Asianet Suvarna News Asianet Suvarna News

Sacrilege bid at Golden Temple: ಸಿಖ್‌ ಧರ್ಮಗ್ರಂಥ ಹಾನಿ ಯತ್ನ: ಸ್ವರ್ಣ ಮಂದಿರದಲ್ಲಿ ವ್ಯಕ್ತಿ ಹತ್ಯೆ

*ಗ್ರಂಥಿ ಸಿಖ್ಖರಿಗೆ ಮಾತ್ರ ತೆರೆದಿರುವ ಮೀಸಲು ಪ್ರದೇಶ
*ಸಿಖ್ಖರ ಪವಿತ್ರ ಗ್ರಂಥ ಅಪವಿತ್ರಗೊಳಿಸುವ ಯತ್ನ
*ದೇಗುಲಕ್ಕೆ ನುಗ್ಗಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Youth beaten to death after alleged sacrilege bid at Golden Temple mnj
Author
Bengaluru, First Published Dec 19, 2021, 7:40 AM IST

ಅಮೃತಸರ (ಡಿ. 19): ಅಮೃತಸರದ ಸ್ವರ್ಣಮಂದಿರದ (Golden Temple) ನಿಷಿದ್ಧಿತ ಪ್ರದೇಶಕ್ಕೆ ನುಗ್ಗಿ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹೇಬ್‌ ಅನ್ನು ಅಪವಿತ್ರಗೊಳಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಹತ್ಯೆ ಮಾಡಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಶನಿವಾರ, ಭಕ್ತರ ಪ್ರವೇಏಶಕ್ಕೆ ನಿಷೇಧಿತ ಸ್ಥಳದಲ್ಲಿಟ್ಟಿದ್ದ ಗುರುಗ್ರಂಥ ಸಾಹೇಬ  ಪುಸ್ತಕದ ಮುಂದಿದ್ದ (Guru Granth Sahib) ಚಿನ್ನದ ಖಡ್ಗವನ್ನು ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಅಲ್ಲಿನ ರಕ್ಷಣಾ ಸಿಬ್ಬಂದಿ ಅವನನ್ನು ಹಿಡಿದು ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ( ಎಸ್‌ಜಿಪಿಸಿ)ಕಚೇರಿಗೆ ಒಪ್ಪಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದಂತೆ ಆಕ್ರೋಶಗೊಂಡ ಸ್ಥಳೀಯರು ಎಸ್‌ಜಿಪಿಸಿ ಕಚೇರಿಗೆ ಧಾವಿಸಿದ್ದಾರೆ.

ಈ ಕುರಿತ ವಿಡಿಯೋವೊಂದು ಲಭ್ಯವಾಗಿದ್ದು, ಇದರಲ್ಲಿ ಜನರು ಗೇಟ್‌ ಮುರಿಯಲು ಯತ್ನಿಸುತ್ತಿರುವುದನ್ನು ಹಾಗೂ ಕೆಲವರ ಕೈಯಲ್ಲಿ ಆಯುಧಗಳಿರುವುದನ್ನು ಕಾಣಬಹುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದೇಗುಲಕ್ಕೆ ನುಗ್ಗಿದ್ದ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದು, ತೀವ್ರ ಗಾಯಗೊಂಡ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಹತ್ಯೆಯಾದ ಯುವಕ ಉತ್ತರ ಪ್ರದೇಶದ ಮೂಲದವನೆನ್ನಲಾಗಿದೆ. ಆದರೆ ಇನ್ಯಾವುದೇ ಗುರುತು ಸಿಕ್ಕಿಲ್ಲ. ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಗ್ರಂಥಿ ಸಿಖ್ಖರಿಗೆ ಮಾತ್ರ ತೆರೆದಿರುವ ಮೀಸಲು ಪ್ರದೇಶ!

ಪೋಲೀಸರ ಪ್ರಕಾರ, ರೆಹ್ರಾಸ್ ಸಾಹಿಬ್ ಪಾಥ್ (ಸಂಜೆಯ ಪ್ರಾರ್ಥನೆ) ಸಮಯದಲ್ಲಿ ವ್ಯಕ್ತಿ ಗೋಲ್ಡನ್ ಟೆಂಪಲ್ ಒಳಗೆ ರೇಲಿಂಗ್ ಮೇಲೆ ಹಾರಿದ್ದಾನೆ. ನಂತರ ಅವರು ಕೇವಲ ಗ್ರಂಥಿ ಸಿಖ್ಖರಿಗೆ ಮಾತ್ರ ತೆರೆದಿರುವ ಮೀಸಲು ಪ್ರದೇಶದೊಳಗೆ ಗುರು ಗ್ರಂಥ ಸಾಹಿಬ್ ಮುಂದೆ ಇರಿಸಲಾಗಿದ್ದ ಖಡ್ಗವನ್ನು ಎತ್ತಿಕೊಂಡರು. ಈ ವೇಳೆ ಆ ವ್ಯಕ್ತಿಯನ್ನು ಬಲವಂತಪಡಿಸಿ, ಹೊರಗೆ ಕರೆದೊಯ್ದು ಹತ್ಯೆ ಮಾಡಲಾಯಿತು ಎಂದು ತಿಳಿದುಬಂದಿದೆ. 

ಪಂಜಾಬ್ ಸರ್ಕಾರವು ತಕ್ಷಣವೇ ತನಿಖೆ ನಡೆಸಬೇಕು!

ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (SGPC) ಕಾರ್ಯನಿರ್ವಾಹಕ ಸದಸ್ಯ ಭಾಯಿ ಗುರುಪ್ರೀತ್ ಸಿಂಗ್ ರಾಂಧವಾ ಅವರು ಸಾಮಾಜಿಕ ಮಾಧ್ಯಮದಲ್ಲಿ "ಶ್ರೀ ಅಮೃತಸರ ಸಾಹಿಬ್‌ನಲ್ಲಿ ನಡೆದ ಅಹಿತಕರ ಘಟನೆಯನ್ನು ನಾನು ಖಂಡಿಸುತ್ತೇನೆ, ಪಂಜಾಬ್ ಸರ್ಕಾರವು ತಕ್ಷಣವೇ ತನಿಖೆ ನಡೆಸಬೇಕು" ಎಂದು ಹೇಳಿದ್ದಾರೆ.

 

 

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದಾರೆ. "ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಅವರು ಬೆಂಬಲ ಮತ್ತು ತನಿಖೆಯನ್ನು ಖಚಿತಪಡಿಸಿದ್ದಾರೆ" ಎಂದು ಸಿರ್ಸಾ ಹೇಳಿದ್ದಾರೆ.

ಸಿಖ್ ಜನಸಾಮಾನ್ಯರ ಮನಸ್ಸಿನಲ್ಲಿ ಆಳವಾದ ದುಃಖ!

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರು ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಇದು " ಆಘಾತಕಾರಿ ಮತ್ತು ಅತ್ಯಂತ ನೋವಿನಿಂದ ಕೂಡಿದೆ" ಎಂದು ಬಣ್ಣಿಸಿದ್ದಾರೆ.ಈ ಅಪರಾಧವು ತುಂಬಾ ಖಂಡನೀಯವಾಗಿದೆ ಮತ್ತು ಇದು ಪ್ರಪಂಚದಾದ್ಯಂತ "ಸಿಖ್ ಜನಸಾಮಾನ್ಯರ ಮನಸ್ಸಿನಲ್ಲಿ ಆಳವಾದ ದುಃಖ ಮತ್ತು ಆಕ್ರೋಶವನ್ನು" ಉಂಟುಮಾಡಿದೆ ಎಂದು ಪ್ರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ. 

ಒಬ್ಬ ವ್ಯಕ್ತಿಯಿಂದ "ಮಾನವೀಯತೆಯ ಪವಿತ್ರ ದೇಗುಲದಲ್ಲಿ ಇಂತಹ ನೋವಿನ ಮತ್ತು ಲಜ್ಜೆಗೆಟ್ಟ ಅಪರಾಧ ಎಸಗಬಹುದು" ಎಂದು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಇದರ ಹಿಂದೆ ಆಳವಾಗಿ ಬೇರೂರಿರುವ ಪಿತೂರಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ". ಎಂದು ಹೇಳಿದ್ದಾರೆ. ಕಾಶ್ ಸಿಂಗ್ ಬಾದಲ್ ಅವರು ಇಡೀ ಪಿತೂರಿಯನ್ನು ತನಿಖೆ ಮಾಡಿ  ಬಹಿರಂಗಪಡಿಸಬೇಕಾಗಿದೆ ಮತ್ತು ಅದರ ಹಿಂದೆ ಇರುವವರಿಗೆ ಮಾದರಿ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:

1) ಹಿಂದೂ ಗುರುತಿನ ಚೀಟಿ ಬಳಸಿ ಉಜ್ಜಯಿನಿ ದೇಗುಲ ಪ್ರವೇಶಕ್ಕೆ ಮುಸ್ಲಿಂ ವ್ಯಕ್ತಿ ಯತ್ನ!

2) Sharda Peeth Temple: ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

3) Modi In Varanasi: ಕಾಶಿ ಹಾದಿಯಲ್ಲಿ ಕಾರು ನಿಲ್ಲಿಸಿ ಸ್ಥಳೀಯರು ಕೊಟ್ಟ ಪಗಡಿ, ಶಾಲು ಧರಿಸಿದ ಮೋದಿ!

Follow Us:
Download App:
  • android
  • ios