ ಹಾಗೂ ಆತನ ಸಹಚರರು ಪಬ್‌ನಿಂದ ಪರಾರಿಯಾಗಿದ್ದಾರೆ. 

ಯಾರು ಈ ಕಿರಿಕ್ ಕೀರ್ತಿ? 
ಮೂಲತಃ ಶಂಕರಘಟ್ಟದವರಾದ ಕೀರ್ತಿಯವರು ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ (Shivamogga Sahyadri College) ವಿದ್ಯಾರ್ಥಿ. ಮೊದಲಿಂದಲೂ ತಮ್ಮದೇ ಆದ ವಿಶೇಷ ಸೃಜನಶೀಲತೆ ಹೊಂದಿದ್ದ ಈ ಕನ್ನಡದ ಪ್ರತಿಭೆ (Kannada Talent) ಕೆಲಸ ಅರಸಿ ಬೆಂಗಳೂರು ಸೇರಿದರು. ಕನ್ನಡ ಪರ ಚಳುವಳಿ ಮೂಲಕ, ಕನ್ನಡ ವಿರೋಧಿಗಳ ನಿದ್ರೆಗೆಡಿಸಿದವರು. ಕನ್ನಡ ರಾಜ್ಯೋತ್ಸವದ ದಿನದಂದು ಉದ್ಯೋಗಿಗಳಿಗೆ ರಜೆ ಕೊಡದ Multinational Companyಗಳ ವಿರುದ್ಧ ಸಮರ ಸಾರುವ ಮೂಲಕ ಕನ್ನಡಿಗರ ಹೃದಯ ಗೆದ್ದವರು. ಬೆಂಗಳೂರಲ್ಲಿಯೇ ಇದ್ದು, ಬೆಂಗಳೂರು ಇಷ್ಟವಿಲ್ಲವೆನ್ನುವ ಅನ್ಯ ಭಾಷಿಗರಿಗೆ ಕನ್ನಡ ಭಾಷೆಯ ಮೌಲ್ಯ, ಇತಿಹಾಸ ಹಾಗೂ ಸಂಸ್ಕೃತಿ ಬಗ್ಗೆ ತಮ್ಮದೇ ಶೈಲಿಯಲ್ಲಿ ಅರಿವು ಮೂಡಿಸಿದವರು. ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿರುವ ಕೀರ್ತಿ, ಅನೇಕ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮನೆ ಮಾತಾದವರು. ನಂತರ ನಮ್ಮದೇ ಆದ ಸುದ್ದಿ ವೆಬ್‌ಸೈಟ್ ಆರಂಭಿಸಿ, ಅಲ್ಲಿಯೂ ತಮ್ಮ ಪ್ರತಿಭೆ ಏನೆಂದು ತೋರಿಸಿಕೊಡುವಲ್ಲಿ ಯಶಸ್ವಿಯಾದರು. 

ಹೆಸರು ತಂದು ಕೊಟ್ಟಿದ್ದು ಬಿಗ್‌ಬಾಸ್ (Kannada Bigg Boss):
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ (Reality Show) ಬಿಗ್‌ ಸೀಸನ್ (Season-4)ರಲ್ಲಿ ಪಾಲ್ಗೊಳ್ಳುವ ಮೂಲಕ ಕೀರ್ತಿಯ ಪ್ರಸಿದ್ಧಿ ಮತ್ತಷ್ಟು ಹೆಚ್ಚಾಯಿತು. ಪ್ರತಿಷ್ಠಿತರ ಜೊತೆ ಈ ಶೋನಲ್ಲಿ ಪಾಲ್ಗೊಂಡ ಕೀರ್ತಿ, ಪ್ರಶಸ್ತಿ ಗೆಲ್ಲುವಂತೆ ಆಟವನ್ನೂ ಆಡಿದ್ದರು. ವೀಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದರು. ತಮ್ಮ ಪ್ರತಿಭೆ, ವ್ಯಕ್ತಿತ್ವಕ್ಕೆ ಸರಿಯಾಗಿ ಶೋನ ಫೈನಲ್ ತಲುಪಿದ್ದು ಮಾತ್ರವಲ್ಲ, ರನ್ನರ್ ಅಪ್ ಆಗಿ ಪ್ರಶಸ್ತಿ ಗೆದ್ದಿದ್ದರು. ಈ ಸೀಸನ್‌ನಲ್ಲಿ ಶ್ರೀ ಸಾಮಾನ್ಯನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಒಳ್ಳೆ ಹುಡುಗ ಪ್ರಥಮ್ ಪ್ರಶಸ್ತಿ ಗೆದ್ದಿದ್ದರು. 

ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ಕೀರ್ತಿಯ ಪತ್ನಿ ಅರ್ಪಿತಾ ಸಹ ಟಿಕ್ ಟಾಕ್ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಒಬ್ಬ ಮಗನಿದ್ದಾನೆ.

Follow Us:
Download App:
  • android
  • ios